ಷೇರುಗಳ ಮರುಖರೀದಿ (ಬೈಬ್ಯಾಕ್) ಪ್ರಕ್ರಿಯೆ ಎಂದರೇನು? ಷೇರುಗಳನ್ನು ಕಂಪನಿಗಳಿಗೆ ಹಿಂದಿರುಗಿಸಿ ಹೆಚ್ಚು ಲಾಭ ಗಳಿಸುವುದು ಹೇಗೆ?
ಷೇರುಗಳ ಬೈಬ್ಯಾಕ್ ಪ್ರಕ್ರಿಯೆ (ಮರುಖರೀದಿ) ಹಾಗೂ ಅದರಿಂದ ಹಣ ಗಳಿಸುವ ಬಗ್ಗೆ ತಿಳಿದಿರಬೇಕಾದ ಮುಖ್ಯ ಸಂಗತಿಗಳು ಇಲ್ಲಿವೆ.
ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ ಅನುಭವ ನಿಮಗಿದ್ರೆ ನೀವು “ಬೈಬ್ಯಾಕ್” ಅನ್ನೋ ಪದವನ್ನ ಕೇಳಿಯೇ ಇರ್ತೀರಿ. ಆದರೆ, ಅದರಿಂದ ಒಳ್ಳೆಯ ಲಾಭ ಗಳಿಸೋದು ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನು ಯಾವಗಲಾದ್ರೂ ಕಾಡಿದೆಯೇ? ಸರಿ ಹಾಗಾದ್ರೆ, ಅದರ ಸೂಕ್ಷ್ಮಗಳನ್ನು ನೀವು ತಿಳ್ಕೋಬೇಕು ಅಂದ್ರೆ ಓದೋದನ್ನು ಮುಂದುವರೆಸಿ.
ಬೈಬ್ಯಾಕ್ಅಥವಾ ಮರುಖರೀದಿ: ಈ ಬೈಬ್ಯಾಕ್ಅನ್ನೋದು ಐಪಿಓದ ವಿರುದ್ಧಾರ್ಥಕ ಪದ ಅಲ್ಲದೇ ಬೇರೇನೂ ಅಲ್ಲ. ಕಂಪನಿಯೊಂದು ಸಾರ್ವಜನಿಕರಿಗೆ ತನ್ನ ಷೇರುಗಳನ್ನು ನೀಡುವುದೇ ಐಪಿಓ. ಆದರೆ, ಕಂಪನಿಯೊಂದು ತನ್ನದೇ ಷೇರುಗಳನ್ನು ತನ್ನ ಷೇರುದಾರರಿಂದಲೇ ಮರುಖರೀದಿಸುವುದನ್ನು ಬೈಬ್ಯಾಕ್ಎನ್ನಲಾಗುತ್ತೆ.
ಬೈಬ್ಯಾಕ್ನ ವಿಧಗಳು: ಕಂಪನಿಯೊಂದು ತನ್ನದೇ ಷೇರುಗಳನ್ನು ತನ್ನ ಷೇರುದಾರರಿಂದಲೇ ಬೈಬ್ಯಾಕ್ ಮಾಡಲು ಎರಡು ವಿಧಾನಗಳಿವೆ. ಅವುಗಳಲ್ಲೊಂದು ಟೆಂಡರ್ ಆಫರ್ ಮೂಲಕ ಕೊಳ್ಳುವುದು, ಇನ್ನೊಂದು ಮುಕ್ತ ಮಾರುಕಟ್ಟೆಯಿಂದ ಕೊಳ್ಳುವುದು. ಟೆಂಡರ್ ಆಫರ್ ವಿಧಾನದಲ್ಲಿ ಕಂಪನಿಯೊಂದು ತನ್ನದೇ ಷೇರುಗಳನ್ನು ತನ್ನ ಷೇರುದಾರರಿಂದ ನಿಗದಿತ ಬೆಲೆಯಲ್ಲಿ ಹಾಗೂ ನಿಗದಿತ ಸಮಯದೊಳಗೆ ಬೈಬ್ಯಾಕ್ ಮಾಡುತ್ತದೆ. ಈ ದರವನ್ನು ಒಂದು ನಿಗದಿತ ಅನುಪಾತದಲ್ಲಿ ನಿರ್ಧರಿಸಲಾಗುತ್ತದೆ.
ಅದೇ ಮುಕ್ತ ಮಾರುಕಟ್ಟೆಯಿಂದ ಷೇರುಗಳನ್ನು ಮರುಖರೀದಿಸುವ ವಿಷಯಕ್ಕೆ ಬಂದರೆ, ಅದರ ಪ್ರಕ್ರಿಯೆ ಹೀಗಿರುತ್ತದೆ. ದೇಶವ್ಯಾಪಿ ಟ್ರೇಡಿಂಗ್ ಮಿಲ್ಗಳನ್ನು ಹೊಂದಿರುವ ಷೇರು ವಿನಿಮಯ ಕೇಂದ್ರಗಳಿಂದ ಆರ್ಡರ್ ರ್ಮ್ಯಾಚಿಂಗ್ ವಿಧಾನದ ಮೂಲಕ ಕಂಪನಿಯು ತನ್ನದೇ ಷೇರುಗಳನ್ನು ಮರುಖರೀದಿಸುತ್ತದೆ.
