ಕಬಿನಿ ಜಲಾಶಯದಿಂದ ನದಿಗೆ 1000 ಕ್ಯೂಸೆಕ್ ನೀರು ಬಿಡುಗಡೆ: ಎಲ್ಲಿಗೆ ಹರಿಯುತ್ತಿದ್ದಾಳೆ ಕಪಿಲೆ?
ರಾಜ್ಯದೆಲ್ಲೆಡೆ ಸದ್ಯ ಬರ ಆವರಿಸಿದೆ. ಜನರು ಕುಡಿಯುವ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ಕಪಿಲೆ ನದಿಗೆ 1000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಕಪಿಲೆ ತಮಿಳುನಾಡು ಇಲ್ಲಾ ಬೆಂಗಳೂರಿಗೆ ಎಲ್ಲಿಗೆ ಹರಿಯುತ್ತಿದ್ದಾಳೆ ಎಂಬುವ ಪ್ರಶ್ನೆ ಮೂಡಿದೆ.
ಮೈಸೂರು, ಮಾರ್ಚ್ 23: ರಾಜ್ಯದೆಲ್ಲೆಡೆ ಸದ್ಯ ಬರ ಆವರಿಸಿದೆ. ಜನರು ಕುಡಿಯುವ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ (Kabini Reservoir) ದಿಂದ ಕಪಿಲೆ ನದಿಗೆ 1000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಕಪಿಲೆ ತಮಿಳುನಾಡು ಅಥವಾ ಬೆಂಗಳೂರು ಎಲ್ಲಿಗೆ ಹರಿಯುತ್ತಿದ್ದಾಳೆ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಜಲಾಶಯದಿಂದ ಪ್ರತಿನಿತ್ಯ 1 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 66 ಅಡಿಗೆ ನೀರಿನ ಮಟ್ಟ ಕುಸಿದಿದೆ. ಹೀಗಾಗಿ ನೀರಿನ ಪ್ರಮಾಣ ಇದೀಗ ಸಾಕಷ್ಟು ಅನುಮಾನ ಮೂಡಿಸಿದೆ.
ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರಕ್ಕೆ 500 ಕ್ಯೂಸೆಕ್ ಕುಡಿಯುವ ನೀರಿಗೆ ಸಾಕಾಗುತ್ತದೆ. ಆದರೂ ಹೆಚ್ಚುವರಿಯಾಗಿ ಎಲ್ಲಿಗೆ ನೀರು ಹರಿಯುತ್ತಿದೆ ಎಂಬುವುದು ಸದ್ಯದ ಪ್ರಶ್ನೆ ಆಗಿದೆ.
ಇದನ್ನೂ ಓದಿ: ವರ್ಷಕ್ಕೆ ಎರಡು ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯ ಕಬಿನಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿತ
ರಾಜ್ಯದಲ್ಲೆ ಮೊದಲು ತುಂಬುವ ಜಲಾಶಯವೆಂದರೆ ಅದು ಕಬಿನಿ. ವರ್ಷದಲ್ಲಿ ಎರಡು ಬಾರಿ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಕೂಡ ಇದೆ. ಆದರೆ ಈ ಜಲಾಶಯ ಬರಿದಾಗುವ ಲಕ್ಷಣ ಕಾಣುತ್ತಿದೆ. ರಾಜ್ಯದಲ್ಲಿ ಹಾಗೂ ನೆರೆ ರಾಜ್ಯ ಕೇರಳದ ವೈನಾಡು ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆ ಇದೀಗಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಸಂಪೂರ್ಣ ಕುಸಿದಿದೆ.
ಜೊತೆಗೆ ತಮಿಳುನಾಡಿಗೂ ನೀರು ಹರಿಸಿದ ಕಾರಣ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ. ಇದರ ನಡುವೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕುಡಿಯುವ ನೀರಿಗೆ ಪ್ರತಿದಿನ 500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಈ ಕಾರಣದಿಂದ ಸದ್ಯ ಜಲಾಶಯಕ್ಕೆ ಒಳಹರಿವು ಇಲ್ಲದೆ, ದಿನೇ ದಿನೇ ಜಲಾಶಯ ಬರಿದಾಗುತ್ತಿದೆ.
ಇದನ್ನೂ ಓದಿ: ತಾಪಮಾನದಲ್ಲಿ ಗಣನೀಯ ಹೆಚ್ಚಳ; ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗೆ ವಿಶೇಷ ವ್ಯವಸ್ಥೆ
ಒಂದೆರಡು ಅಡಿ ನೀರು ಕಡಿಮೆಯಾದರೆ ಬಲದಂಡೆ ನಾಲೆಯಿಂದ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಒಂದು ವೇಳೆ ಜಾನುವಾರುಗಳಿಗೆ ನೀರು ಬೇಕು ನಾಲೆಗಳಿಗೆ ನೀರು ಹರಿಸಿ ಅಂದರೆ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.