ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರವಿಲ್ಲ… ಆದರೆ ಈ ಮೂರು ರಾಶಿಗಳ ಮೇಲೆ ಪ್ರಭಾವ

| Updated By: ಆಯೇಷಾ ಬಾನು

Updated on: Mar 25, 2024 | 1:13 PM

2024ರ ಮೊದಲ ಚಂದ್ರಗ್ರಹಣವು ಮಾರ್ಚ್‌ 25ರ ಭಾರತೀಯ ಕಾಲಮಾನ ಬೆಳಿಗ್ಗೆ 10.24 ರಿಂದ ಮಧ್ಯಾಹ್ನ 3.02 ರ ನಡುವೆ ಸಂಭವಿಸುತ್ತದೆ. ಮಧ್ಯಾಹ್ನ 12.44ರ ಸುಮಾರಿಗೆ ಗ್ರಹಣದ ಮಧ್ಯಂತರ ಅವಧಿಯಾಗಿರುತ್ತದೆ. ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರವಾಗುತ್ತಿಲ್ಲ. ಆದರೂ ಈ ಮೂರು ರಾಶಿಗಳ ಮೇಲೆ ಪ್ರಭಾವಬೀರಲಿದೆ.

ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರವಿಲ್ಲ... ಆದರೆ ಈ ಮೂರು ರಾಶಿಗಳ ಮೇಲೆ ಪ್ರಭಾವ
ಚಂದ್ರಗ್ರಹಣ
Follow us on

ಭಾರತದಲ್ಲಿ ಇಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ . ಹೋಳಿ (Holi) ಹಬ್ಬದ ದಿನವೇ, ಫಾಲ್ಗುಣ ಮಾಸದ ಪೂರ್ಣಿಮಾ ತಿಥಿಯಂದು ಚಂದ್ರಗ್ರಹಣ ಸಂಭವಿಸಲಿದೆ. ಹೋಳಿ ಹಬ್ಬದ ದಿನದಂದು ನಡೆಯುವ ಈ ಅಪರೂಪದ ಗ್ರಹಣವನ್ನು ಪೆನುಂಬ್ರಲ್‌ ಚಂದ್ರ ಗ್ರಹಣ ಎಂದೂ ಸಹ ಕರೆಯಲಾಗುತ್ತದೆ (Penumbral Lunar Eclipse). ಇನ್ನು ಈ ಚಂದ್ರಗ್ರಹಣವು ಭಾರತದಲ್ಲಿ ಸಂಭವಿಸುವುದಿಲ್ಲ. ಹೀಗಾಗಿ ಯಾವುದೇ ಆತಂಕ ಅಥವಾ ಪರಿಣಾಮದ ಭಯವಿಲ್ಲ. ಹಾಗೂ ಚಂದ್ರಗ್ರಹಣ ಹಿನ್ನೆಲೆ ಭಾರತೀಯರು ಯಾವುದೇ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ.

2024ರ ಮೊದಲ ಚಂದ್ರಗ್ರಹಣವು ಮಾರ್ಚ್‌ 25ರ ಭಾರತೀಯ ಕಾಲಮಾನ ಬೆಳಿಗ್ಗೆ 10.24 ರಿಂದ ಮಧ್ಯಾಹ್ನ 3.02 ರ ನಡುವೆ ಸಂಭವಿಸುತ್ತದೆ. ಮಧ್ಯಾಹ್ನ 12.44ರ ಸುಮಾರಿಗೆ ಗ್ರಹಣದ ಮಧ್ಯಂತರ ಅವಧಿಯಾಗಿರುತ್ತದೆ.

