ಕೊಪ್ಪಳ: ಬಣ್ಣದಾಟಕ್ಕೆ ಬರೆ ಎಳೆದ ಬರ: ಹೋಳಿ ಆಚರಣೆಗೆ ಟ್ಯಾಂಕರ್ ನೀರು ಬಳಕೆ
ಪ್ರತಿವರ್ಷ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಕೂಡ ಕಾಮಧಹನದ ಮಾರನೇ ದಿನ ನಡೆಯುವ ಬಣ್ಣದಾಟ ಸಂಭ್ರಮದಿಂದ ಕೂಡಿರುತ್ತದೆ. ಮಹಿಳೆಯರು, ಮಕ್ಕಳಿಂದ ಹಿಡಿದು ವೃದ್ದರವರಗೆ ಬಣ್ಣದಾಟವನ್ನು ಆಡಿ ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಬಣ್ಣದಾಟಕ್ಕೆ ಬರ ಬರೆ ಎಳದಿದೆ.
ಕೊಪ್ಪಳ, ಮಾರ್ಚ್ 24: ರಾಜ್ಯದಲ್ಲಿ ತೀವ್ರ ಬರ ಎದುರಾಗಿದೆ. ಬೇಸಿಗೆ ಆರಂಭದಲ್ಲಿಯೇ ಅನೇಕ ಕಡೆ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಇನ್ನೊಂದಡೆ ಬರದ ಬರೆ ಹಬ್ಬಗಳ ಮೇಲೆ ಕೂಡ ಪ್ರಭಾವ ಬೀರಿದೆ. ಉತ್ತರ ಕರ್ನಾಟಕದಲ್ಲಿ ಹೋಳಿ (holi) ಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕುಡಿಯುವುದಕ್ಕೆ ಸರಿಯಾಗಿ ನೀರು ಸಿಗದೇ ಇರುವುದರಿಂದ ಬಣ್ಣದಾಟದ ಸಂಭ್ರಮ ಕಡಿಮೆ ಮಾಡಲಾಗಿದೆ. ಇನ್ನೊಂದಡೆ ಬಣ್ಣದಾಟಕ್ಕೆ ಕೂಡ ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಬಣ್ಣದಾಟಕ್ಕೆ ಬರೆ ಎಳೆದ ಬರ
ಪ್ರತಿವರ್ಷ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಕೂಡ ಕಾಮಧಹನದ ಮಾರನೇ ದಿನ ನಡೆಯುವ ಬಣ್ಣದಾಟ ಸಂಭ್ರಮದಿಂದ ಕೂಡಿರುತ್ತದೆ. ಮಹಿಳೆಯರು, ಮಕ್ಕಳಿಂದ ಹಿಡಿದು ವೃದ್ದರವರಗೆ ಬಣ್ಣದಾಟವನ್ನು ಆಡಿ ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಬಣ್ಣದಾಟಕ್ಕೆ ಬರ ಬರೆ ಎಳದಿದೆ. ಪ್ರತಿವರ್ಷ ಬಣ್ಣದಾಟಕ್ಕೆ ಹೆಚ್ಚಿನ ನೀರಿನ ಬಳಕೆಯಾಗುತ್ತಿತ್ತು. ಬ್ಯಾರಲ್ಗಳಲ್ಲಿ ನೀರನ್ನು ತುಂಬಿಸಿ, ಅವುಗಳಿಗೆ ಬಣ್ಣವನ್ನು ಹಾಕಿ, ಬಣ್ಣದ ನೀರನ್ನು ಎರಚಿ ಅನೇಕರು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಕೊಪ್ಪಳ ನಗರ ಸೇರಿದಂತೆ ಹಲವಡೆ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಹೀಗಾಗಿ ಜನರು ಸರಳವಾಗಿ ಬಣ್ಣದಾಟವನ್ನು ಆಡಿದ್ದಾರೆ.