ಬೈಬ್ಯಾಕ್ ಆಫರ್ ಪ್ರೈಸಸ್ (ನೀಡಿಕೆಯ ದರ): ಇದು ಟೆಂಡರ್ ಆಫರ್ ಮೂಲಕ ತನ್ನದೇ ಷೇರುಗಳನ್ನು ತನ್ನ ಷೇರುದಾರರಿಂದಲೇ ಮರುಖರೀದಿಸಲು ಕಂಪನಿಯು ನೀಡಬಯಸುವ ಬೆಲೆ. ತಮ್ಮ ಷೇರುಗಳನ್ನು ಬೈಬ್ಯಾಕ್ ಮಾಡಬಯಸುವ ಕಂಪನಿಗಳ ಬಗ್ಗೆ ತಿಳಿಯಲು ನೀವು 5Paisa ಗಳಂತಹ (httpshttps://bit.ly/3RreGqO://https://bit.ly/3RreGqObithttps://bit.ly/3RreGqO.https://bit.ly/3RreGqOlyhttps://bit.ly/3RreGqO/3https://bit.ly/3RreGqORreGqO) ಪ್ರತಿಷ್ಠಿತ ಪ್ಲಾಟ್ಫಾರ್ಮ್ಗಳ ಸಹಾಯ ಪಡೆದುಕೊಳ್ಳಬಹುದು. 5Paisa ಮೂಲಕ, ನೀವು ನಿಮ್ಮ ಷೇರುಪೇಟೆಯ ಪ್ರಯಾಣವನ್ನು ಆರಂಭಿಸಲು ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನೂ ಪಡೆಯಬಹುದು. ಸಾಮಾನ್ಯವಾಗಿ, ಸಂಬಂಧಪಟ್ಟ ಷೇರುಗಳು ಆ ಸಮಯದಲ್ಲಿ ಷೇರುಪೇಟೆಯಲ್ಲಿ ವ್ಯವಹರಿಸಲ್ಪಡುತ್ತಿರುವ ಬೆಲೆಗಿಂತಲೂ ನೀಡಿಕೆಯ ದರವು (ಆಫರ್ ಪ್ರೈಸಸ್) ಹೆಚ್ಚಾಗಿರುತ್ತದೆ.
ಮುಕ್ತ ಮಾರುಕಟ್ಟೆಯಿಂದ ಕೊಳ್ಳುವ ಪ್ರಕ್ರಿಯೆಯಲ್ಲಿ, ಷೇರುಪೇಟೆಯಲ್ಲಿ, ಆ ಸಮಯದಲ್ಲಿ ಇರುವ ಷೇರಿನ ಬೆಲೆಯಿಂದ ತಾನು ಕೊಳ್ಳಬಯಸುವ ಬೆಲೆಯವರೆಗಿನ ಒಂದು ಬೆಲೆಯಲ್ಲಿ ಕಂಪನಿಯು ತನ್ನ ಷೇರುಗಳನ್ನು ಮರುಖರೀದಿಸುತ್ತದೆ.
ಸಣ್ಣ ಹೂಡಿಕೆದಾರರಿಗೆ ಷೇರುಗಳನ್ನು ಕಾದಿರಿಸುವಿಕೆ: ಭಾರತದ ಸೆಕ್ಯುರಿಟೀಸ್ ಮತ್ತು ವಿನಿಮಯ ಮಂಡಳಿಯು (ಸೆಬಿ) ಬೈಬ್ಯಾಕ್ ಆಫರ್ಗಳನ್ನು ನೀಡುವ ಕಂಪನಿಗಳು ದಾಖಲೆಯ ದಿನಾಂಕದಂದು ಸಣ್ಣ ಹೂಡಿಕೆದಾರರಿಗೆಂದೇ ಶೇ 15ರಷ್ಟು ಷೇರುಗಳನ್ನು ಕಾದಿರಿಸುವುದನ್ನು ಕಡ್ಡಾಯಗೊಳಿಸಿದೆ.
ಎನ್ಟೈಟಲ್ಮೆಂಟ್ ರೇಷಿಯೋ (ಸ್ವಾಧೀನತೆಯ ಅನುಪಾತ): ಇದು ಬೈಬ್ಯಾಕ್ ಪ್ರಕ್ರಿಯೆಯಲ್ಲಿ ಸಣ್ಣ ಹೂಡಿಕೆದಾರನೊಬ್ಬನು ತಾನು ಹೊಂದಿರುವ ಷೇರುಗಳಲ್ಲಿ ಕಂಪನಿಗೆ ಹಿಂದಿರುಗಿಸಲು ಬಯಸುವ ಷೇರುಗಳ ಸಂಖ್ಯೆಗೂ ಹಾಗೂ ಎಲ್ಲಾ ಸಣ್ಣ ಹೂಡಿಕೆದಾರರ ವರ್ಗವು ಒಟ್ಟಾಗಿ ಹೊಂದಿರುವ ಕಂಪನಿಯ ಷೇರುಗಳಿಗೂ ಇರುವ ಅನುಪಾತ.
