AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರ ಈ ಗುಣಗಳು ಮಹಿಳೆಯರನ್ನು ತೀವ್ರವಾಗಿ ಆಕರ್ಷಿಸುತ್ತವೆ! ಈ ಗುಣಾಭ್ಯಾಸಗಳು ಯಾವುವು ತಿಳಿಯಿರಿ

Chanakaya Niti: ಆಚಾರ್ಯ ಚಾಣಕ್ಯ ಹೇಳುವಂತೆ ತಾಳ್ಮೆ ಮತ್ತು ಶಾಂತ ಸ್ವಭಾವದ ಪುರುಷರತ್ತ ಮಹಿಳೆಯರು ಬಹುಬೇಗ ಆಕರ್ಷಿತರಾಗುತ್ತಾರೆ. ಪುರುಷರ ಈ ಗುಣಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತವೆ. ಅಂತಹ ಜನರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತುಂಬಾ ಒಳ್ಳೆಯವರು. ಅದಕ್ಕಾಗಿಯೇ ಮಹಿಳೆಯರು ಪುರುಷರ ಈ ಗುಣವನ್ನು ಇಷ್ಟಪಡುತ್ತಾರೆ.

ಪುರುಷರ ಈ ಗುಣಗಳು ಮಹಿಳೆಯರನ್ನು ತೀವ್ರವಾಗಿ ಆಕರ್ಷಿಸುತ್ತವೆ! ಈ ಗುಣಾಭ್ಯಾಸಗಳು ಯಾವುವು ತಿಳಿಯಿರಿ
ಪುರುಷರ ಈ ಗುಣಗಳು ಮಹಿಳೆಯರನ್ನು ತೀವ್ರವಾಗಿ ಆಕರ್ಷಿಸುತ್ತವೆ
ಸಾಧು ಶ್ರೀನಾಥ್​
|

Updated on: Mar 26, 2024 | 6:06 AM

Share

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಪುರುಷರ ಕುರಿತು ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮಹಿಳೆಯರು ತುಂಬಾ ಇಷ್ಟಪಡುವ ಪುರುಷರ ನಾಲ್ಕು ಅಭ್ಯಾಸಗಳು ಯಾವುವು ಎಂದು ಅವರು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಪುರುಷರತ್ತ ಹೇಗೆ ಆಕರ್ಷಿತರಾಗುತ್ತಾರೆ ಎಂದು ತಿಳಿಯೋಣ.

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಅನೇಕ ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ಇವುಗಳನ್ನು ಅಳವಡಿಸಿಕೊಂಡರೆ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸರಳ ಮತ್ತು ಸಂತೋಷದಿಂದ ಮಾಡಬಹುದು. ಇದಲ್ಲದೆ ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಪುರುಷರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆಚಾರ್ಯ ಚಾಣಕ್ಯರು ಇಂತಹ ಪುರುಷರ ಬಗ್ಗೆ ಉಲ್ಲೇಖಿಸಿದ್ದಾರೆ…

ಪುರುಷರ ಸರಳ ಸ್ವಭಾವ ಆಚಾರ್ಯ ಚಾಣಕ್ಯ ಹೇಳುವಂತೆ ತಾಳ್ಮೆ ಮತ್ತು ಶಾಂತ ಸ್ವಭಾವದ ಪುರುಷರತ್ತ ಮಹಿಳೆಯರು ಬಹುಬೇಗ ಆಕರ್ಷಿತರಾಗುತ್ತಾರೆ. ಪುರುಷರ ಈ ಗುಣಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತವೆ. ಅಂತಹ ಜನರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತುಂಬಾ ಒಳ್ಳೆಯವರು. ಅದಕ್ಕಾಗಿಯೇ ಮಹಿಳೆಯರು ಪುರುಷರ ಈ ಗುಣವನ್ನು ಇಷ್ಟಪಡುತ್ತಾರೆ.

ಮನುಷ್ಯ ಶ್ರೇಷ್ಠ ವ್ಯಕ್ತಿತ್ವ ಹೊಂದಿರಬೇಕು ಆಚಾರ್ಯ ಚಾಣಕ್ಯ ಅವರು ಹೆಳುವಂತೆ ಮಹಿಳೆಯರನ್ನು ಆಕರ್ಷಿಸುವ ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದೇ ಪುರುಷನ ವ್ಯಕ್ತಿತ್ವ. ಮಹಿಳೆಯರು ಪುರುಷನ ಶ್ರೀಮಂತ ವ್ಯಕ್ತಿತ್ವವನ್ನು ಇಷ್ಟಪಡುತ್ತಾರೆ. ಅಂದರೆ, ಪುರುಷನು ಇತರರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದರ ಬಗ್ಗೆ ಮಹಿಳೆಯರು ಗಮನ ಹರಿಸುತ್ತಾರೆ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ಉತ್ತಮವಾಗಿರಬೇಕು.

ಪುರುಷರು ಧೈರ್ಯವಂತರಾಗಿರಬೇಕು ಮನುಷ್ಯ ಧೈರ್ಯವಂತನಾಗಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಧೈರ್ಯವಿರುವ ಪುರುಷರು ಮಹಿಳೆಯರನ್ನು ಬಹುಬೇಗ ಆಕರ್ಷಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರಿಗೆ ಧೈರ್ಯ ನೀಡುವ ಪುರುಷರನ್ನು ಇಷ್ಟಪಡುತ್ತಾರೆ. ಪುರುಷರು ಅವರ ಗುರಾಣಿಯಾಗಿ ನಿಲ್ಲುತ್ತಾರೆ ಎಂಬ ಭರವಸೆಯಿರುತ್ತದೆ.

ಪುರುಷರಲ್ಲಿ ಅಹಂಕಾರದ ಭಾವನೆ ಇರಬಾರದು ಅಹಂಕಾರವಿಲ್ಲದ ಪುರುಷರು ಮಹಿಳೆಯರನ್ನೂ ಹೆಚ್ಚು ಆಕರ್ಷಿಸುತ್ತಾರೆ. ಆಚಾರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಅಹಂಕಾರವಿಲ್ಲದ ಮತ್ತು ಸರಳ ಸ್ವಭಾವದ ಪುರುಷರನ್ನು ಇಷ್ಟಪಡುತ್ತಾರೆ. ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ವ್ಯಕ್ತಿಯು ಯಾವುದೇ ಅಹಂಕಾರವನ್ನು ಹೊಂದಿರಬಾರದು ಎಂದು ಚಾಣಕ್ಯ ಹೇಳುತ್ತಾರೆ. ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು, ಪುರುಷರು ಅಹಂಕಾರದಿಂದ ದೂರವಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.

Also Read: ಚಾಣಕ್ಯ ನೀತಿ – ಈ ಘಟನೆಗಳು ಪ್ರತಿಯೊಬ್ಬರ ಜೀವನವನ್ನೂ ಬದಲಾಯಿಸುತ್ತದೆ.. ಅದು ಒಳ್ಳೆಯದೂ ಆಗಬಹುದು ಅಥವಾ ವಿಪತ್ತೂ ಆಗಿರಬಹುದು!

ಚಾಣಕ್ಯ ನೀತಿ ಕುರಿತಾದ ಲೇಖನಗಳನ್ನುಓದಲ್ಲು ಇಲ್ಲಿ ಕ್ಲಿಕ್ ಮಾಡಿ