ಬಣ್ಣದಾಟಕ್ಕೆ ಟ್ಯಾಂಕರ್ ನೀರಿನ ಮೊರೆಹೋದ ಜನ
ಕೆಲವರು ಇರುವ ನೀರಲ್ಲಿಯೇ ಬಣ್ಣದಾಟವನ್ನು ಆಡಿದರೆ, ಇನ್ನು ಕೆಲವಡೆ ಬಣ್ಣದಾಟದ ನೀರಿಗೆ ಟ್ಯಾಂಕರ್ ವ್ಯವಸ್ಥೆ ಮಾಡಿಕೊಂಡಿದ್ದರು. ಟ್ಯಾಂಕರ್ ನೀರನ್ನು ತರಿಸಿ, ಬ್ಯಾರಲ್ ತುಂಬಿಸಿ ಬಣ್ಣಹಾಕಿ, ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದ್ದಾರೆ. ಟ್ಯಾಂಕರ್ಗಾಗಿಯೇ ನೂರಾರು ರೂ. ಹಣವನ್ನು ಖರ್ಚು ಮಾಡಿದ್ದಾರೆ. ಇನ್ನು ಬರದ ಹಿನ್ನೆಲೆಯಲ್ಲಿ ಹೋಳಿ ಹುಣ್ಣಿಮೆ ಹಬ್ಬದ ಸಂಭ್ರಮ ಕೂಡ ಕಡಿಮೆಯಾಗಿತ್ತು. ಯಾಕಂದ್ರೆ ಬಣ್ಣ ಆಡಿದ ನಂತರ ಸ್ನಾನಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ.
ಇದನ್ನೂ ಓದಿ: Bengaluru Water Crisis: 24 ಸಾವಿರ ಲೀಟರ್ ಮತ್ತು ಮೇಲ್ಪಟ್ಟ ವಾಟರ್ ಟ್ಯಾಂಕರ್ಗಳಿಗೂ ದರ ನಿಗದಿ
ಪ್ರತಿ ವರ್ಷ ಜಿಲ್ಲೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿತ್ತು, ಕ್ಯಾನಲ್ಗಳಲ್ಲಿ ನೀರು ಇರ್ತಿತ್ತು. ಕೆರೆಕಟ್ಟೆಗಳಲ್ಲಿ ಕೂಡ ನೀರು ಇರ್ತಿತ್ತು. ಆದರೆ ಬೇಸಿಗೆ ಆರಂಭದಲ್ಲಿಯೇ ತುಂಗಭದ್ರಾ ನದಿ ಬತ್ತಿದೆ. ಕ್ಯಾನಲ್ ಗಳಲ್ಲಿ ನೀರು ಇಲ್ಲದೇ ಬಿಕೋ ಅಂತಿವೆ. ಕೆರೆಗಳು ಬರಿದಾಗಿವೆ. ಹೀಗಾಗಿ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಬಹುತೇಕ ಜನರು ಬಣ್ಣದಾಟದಿಂದ ದೂರ ಉಳಿದಿದ್ದಾರೆ. ಕೆಲವರು ಸರಳವಾಗಿ ಪುಡಿ ಬಣ್ಣವನ್ನು ಮುಖಕ್ಕೆ ಹಚ್ಚಿ, ಸರಳವಾಗಿ ಹಬ್ಬ ಆಚರಿಸಿದರೆ ಇನ್ನು ಕೆಲವರು ಟ್ಯಾಂಕರ್ ನೀರನ್ನು ತಂದು, ಬಣ್ಣದಾಟವನ್ನು ಆಡಿ ಸಂಭ್ರಮಿಸಿದರು.
ಇದನ್ನೂ ಓದಿ: ಕಬಿನಿ ಜಲಾಶಯದಿಂದ ನದಿಗೆ 1000 ಕ್ಯೂಸೆಕ್ ನೀರು ಬಿಡುಗಡೆ: ಎಲ್ಲಿಗೆ ಹರಿಯುತ್ತಿದ್ದಾಳೆ ಕಪಿಲೆ?
ಬರಗಾಲದಿಂದ ಈಗಾಗಲೇ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಬಂದಿರುವ ಹೋಳಿ ಹುಣ್ಣಿಮೆ ಮತ್ತು ಬಣ್ಣದಾಟಕ್ಕೆ ಬರದ ಎಫೆಕ್ಟ್ ತಟ್ಟಿದೆ. ಇನ್ನು ಜನರು ಕೂಡ ನೀರಿನ ಅಭಾವ ಇರೋದರಿಂದ, ನೀರನ್ನು ಹಾಳು ಮಾಡದೇ, ಜೀವಜಲವನ್ನು ಉಳಿಸೋ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:42 pm, Sun, 24 March 24