ಚಂದ್ರಗ್ರಹಣ 2024 ರ ದಿನಾಂಕ ಮತ್ತು ಸಮಯ

  • ಪೂರ್ಣಿಮಾ ತಿಥಿ ಆರಂಭ: 2024 ರ ಮಾರ್ಚ್‌ 24 ರಂದು ಬೆಳಗ್ಗೆ 9:54 ರಿಂದ
  • ಪೂರ್ಣಿಮಾ ತಿಥಿ ಮುಕ್ತಾಯ: 2024 ರ ಮಾರ್ಚ್‌ 25 ರಂದು ಮಧ್ಯಾಹ್ನ 12:29
  • ಚಂದ್ರಗ್ರಹಣದ ಮೊದಲ ಹಂತ ಆರಂಭ: 2024 ರ ಮಾರ್ಚ್‌ 25 ರಂದು ಬೆಳಗ್ಗೆ 10:24 ರಿಂದ
  • ಚಂದ್ರಗ್ರಹಣದ ಗರಿಷ್ಠ ಹಂತ್ರ: 2024 ರ ಮಾರ್ಚ್‌ 25 ರಂದು ಮಧ್ಯಾಹ್ನ 12:43
  • ಚಂದ್ರಗ್ರಹಣದ ಅಂತಿಮ ಹಂತ್ರ: 2024 ರ ಮಾರ್ಚ್‌ 25 ರಂದು ಮಧ್ಯಾಹ್ನ 3:01

ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ?

ಈ ವರ್ಷದ ಮೊದಲ ಚಂದ್ರಗ್ರಹಣ ಅಥವಾ ಕೇತುಗ್ರಸ್ಥ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರಗ್ರಹಣವು ಭಾರತವನ್ನು ಹೊರತುಪಡಿಸಿ ಯೂರೋಪ್​, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕಟಿಕ್‌ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. ರಷ್ಯಾ, ಜರ್ಮನಿ, ಜಪಾನ್​, ಸ್ವಿಡ್ಜರ್​ಲೆಂಡ್​, ನೆದರ್ಲೆಂಡ್​, ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ದಕ್ಷಿಣ ನಾರ್ವೆ, ಇಟಲಿ, ಪೋರ್ಚುಗಲ್, ಉತ್ತರ ಅಥವಾ ಪೂರ್ವ ಏಷ್ಯಾ ಸೇರಿದಂತೆ ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.

ಇದನ್ನೂ ಓದಿ: ಚಿಕಿತ್ಸೆಗೆ ತಕ್ಕಂತೆ ಲಂಚ ಫಿಕ್ಸ್! ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ 

ರಾಶಿಚಕ್ರದ ಚಿಹ್ನೆಗಳ ಮೇಲೆ ಚಂದ್ರಗ್ರಹಣದ ಪರಿಣಾಮ

ಭಾರತದಲ್ಲಿ ಚಂದ್ರಗ್ರಹಣವು ಗೋಚರಿಸದಿದ್ದರೂ, ಅದರ ಖಗೋಳ ಪರಿಣಾಮಗಳು ಈ ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಬೀರಲಿದೆ. ಮೇಷ, ಕರ್ಕ ಮತ್ತು ಕನ್ಯಾ ರಾಶಿಯ ಜನರ ಮೇಲೆ ಚಂದ್ರಗ್ರಹಣ ಪ್ರಭಾವ ಕಂಡುಬರುವ ಸಾಧ್ಯತೆ ಇದೆ. ಈ ರಾಶಿಚಕ್ರ ಚಿಹ್ನೆಗಳೊಂದಿಗೆ ಜನಿಸಿದ ಜನರು ತಮ್ಮ ಜೀವನದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಅವರಿಗೆ ಈ ಸಮಯ ಮಂಗಳಕರವೆಂದು ನಂಬಲಾಗಿದೆ. ಹಣಕಾಸಿನ ಲಾಭ, ಗೌರವ ಹೆಚ್ಚಳ, ಉದ್ಯೋಗಗಳಲ್ಲಿ ಹೊಸ ಅವಕಾಶಗಳು ಮತ್ತು ಅವರ ಜೀವನದಲ್ಲಿ ಇತರ ಸಕಾರಾತ್ಮಕ ಬದಲಾವಣೆಗಳು ಕಾಣಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:12 pm, Mon, 25 March 24