105ನೇ ವಯಸ್ಸಿನಲ್ಲೂ ಮಾಸದ ಚೈತನ್ಯ; 100 ಮೀ. ಓಟದಲ್ಲಿ ದಾಖಲೆ ಬರೆದ ಶತಾಯುಷಿ ಅಜ್ಜಿ..!

ರಾಂಬಾಯಿ ಅವರ ಇಡೀ ಕುಟುಂಬ ಕ್ರೀಡೆಯಲ್ಲಿ ಹೆಸರು ಮಾಡಿದೆ. ಅವರ ಪುತ್ರಿ ಸಂತಾರಾ ದೇವಿ (62) ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರಾಂಬಾಯಿ ಅವರ ಪುತ್ರ 70 ವರ್ಷದ ಮುಖ್ತಿಯಾರ್ ಸಿಂಗ್ 200 ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

105ನೇ ವಯಸ್ಸಿನಲ್ಲೂ ಮಾಸದ ಚೈತನ್ಯ; 100 ಮೀ. ಓಟದಲ್ಲಿ ದಾಖಲೆ ಬರೆದ ಶತಾಯುಷಿ ಅಜ್ಜಿ..!
ಶತಾಯುಷಿ ಅಜ್ಜಿ ರಾಂಬಾಯಿ
Follow us
TV9 Web
| Updated By: ಪೃಥ್ವಿಶಂಕರ

Updated on: Jun 22, 2022 | 4:23 PM

ದೃಢ ಮನಸ್ಸಿನ ವ್ಯಕ್ತಿಗೆ ಹಿಮಾಲಯವೂ ಚಿಕ್ಕದಾಗಿ ಕಾಣಿಸುತ್ತದೆ ಎಂಬ ನಾಣ್ನುಡಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಈ ಮಾತನ್ನು ಹರಿಯಾಣದ ಅಜ್ಜಿಯೊಬ್ಬರು ಈಡೇರಿಸಿದ್ದು , ಹರಿಯಾಣ (Haryana)ದ ಕದ್ಮಾ ಗ್ರಾಮದ ರಾಂಬಾಯಿ ಹೊಸ ದಾಖಲೆ (record) ಬರೆದಿದ್ದಾರೆ . ಈ ಅಜ್ಜಿಯ ವಯಸ್ಸು ಕೇಳಿದರೆ ಬೆಚ್ಚಿ ಬೀಳುತ್ತೀರಿ. ಈ ಅಜ್ಜಿಗೆ 105 ವರ್ಷ ಎಂದು ಪರಿಗಣಿಸಲಾಗಿದ್ದು, ಈಗ ಈ ಅಜ್ಜಿ 105 ವರ್ಷ ವಯಸ್ಸಿನಲ್ಲಿ ಓಟದಲ್ಲಿ ದಾಖಲೆ ಬರೆದಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆದಿತ್ತು. ಈ ಸ್ಪರ್ಧೆಯಲ್ಲಿ ಅಜ್ಜಿ ಓಡಿ ದಾಖಲೆ ನಿರ್ಮಿಸಿದ್ದಾರೆ. ಅಜ್ಜಿ 100 ಮೀಟರ್ ಓಟವನ್ನು 45.40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ ಮೊದಲು ಈ ದಾಖಲೆ ಮನ್ ಕೌರ್ ಎಂಬ ವೃದ್ಧೆಯ ಹೆಸರಿನಲ್ಲಿತ್ತು. ಅವರು ಈ ಓಟವನ್ನು 74 ಸೆಕೆಂಡುಗಳಲ್ಲಿ ಮುಗಿಸಿದ್ದರು.

ಅಜ್ಜಿಯ ಈ ದಾಖಲೆಯಿಂದ ಹರಿಯಾಣದಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಅಜ್ಜಿಯ ಊರಿನಲ್ಲಿ ವಿಶೇಷ ಸಂತಸ ಎದ್ದು ಕಾಣುತ್ತಿತ್ತು. ಈ ವಯಸ್ಸಿನಲ್ಲೂ ಕ್ರೀಡೆಯಲ್ಲಿ ಹೆಸರು ಮಾಡಿರುವುದು ರಾಂಬಾಯಿ ಮಾತ್ರ ಅಲ್ಲ. ಅವರ ಕುಟುಂಬದವರು ಕೂಡ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ಎಂಬುದು ಗಮನಾರ್ಹ. ಅವರ ಕುಟುಂಬದ ಇತರ ಸದಸ್ಯರು ಸಹ ಕ್ರೀಡೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ರಾಂಬಾಯಿ, ಸ್ಪರ್ಧೆಯಲ್ಲಿ 100,200 ಮೀಟರ್ಸ್, ರಿಲೇ ಮತ್ತು ಲಾಂಗ್ ಜಂಪ್​ನಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು.