ಆಫರ್ ಮುಕ್ತಾಯಗೊಳ್ಳುವ ಸಮಯಕ್ಕೆ ಹೂಡಿಕೆದಾರರು ಹಿಂದಿರುಗಿಸಲು ಬಯಸಿರುವ ಒಟ್ಟು ಷೇರುಗಳ ಸಂಖ್ಯೆಯನ್ನು ಸಣ್ಣ ಹೂಡಿಕೆದಾರರ ಒಟ್ಟು ಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಲೆಕ್ಕ ಹಾಕಲಾಗುವುದು. ಸಣ್ಣ ಹೂಡಿಕೆದಾರರು ತಮ್ಮ ಬಳಿ ಇರುವ ಎಲ್ಲಾ ಷೇರುಗಳನ್ನ ಹಿಂದಿರುಗಿಸಬಹುದಾದರೂ ಕಂಪನಿಯು ಅವೆಲ್ಲವನ್ನೂ ಕೊಳ್ಳಲೇಬೇಕೆಂಬ ನಿಯಮವೇನೂ ಇಲ್ಲ.
ಅಕ್ಸೆಪ್ಟೆನ್ಸ್ ರೇಷಿಯೋ (ಒಪ್ಪಿಗೆಯ ಅನುಪಾತ): ಹೂಡಿಕೆದಾರನು ಹಿಂದಿರುಗಿಸಲು ಬಯಸುವ ಷೇರುಗಳ ಒಟ್ಟು ಸಂಖ್ಯೆಗೆ ಪ್ರತಿಯಾಗಿ ಕಂಪನಿಯು ಎಷ್ಟನ್ನು ಕೊಳ್ಳಲು ಒಪ್ಪುವುದೋ ಅದನ್ನು ಅಕ್ಸೆಪ್ಟೆನ್ಸ್ ರೇಷಿಯೋ ಎನ್ನಲಾಗುತ್ತೆ.
ಹಣ ಗಳಿಕೆ: ಸಣ್ಣ ಹೂಡಿಕೆದಾರರು ಇಂತಹ ಬೈಬ್ಯಾಕ್ ಅವಕಾಶಗಳನ್ನು ಬಳಸಿಕೊಂಡು ಷೇರುಗಳನ್ನು ಹಿಂದಿರುಗಿಸಿ ಹಣ ಗಳಿಸಬಹುದು ಅಥವಾ ನೀಡಿಕೆಯ ದರಕ್ಕಿಂತಲೂ (ಆಫರ್ ಪ್ರೈಸಸ್) ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹೊಸ ಷೇರುಗಳನ್ನೂ ಕೊಳ್ಳುವ ಮೂಲಕವೂ ಲಾಭ ಗಳಿಸಬಹುದು. ಕಂಪನಿಗಳು ತಮ್ಮ ನೀಡಿಕೆಯ ಬೆಲೆಯಲ್ಲಿ (ಆಫರ್ ಪ್ರೈಸಸ್) ಎಷ್ಟು ಹೆಚ್ಚು ಪ್ರಮಾಣದ ಷೇರುಗಳನ್ನು ಹಿಂಪಡೆಯುತ್ತವೋ, ಅಷ್ಟೂ ಹೆಚ್ಚಿನ ಪ್ರಮಾಣದ ಲಾಭ ಷೇರುದಾರರಿಗೆ ಸಿಗುತ್ತದೆ.
ಪ್ರಮುಖ ದಿನಾಂಕಗಳು: ಟೆಂಡರ್ ಆಫರ್ ಮೂಲಕ ಬೈಬ್ಯಾಕ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೂಡಿಕೆದಾರನಿಗೆ ಇರಬೇಕಾದ ಅರ್ಹತೆಯೆಂದರೆ, ಕಂಪನಿಯು ಬೈಬ್ಯಾಕ್ ಪ್ರಕ್ರಿಯೆಗಾಗಿ ದಾಖಲಾತಿಯ ದಿನಾಂಕವನ್ನು ಘೋಷಿಸುವ ಮುಂಚೆಯೇ ಅವನು ಕಂಪನಿಯ ಷೇರುಗಳನ್ನು ಹೊಂದಿರಬೇಕು
ಬೈಬ್ಯಾಕ್ ಪ್ರಕ್ರಿಯೆಯ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನೀವು 5Paisa :httpshttps://bit.ly/3RreGqO://https://bit.ly/3RreGqObithttps://bit.ly/3RreGqO.https://bit.ly/3RreGqOlyhttps://bit.ly/3RreGqO/3https://bit.ly/3RreGqORreGqO) ಜಾಲತಾಣವನ್ನು ಸಂದರ್ಶಿಸಬಹುದು.
Published On - 10:00 am, Wed, 23 November 22