ಹಬ್ಬಗಳ ಸಮಯವೆಂದರೆ ರುಚಿಕಟ್ಟಾದ ತಿಂಡಿ-ತಿನಿಸುಗಳನ್ನು ಸವಿಯುವ, ಶಾಪಿಂಗ್ ಮಾಡುವ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಂಧು-ಮಿತ್ರರೊಂದಿಗೆ ಬೆರೆಯುವ ಸಂಭ್ರಮ. ಕುಟುಂಬದ ಸದಸ್ಯರು ಹಾಗೂ ಮಿತ್ರರೊಂದಿಗೆ ಹಬ್ಬಗಳನ್ನು ಆಚರಿಸಿದಾಗ ನಮ್ಮ ಆನಂದ-ಉಲ್ಲಾಸಗಳು ನೂರ್ಮಡಿಯಾಗುವುವು. ಅನೇಕ ಅತಿಥಿಗಳು ಆಗಮಿಸುವುದರಿಂದ ವಾರ್ಡ್‌ರೋಬ್‌ಗಳು ಹಾಗೂ ಇತರ ಅಲಂಕಾರಗಳನ್ನು ಅತ್ಯಾಕರ್ಷಗೊಳಿಸುವ ಗುರಿಯತ್ತ ನಿಮ್ಮ ಶ್ರೇಷ್ಠ ಪ್ರಯತ್ನ ಇರುತ್ತದೆ. ಇಷ್ಟಕ್ಕೂ “ನಿಮ್ಮ ಮನೆ ಬಹಳ ಸುಂದರವಾಗಿದೆ” ಎನ್ನುವ ಹೊಗಳಿಕೆಯ ನುಡಿಗಳಂತೂ ಎಲ್ಲರ ಕಿವಿಗಳಿಗೆ ಮಧುರ ಸಂಗೀತದಂತೆಯೇ ಕೇಳಿಸುತ್ತದೆ. ಇದನ್ನು ಕೇಳಲೆಂದೇ ಅಲ್ಲವೇ ಎಲ್ಲರೂ ತಮ್ಮ-ತಮ್ಮ ಮನೆಗಳನ್ನು ಸುಂದರವಾಗಿ ಅಲಂಕರಿಸುವ ಗಂಭೀರ ಪ್ರಯತ್ನ ಮಾಡುವುದು? ಜನರಿಂದ ಹೊಗಳಿಕೆ ಗಳಿಸುವುದು ನಿಜಕ್ಕೂ ಕಠಿಣವಾದ ಕಾರ್ಯವೇ ಸರಿ. ಆದರೆ, ಈ ದೀಪಾವಳಿಯ ಸಮಯದಲ್ಲಿ ಅದಕ್ಕಾಗಿ ನೀವೇನೂ ಹೆಚ್ಚು ಶ್ರಮ ಪಡಬೇಕಿಲ್ಲ. ಓರಿಯೆಂಟ್ ಎಲೆಕ್ಟ್ರಿಕ್‌ನ (Orient Electric) ಹೊಸ ಜಾಯ್‌ಲೈಟ್ ಶ್ರೇಣಿಯ ಫೆಸ್ಟಿವ್ ಲೈಟ್‌ಗಳಿಗೇ (Orient Joylite Lights) ಈ ಎಲ್ಲಾ ಶ್ರೇಯಸ್ಸು ಸಲ್ಲುತ್ತದೆ.
ಈ ಜಾಯ್‌ಲೈಟ್ ಫೆಸ್ಟಿವ್ ಲೈಟ್‌ಗಳ ಶ್ರೇಣಿಯು ತನ್ನ ಕಣ್ಣು ಕೋರೈಸುವ ಬೆಳಕಿಗೆ, ಕಡಿಮೆ ವಿದ್ಯುತ್ ಬಳಕೆಗೆ, ಹಾಗೂ ಕಂಟ್ರೋಲರ್ ಅಡಾಪ್ಟರ್‌ಗಳಿಗೆ ಹೆಸರಾಗಿದೆ. ಭಾರತದಲ್ಲೇ ತಯಾರಾಗುವ ಈ ಲೈಟ್‌ಗಳು ವಿವಿಧ ಆಕಾರಗಳಲ್ಲಿ, ಗಾತ್ರಗಳಲ್ಲಿ, ಬಣ್ಣಗಳಲ್ಲಿ, ಹಾಗೂ ಅಳತೆಗಳಲ್ಲಿ ಸಿಗುತ್ತವೆ. ದೀಪಾವಳಿ ಹಬ್ಬವು ಬಹಳ ಹತ್ತಿರದಲ್ಲೇ ಇರುವುದರಿಂದ, ನಿಮ್ಮ ಮನೆಯನ್ನು ಸುಂದರಗೊಳಿಸಲು ನೀವು ಪರಿಗಣಿಸಬಹುದಾದ ಕೆಲ ಟಿಪ್ಸ್‌ಗಳು ಇಲ್ಲಿವೆ.
ಪ್ರವೇಶ ದ್ವಾರ
ಮೊದಲ ಅನಿಸಿಕೆಯೇ ಕೊನೆಯ ಹಾಗೂ ಅತ್ಯುತ್ತಮ ಅನಿಸಿಕೆಯಲ್ಲವೇ? ನಿಮ್ಮ ಪ್ರವೇಶ ದ್ವಾರವು ನಿಮ್ಮ ಅತಿಥಿಗಳ ಮನದಲ್ಲಿ ಮರೆಯಲಾಗದ ಛಾಪನ್ನು ಮೂಡಿಸುವುದು, ಹೀಗಾಗಿ, ನಿಮ್ಮ ಅಲಂಕಾರಿಕ ವಸ್ತುಗಳ ಆಯ್ಕೆಯ ಮೇಲೆ ನಿಮ್ಮ ಸಂಪೂರ್ಣ ಗಮನವಿರಲಿ. ನಳನಳಿಸುವ ಹೂವುಗಳೊಂದಿಗೆ ಅಲಂಕಾರಿಕ ವಿದ್ಯುದ್ದೀಪಗಳು ಮತ್ತು ಹಣತೆಯ ದೀಪಗಳು ಹಾಗೂ ಬೆಳಗುವ ಕ್ಯಾಂಡಲ್‌ಗಳು ಅತಿಥಿಗಳನ್ನು ಬೇರೆಯದೇ ಆದ ಲೋಕಕ್ಕೆ ಕರೆದೊಯ್ಯಲಿವೆ. ಓರಿಯೆಂಟ್ ಎಲೆಕ್ಟ್ರಿಕ್‌ನ ಕೊಡುಗೆಯಾಗಿರುವ ಕರ್ಟನ್ ಲೈಟ್‌ಗಳ ಶ್ರೇಣಿಯು ನಿಮ್ಮ ಪ್ರಯತ್ನವನ್ನು ಅತ್ಯಂತ ಸರಳಗೊಳಿಸಲಿವೆ.
ನಿಮ್ಮ ಪೂಜಾಗೃಹವನ್ನು ಬೆಳಗಿಸಿ
ನಿಮ್ಮ ಪೂಜಾ ಕೋಣೆಗೆ ಹೊಳಪನ್ನು ನೀಡಲು ನಿಮಗೆ ಸಾಕಷ್ಟು ಸಮಯವಿಲ್ಲದಿದ್ದರೆ, ಡಿಸೈನರ್ ಲೈಟ್‌ಗಳು ಈ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಲಿವೆ. ಸಾಮಾನ್ಯವಾದ ಥ್ರೆಡ್ ಲೈಟ್‌ಗಳನ್ನು ಆರಿಸಿಕೊಳ್ಳುವ ಬದಲಿಗೆ ಓರಿಯೆಂಟ್ ಎಲೆಕ್ಟ್ರಿಕ್‌ನ ದಿಯಾ ಕರ್ಟನ್ ಅಥವಾ ಗಣಪತಿ ಮತ್ತು ಸ್ವಸ್ತಿಕಗಳಿರುವ ವಿಶೇಷ ವಿನ್ಯಾಸದ ಕರ್ಟನ್‌ಗಳನ್ನು ಆರಿಸಿಕೊಳ್ಳಿ. ಇವು ಸುತ್ತಲಿನ ವಾತಾವರಣವನ್ನು ಬೆಳಗುವುದರ ಜೊತೆಗೆ ಸುಂದರ ವಿನ್ಯಾಸದ ಸ್ಪರ್ಶವನ್ನೂ ಸಹ ನೀಡುತ್ತವೆ.