Koo App

ಇದನ್ನೂ ಓದಿ
Image
MS Dhoni: ಸಿನಿಮಾ ನಿರ್ಮಾಣಕ್ಕಿಳಿದ ಧೋನಿ! ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್
Image
ICC Women Ranking: ಎಂಟನೇ ಸ್ಥಾನ ಉಳಿಸಿಕೊಂಡ ಸ್ಮೃತಿ ಮಂಧಾನ; ಹಿಂಬಡ್ತಿ ಪಡೆದ ಜೂಲನ್ ಗೋಸ್ವಾಮಿ
Image
IND vs ENG: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕ? ತಂಡದಲ್ಲೂ ಸಂಪೂರ್ಣ ಬದಲಾವಣೆ

ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ವಾಕಿಂಗ್

ಜನವರಿ 1, 1917 ರಂದು ಜನಿಸಿದ ರಾಂಬಾಯಿ ಹಿರಿಯ ಕ್ರೀಡಾಪಟು. ಅವರು ನವೆಂಬರ್, 2021 ರಲ್ಲಿ ವಾರಣಾಸಿಯಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದರು. 105ರ ಹರೆಯದಲ್ಲೂ ಕಠಿಣ ಪರಿಶ್ರಮದಿಂದ ಹಲವು ಸಾಧನೆಗಳನ್ನು ಮಾಡಿದ್ದಾರೆ. ಹಿರಿಯ ಅಥ್ಲೀಟ್ ರಾಂಬಾಯಿ ಕೃಷಿ ಕೆಲಸಗಳೊಂದಿಗೆ ಓಡುವುದನ್ನು ಅಭ್ಯಾಸ ಮಾಡುತ್ತಾರೆ. ಅವರು ಬೆಳಿಗ್ಗೆ 4 ಗಂಟೆಗೆ ಎದ್ದು ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ನಿರಂತರವಾಗಿ ಓಡುವುದನ್ನು ರಾಂಬಾಯಿ ಅಭ್ಯಾಸ ಮಾಡಿಕೊಂಡಿದ್ದಾರೆ. ಜೊತೆಗೆ, ಈ ವಯಸ್ಸಿನಲ್ಲೂ, ಅವರು 5-6 ಕಿಲೋಮೀಟರ್ಗಳಷ್ಟು ಆರಾಮವಾಗಿ ಓಡುತ್ತಾರೆ.

ಪ್ರತಿದಿನ 250 ಗ್ರಾಂ ತುಪ್ಪ ಸೇವನೆ

80 ವರ್ಷ ದಾಟಿದ ಜನರು ಸಾಮಾನ್ಯವಾಗಿ ಹಾಸಿಗೆ ಹಿಡಿದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ರಾಂಬಾಯಿ ಅವರು 105 ನೇ ವಯಸ್ಸಿನಲ್ಲಿಯೂ ಅನುಕರಣೀಯ ಸಾಧನೆಯನ್ನು ಸಾಧಿಸಿದ್ದಾರೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ದೇಹದಲ್ಲಿ ತುಂಬಾ ಉತ್ಸಾಹವಿದೆ ಎಂದು ಹೇಳುವ ಅವರು, ಬ್ರೆಡ್, ಮೊಸರಿನ ಜೊತೆಗೆ ಹೆಚ್ಚು ಹೆಚ್ಚು ಹಾಲು ಕುಡಿಯುತ್ತಾರೆ. ಪ್ರತಿದಿನ 250 ಗ್ರಾಂ ತುಪ್ಪವನ್ನು ರೊಟ್ಟಿ ಅಥವಾ ಚೂರ್ಮಾದೊಂದಿಗೆ ತಿನ್ನುತ್ತಾರೆ.

ಇಡೀ ಕುಟುಂಬ ಕ್ರೀಡೆಯಲ್ಲಿ ಹೆಸರು ಮಾಡಿದೆ

ರಾಂಬಾಯಿ ಅವರ ಇಡೀ ಕುಟುಂಬ ಕ್ರೀಡೆಯಲ್ಲಿ ಹೆಸರು ಮಾಡಿದೆ. ಅವರ ಪುತ್ರಿ ಸಂತಾರಾ ದೇವಿ (62) ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರಾಂಬಾಯಿ ಅವರ ಪುತ್ರ 70 ವರ್ಷದ ಮುಖ್ತಿಯಾರ್ ಸಿಂಗ್ 200 ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೊಸೆ ಭಟೇರಿ ರಿಲೇಯಲ್ಲಿ ಚಿನ್ನ ಮತ್ತು 200 ಮೀ.ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