AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024: ಹೋಳಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬೇಡಿ

ಹೋಳಿ ಹಬ್ಬದಂದು ಯಾವ ರೀತಿಯಲ್ಲಿ ಪೂಜೆ ಮಾಡಬೇಕು, ಈ ಸಮಯದಲ್ಲಿ ಯಾವ ಚಟುವಟಿಕೆಗಳನ್ನು ಮಾಡಬಾರದು ಮತ್ತು ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜ್ಯೋತಿಷಿ ಪಂಡಿತ್ ರಾಕೇಶ್ ಪಾಂಡೆ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ನೀವು ಆಚರಿಸುವ ಹೋಳಿ ಹಬ್ಬದಲ್ಲಿ ಹೆಚ್ಚು ಸಂತೋಷ ತರಲು ಇಲ್ಲಿದೆ ಕೆಲವು ಸಲಹೆಗಳು.

Holi 2024: ಹೋಳಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬೇಡಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Mar 24, 2024 | 3:14 PM

Share

ಬಣ್ಣಗಳ ಹಬ್ಬವಾದ ಹೋಳಿಯು ಪರಸ್ಪರ ಪ್ರೀತಿ ಮತ್ತು ಸಂತೋಷವನ್ನು ಹಂಚಿಕೊಳ್ಳುವ ಹಬ್ಬವಾಗಿದ್ದು, ಒಳ್ಳೆಯದಕ್ಕೆ ಯಾವಾಗಲೂ ವಿಜಯವಾಗುತ್ತದೆ ಎಂಬ ಸಂದೇಶವನ್ನು ನೀಡುತ್ತದೆ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿಯ ಜನಪ್ರಿಯತೆಯಿಂದಾಗಿಯೇ ವಿದೇಶಗಳಲ್ಲಿಯೂ ಇದು ಆಚರಣೆಯಲ್ಲಿದೆ. ಹೋಳಿ ಹಬ್ಬದಂದು ಯಾವ ರೀತಿಯಲ್ಲಿ ಪೂಜೆ ಮಾಡಬೇಕು, ಈ ಸಮಯದಲ್ಲಿ ಯಾವ ಚಟುವಟಿಕೆಗಳನ್ನು ಮಾಡಬಾರದು ಮತ್ತು ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜ್ಯೋತಿಷಿ ಪಂಡಿತ್ ರಾಕೇಶ್ ಪಾಂಡೆ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ನೀವು ಆಚರಿಸುವ ಹೋಳಿ ಹಬ್ಬದಲ್ಲಿ ಹೆಚ್ಚು ಸಂತೋಷ ತರಲು ಇಲ್ಲಿದೆ ಕೆಲವು ಸಲಹೆಗಳು.

ಹೋಳಿ ಹಬ್ಬದ ಸಿದ್ಧತೆ ಹೇಗಿರಬೇಕು?

ಹೋಳಿ ಹಬ್ಬದ ದಿನ ಬೆಳಿಗ್ಗೆ ಸ್ನಾನದ ನಂತರ, ಹನುಮಂತ, ಶಿವ ಅಥವಾ ಕೃಷ್ಣನನ್ನು ಪೀಠದ ಮೇಲೆ ಇಟ್ಟು ಪೂಜೆಗೆ ಸಿದ್ಧತೆ ಮಾಡಿ. ದೇವರಿಗೆ ಅಕ್ಕಿ, ಹೂವು, ಶ್ರೀಗಂಧ ಮತ್ತು ತೆಂಗಿನಕಾಯಿ ಇತ್ಯಾದಿ ವಸ್ತುಗಳನ್ನು ಅರ್ಪಿಸಿ ಬಳಿಕ ಆರತಿ ಮಾಡುವ ಮೂಲಕ ಪೂಜಿಸಿ.

ಈ ರೀತಿಯಾಗಿ ಹೋಳಿ ಆಚರಿಸಿ:

ವರ್ಣರಂಜಿತ ಹೋಳಿ ಹಬ್ಬದ ದಿನ, ಹಿರಿಯರು, ಕಿರಿಯರು ಎಲ್ಲರೂ ಸೇರಿ ಹಬ್ಬ ಆಚರಿಸಬೇಕು. ಪರಸ್ಪರ ಪ್ರೀತಿಯಿಂದ ಸಿಹಿತಿಂಡಿ ಮತ್ತು ಬಣ್ಣಗಳನ್ನು ವಿತರಿಸುವ ಸಂಪ್ರದಾಯವನ್ನು ತಪ್ಪದೆ ಪಾಲಿಸಬೇಕು. ಇದು ಪ್ರೀತಿ, ಸಾಮರಸ್ಯ ಮತ್ತು ಅನ್ಯೋನ್ಯತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನಿಮ್ಮ ಆಸೆ ಈಡೇರಬೇಕಾದಲ್ಲಿ ಹೀಗೆ ಮಾಡಿ:

ಹೋಳಿ ಹಬ್ಬದ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದಲ್ಲಿ, ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿ ಸಂಪೂರ್ಣ ಸಂತೋಷವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಚಂದ್ರ ಗ್ರಹಣದ ದಿನ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ

ಹೋಳಿ ಹಬ್ಬದ ಸಮಯದಲ್ಲಿ ಹಸಿರು ಮರಗಳನ್ನು ಸುಡಬೇಡಿ:

ಹಬ್ಬದ ಸಮಯದಲ್ಲಿ ಹಸಿರು ಮರಗಳನ್ನು ಕತ್ತರಿಸುವುದಾಗಲಿ ಅಥವಾ ಸುಡುವುದಾಗಲಿ ಮಾಡಬೇಡಿ. ಈ ರೀತಿ ಮಾಡುವುದನ್ನು ಧಾರ್ಮಿಕ ಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಹಸಿರು ಮರಗಳನ್ನು ಸುಡುವುದು ಪರಿಸರವನ್ನು ಕಲುಷಿತಗೊಳಿಸುತ್ತದೆ ಮತ್ತು ಜ್ಯೋತಿಷ್ಯದ ಪ್ರಕಾರ, ಹಸಿರು ಮರಗಳು ಬುಧ ಗ್ರಹದ ಒಡೆತನದಲ್ಲಿರುತ್ತದೆ. ಹಾಗಾಗಿ ಅವುಗಳನ್ನು ಸುಡುವುದರಿಂದ ವ್ಯಕ್ತಿಗೆ ಅನೇಕ ರೀತಿಯ ರೋಗಗಳು ಮತ್ತು ಜೀವನದಲ್ಲಿ ಕಷ್ಟ ಎರಡನ್ನೂ ಎದುರಿಸಬೇಕಾಗುತ್ತದೆ. ಹೋಲಿಕಾ ದಹನ ಅಥವಾ ಹೋಳಿ ಹಬ್ಬದ ಸಂದರ್ಭದಲ್ಲಿ ಒಣಗಿರುವ ಹಸುವಿನ ಸಗಣಿ ಮತ್ತು ಒಣ ಕಟ್ಟಿಗೆ ಇತ್ಯಾದಿ ಮಾತ್ರ ಸುಡಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು