ಯಾವ ಬೆರಳಿನಿಂದ ಹಣೆಗೆ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ?

ತಿಲಕ ಇಡಲು ಬಹಳಷ್ಟು ಮಂದಿ ಬಲಗೈನ ಉಂಗುರ ಬೆರಳನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತಾ..? ಅಷ್ಟೇ ಅಲ್ಲ… ಇತರೆ ಬೆರಳುಗಳಲ್ಲೂ ಸಹ ತಿಲಕ ಇಟ್ಟುಕೊಳ್ಳಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಏನು ಪ್ರತಿಫಲ ಸಿಗುತ್ತದೆ. ಇಲ್ಲಿದೆ ಬೆರಳೆಣಿಕಿಯೆ ವಿವರಗಳು?

ಯಾವ ಬೆರಳಿನಿಂದ ಹಣೆಗೆ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ?
ಯಾವ ಬೆರಳಿನಿಂದ ಹಣೆಗೆ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ?
Follow us
ಸಾಧು ಶ್ರೀನಾಥ್​
|

Updated on:Sep 20, 2024 | 9:38 AM

ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರ ವಿಚಾರ. ಮಹಿಳೆಯರು ತಮ್ಮ ಗಂಡಂದಿರ ಕ್ಷೇಮಕ್ಕಾಗಿ, ಅವರು ಸೌಖ್ಯವಾಗಿ ಇರಬೇಕೆಂದು ಕುಂಕುಮ ಇಟ್ಟುಕೊಳ್ಳುತ್ತಾರೆ. ಇನ್ನು ಭಕ್ತರು ಪೂಜೆ ಮಾಡುವಾಗ ಕುಂಕುಮ ಇಟ್ಟುಕೊಳ್ಳುತ್ತಾರೆ. ದೇವಾಲಯದಲ್ಲಿ ದೇವರನ್ನು ದರ್ಶಿಸಿಕೊಳ್ಳುವಾಗ ತಿಲಕ ಇಟ್ಟುಕೊಳ್ಳುತ್ತಾರೆ. ಇನ್ನು ಶಿವಭಕ್ತರು ವಿಭೂತಿ ಧರಿಸಿದರೆ, ವಿಷ್ಣು ಭಕ್ತರು ನಾಮ ಧರಿಸುತ್ತಾರೆ. ಅದೇನೇ ಇರಲ್ಲಿ ಎಲ್ಲವೂ ತಿಲಕವಾಗಿಯೇ ಪರಿಗಣಿಸಲಾಗುತ್ತದೆ. ಇನ್ನು ಹಿರಿಯರು ಆಶೀರ್ವದಿಸುತ್ತಾ ಕೆಲವು ಸಂದರ್ಭಗಳಲ್ಲಿ ತಿಲಕ ಇಡುತ್ತಾರೆ. ಹಾಗಾದರೆ ಯಾವ ಬೆರಳಿನಿಂದ ಹಣೆಗೆ ಕುಂಕುಮ/ ತಿಲಕ ಇಟ್ಟುಕೊಂಡರೆ ಯಾವ ರೀತಿಯ ಫಲ ಸಿಗುತ್ತದೆ?

ತಿಲಕ ಇಡಲು ಬಹಳಷ್ಟು ಮಂದಿ ಬಲಗೈನ ಉಂಗುರ ಬೆರಳನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತಾ..? ಅಷ್ಟೇ ಅಲ್ಲ… ಇತರೆ ಬೆರಳುಗಳಲ್ಲೂ ಸಹ ತಿಲಕ ಇಟ್ಟುಕೊಳ್ಳಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಏನು ಪ್ರತಿಫಲ ಸಿಗುತ್ತದೆ. ಇಲ್ಲಿದೆ ಬೆರಳೆಣಿಕಿಯೆ ವಿವರಗಳು?

1. ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿಗ್ರಹದ ಸ್ಥಾನ. ಈ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆ. ಆದಕಾರಣ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಆಯಸ್ಸು ಹೆಚ್ಚುತ್ತದೆ.

Also Read:  Secrets of Gayatri Mantra: ಮನುಷ್ಯನ ಗುಣವೇ ಅಹಂಕಾರ -ನಾನು ಎಂಬ ಅಹಂಕಾರವನ್ನು ದೂರ ಮಾಡುವುದೇ ಸಂಧ್ಯಾವಂದನೆ!