ಬಾಲ್ಕನಿಗೆ ವಿಶೇಷ ಗಮನ ಅತ್ಯಗತ್ಯ
ಬಾಲ್ಕನಿಗಳು ವಿಶಾಲವಾಗಿದ್ದು ಸೂಕ್ತ ಅಲಂಕಾರಗಳಿಂದ ಹಾಗೂ ದೀಪಗಳಿಂದ ಅಲಂಕೃತವಾಗಿದ್ದಲ್ಲಿ ಎಲ್ಲರ ಕಣ್ಮನ ಸೂರೆಗೊಳ್ಳುತ್ತವೆ. ಅಲಂಕಾರಿಕ ಸಸ್ಯಗಳು ಹಾಗೂ ವಿಂಡ್ ಷೈಮ್ಸ್‌ಗಳೊಂದಿಗೆ ಸುಖಾಸೀನಗಳ ವ್ಯವಸ್ಥೆಯೂ ಇದ್ದಲ್ಲಿ, ನೀವು ಕೆಲ ಮನಮೋಹಕ ಲೈಟ್‌ಗಳನ್ನು ಆರಿಸಿಕೊಳ್ಳಬಹುದು. ವರ್ಣರಂಜಿತ ಅಥವಾ ಹಳದಿ ಬಣ್ಣದ ತೂಗುದೀಪಗಳಂತೂ ಕಡ್ಡಾಯವಾಗಿ ಕೊಳ್ಳಲೇಬೇಕಾದಂತಹ ಲೈಟ್‌ಗಳು. ಇದರೊಂದಿಗೆ, ಬಾಲ್ ಲೈಟ್ ಕರ್ಟನ್‌ಗಳು ಬಾಲ್ಕನಿಗಳಿಗೆ ಹೇಳಿ ಮಾಡಿಸಿದಂತಹವು. ಬಾಲ್ಕನಿಯು ವಿಶಾಲವಾಗಿದ್ದರೆ, ನೀವು ಓರಿಯೆಂಟ್ ಎಲೆಕ್ಟ್ರಿಕ್‌ನ ಜಾಯ್‌ಲೈಟ್ ಫೆಸ್ಟಿವ್ ಲೈಟ್‌ಗಳ ಶ್ರೇಣಿಯ ಕ್ರಿಸ್ಟಲ್ ಎಲ್‌ಇಡಿ ಟೊರಾನ್ ಲೈಟ್‌ಗಳನ್ನು ಆರಿಸಿಕೊಳ್ಳಬಹುದು.
ಕಲಾತ್ಮಕವಾದ ಸ್ಥಳವೊಂದನ್ನು ಬಯಸುತ್ತಿದ್ದೀರಾ?
ನಿಮ್ಮ ಮನೆಯು ಅತ್ಯಾಕರ್ಷಕವಾಗಿ ಕಲಾವಿದನ ಕುಂಚದಿಂದ ಹೊರಬಂದ ಸುಂದರ ಕೃತಿಯಂತೆಯೇ ಇರಬಹುದು, ಆದರೆ ಅದು ಚಿತ್ರಗಳನ್ನು ಪ್ರದರ್ಶಿಸಲು ಒಂದು ಸುಂದರವಾದ ಹಾಗೂ ಕಲಾತ್ಮಕವಾದ ಸ್ಥಳವನ್ನು ಹೊಂದಿರಲೇಬೇಕಲ್ಲವೇ? ಇನ್‌ಸ್ಟಾಗ್ರಾಮ್ ಚಿತ್ರಗಳನ್ನು ಪ್ರದರ್ಶಿಸಲು ಬಳಸುವ ಸ್ಥಳಕ್ಕೆ ತೆಳುವಾದ ಕಂದು ಬಣ್ಣದ ಲೈಟ್‌ಗಳು ಉತ್ತಮವಾದ ಆಯ್ಕೆಯಾಗಿವೆ. ನವಿರಾದ ಬಣ್ಣದ ಸ್ಪರ್ಶ ಬೇಕಿದ್ದಲ್ಲಿ, ಒಂದು ರೋಪ್ ಲೈಟ್ ಬಳಸಬಹುದು.
ಮುಗಿಸುವ ಮುನ್ನ: ಆನ್‌ಲೈನ್‌ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಕೊಳ್ಳುವಾಗ ಓರಿಯೆಂಟ್ ಎಲೆಕ್ಟ್ರಿಕ್‌ನ ಜಾಯ್‌ಲೈಟ್ ಫೆಸ್ಟಿವ್ ಲೈಟ್‌ಗಳನ್ನು ನಿಮ್ಮ ಶಾಪಿಂಗ್ ಪಟ್ಟಿಗೆ ಸೇರಿಸಲು ಮರೆಯದಿರಿ. ಬಿಐಎಸ್‌ನಿಂದ ಅನುಮೋದನೆ ಪಡೆದಿರುವ ಈ ಲೈಟ್‌ಗಳು ಭಾರತದಲ್ಲೇ ತಯಾರಾಗಿದ್ದು 6 ತಿಂಗಳ ವಾರಂಟಿಯನ್ನು ಹೊಂದಿವೆ. ಇವು ಎಲ್ಲಾ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲೂ ಮತ್ತು ನಿಮ್ಮ ಸಮೀಪದ ಎಲೆಕ್ಟ್ರಿಕಲ್ ಅಂಗಡಿಗಳಲ್ಲೂ ದೊರೆಯುತ್ತವೆ.
Published On - 6:56 pm, Mon, 10 October 22