2. ಉಂಗುರದ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮಾನಸಿಕ ಪ್ರಶಾಂತಿ ಉಂಟಾಗುತ್ತದೆ. ಯಾಕೆಂದರೆ ಆ ಬೆರೆಳಿನ ಸ್ಥಾನ ಸೂರ್ಯನದು. ಅವನು ನಮಗೆ ಮಾನಸಿಕ ಶಾಂತಿಯನ್ನು ಉಂಟು ಮಾಡುತ್ತಾನೆ. ಹಾಗಾಗಿ ಈ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮನಸ್ಸು ಪ್ರಶಾಂತವಾಗಿ ಇರುತ್ತದೆ. ಸೂರ್ಯನಲ್ಲಿರುವ ಶಕ್ತಿ ನಮಗೆ ಲಭಿಸುತ್ತದೆ.

3. ಹೆಬ್ಬರಳಿನಿಂದ ತಿಲಕ ಇಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ಲಭಿಸುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಶುಕ್ರನದು. ಅವನು ನಮಗೆ ಬೆಟ್ಟದಷ್ಟು ಶಕ್ತಿ ನೀಡುತ್ತಾನೆ. ವಿಜ್ಞಾನವನ್ನು, ಆರೋಗ್ಯವನ್ನೂ ಸಹ ಉಂಟು ಮಾಡುತ್ತಾನೆ.

4. ತೋರು ಬೆರಳಿನಿಂದ ತಿಲಕ ಇಟ್ಟುಕೊಂಡರೆ ಮೋಕ್ಷ ಲಭಿಸುತ್ತದೆ. ಆ ಬೆರಳಿನ ಸ್ಥಾನ ಗುರು. ಅವನು ಜ್ಞಾನವನ್ನು ಪ್ರಸಾದಿಸುತ್ತಾನೆ. ಮೋಕ್ಷ ಉಂಟು ಮಾಡುತ್ತಾನೆ. ಸಮಸ್ಯೆಗಳಿಂದ ಹೊರಗೆ ಹಾಕುತ್ತಾನೆ.

Also Read:  ಏಳು ಬಜೆಟ್​- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?

5. ನಮ್ಮ ದೇಹದಲ್ಲಿ ಒಟ್ಟು 13 ಜಾಗಗಳಲ್ಲಿ ತಿಲಕ ಇಟ್ಟುಕೊಳ್ಳಬಹುದು. ಆದರೆ ಬಹಳಷ್ಟು ಮಂದಿ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ಯಾಕೆಂದರೆ ಆ ಸ್ಥಾನ ಮಂಗಳನದು. ಅವನಿಗೆ ಕೆಂಪು ಎಂದರೆ ಇಷ್ಟ. ಹಾಗಾಗಿ ಕೆಂಪು ಬಣ್ಣದ ತಿಲಕವನ್ನು ಬಹಳಷ್ಟು ಮಂದಿ ಇಟ್ಟುಕೊಳ್ಳುತ್ತಾರೆ.

ಹಣೆಗೆ ಕುಂಕುಮವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು

1. ಗೋಲಾಕಾರದಲ್ಲಿ ಕುಂಕುಮವನ್ನು ಹಚ್ಚುವುದು : ಇದರಿಂದ ಸ್ತ್ರೀಯರಲ್ಲಿ ದುರ್ಗಾದೇವಿಯ ತತ್ತ್ವವು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ಅವಳ ಶಕ್ತಿಯು ಬಹಳಷ್ಟು ಪ್ರಮಾಣದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಇಂತಹ ಸ್ತ್ರೀಯರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ದುರ್ಗಾದೇವಿಯ ಸಗುಣ ಶಕ್ತಿ ಮತ್ತು ಚೈತನ್ಯವು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.

Also Read: ಹಬ್ಬ ಹರಿದಿನಗಳಲ್ಲಿ ರಂಗೋಲಿ ಮತ್ತು ತೋರಣ ಕಟ್ಟುವುದರ ಮಹತ್ವವೇನು?

2. ಜ್ಯೋತಿಯಂತೆ ಕುಂಕುಮದ ಉದ್ದ ತಿಲಕವನ್ನು ಹಚ್ಚುವುದು : ಇದರಿಂದ ಪುರುಷರಲ್ಲಿ ಶಿವಜ್ಯೋತಿ ಸ್ವರೂಪ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿ, ಅವರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಶಿವನ ನಿರ್ಗುಣ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 4:04 am, Fri, 20 September 24