AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್

Anahat Singh: ಕೆನಡಾದ ಒಂಟಾರಿಯೊದಲ್ಲಿ ನಡೆದ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ 18 ವರ್ಷದ ಭಾರತದ ತಾರೆ ಅನಾಹತ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆಯುವಂತಹ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಚಿನ್ನ ಗೆದ್ದ ಮೊಟ್ಟಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅನಾಹತ್ ಪಾತ್ರರಾಗಿದ್ದಾರೆ.

ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್
Anahat SinghImage Credit source: DD Sports
ಝಾಹಿರ್ ಯೂಸುಫ್
|

Updated on:Jul 26, 2026 | 11:06 AM

Share

ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಭಾರತದ ಅನಾಹತ್ ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜುಲೈ 25, 2026 ರಂದು ಕೆನಡಾದ ಒಂಟಾರಿಯೊದಲ್ಲಿ ನಡೆದ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 18 ವರ್ಷದ ಅನಾಹತ್ ಸಿಂಗ್ ಈಜಿಪ್ಟ್‌ನ ರುಕಾಯಾ ಸಲೇಮ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಿದ್ದಾಜಿದ್ದಿನ ಪೈಪೋಟಿ:

ಅನಾಹತ್ ಸಿಂಗ್ ಮತ್ತು ರುಕಾಯಾ ಸಲೇಮ್ ನಡುವಣ ಪಂದ್ಯವು ಆರಂಭದಲ್ಲಿ ಏಕಪಕ್ಷೀಯವಾಗಿದ್ದರೂ, ಆ ಬಳಿಕ ನಡೆದ ಎರಡು ಸೆಟ್​ಗಳು ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಸೆಟ್​ನಲ್ಲಿ ಸುಲಭ ಗೆಲುವು ದಾಖಲಿಸಿದ್ದ ಅನಾಹತ್, ಉಳಿದ ಎರಡು ಸೆಟ್​ ಗೆಲ್ಲಲು ತುಸು ಹೆಚ್ಚೇ ಬೆವರಿಳಿಸಿದ್ದರು.  ಈ ಮೂಲಕ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

  • ನೇರ ಸೆಟ್‌ಗಳ ಜಯ: ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಪಾರಮ್ಯ ಮೆರೆದ ಅನಾಹತ್, 11-3, 11-7, 11-9 ರ ನೇರ ಸೆಟ್‌ಗಳಿಂದ ಎದುರಾಳಿಯನ್ನು ಮಣಿಸಿದರು.
  • ಈಜಿಪ್ಟ್ ಪ್ರಾಬಲ್ಯಕ್ಕೆ ಬ್ರೇಕ್: ಕಳೆದ 13 ವರ್ಷಗಳಿಂದ ಈ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರಿದಿದ್ದ ಈಜಿಪ್ಟ್ ಆಟಗಾರ್ತಿಯರ ಏಕಸ್ವಾಮ್ಯವನ್ನು ಮುರಿಯುವಲ್ಲಿ ಅನಾಹತ್ ಯಶಸ್ವಿಯಾಗಿದ್ದಾರೆ.
  • ಹಳೆಯ ದಾಖಲೆ ಉಡೀಸ್: 2005 ರಲ್ಲಿ ಜೋಶ್ನಾ ಚಿನ್ನಪ್ಪ ರನ್ನರ್-ಅಪ್ ಆಗಿದ್ದೇ ಇದುವರೆಗೆ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಈಗ ಅನಾಹತ್ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.

ಚಾಂಪಿಯನ್‌ಶಿಪ್‌ನ ಅದ್ಭುತ ಜರ್ನಿ:

ಈ ಟೂರ್ನಿಯುದ್ದಕ್ಕೂ ಕೇವಲ ಎರಡೇ ಸೆಟ್‌ಗಳನ್ನು ಬಿಟ್ಟುಕೊಟ್ಟು ಅನಾಹತ್ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ವಿಶೇಷ. ಕ್ವಾರ್ಟರ್ ಫೈನಲ್‌ನಿಂದ ಫೈನಲ್‌ವರೆಗೂ ಅವರು ಸತತವಾಗಿ ಮೂವರು ಈಜಿಪ್ಟ್ ಮೂಲದ ಪ್ರಬಲ ಆಟಗಾರ್ತಿಯರನ್ನೇ ಸೋಲಿಸಿ ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.

ಹಂತ ಎದುರಾಳಿ ದೇಶ ಫಲಿತಾಂಶ
ಕ್ವಾರ್ಟರ್ ಫೈನಲ್ ಹಬೀಬಾ ರಿಜ್ಕ್ ಈಜಿಪ್ಟ್ 3-1 ಜಯ
ಸೆಮಿಫೈನಲ್ ಬಾರ್ಬ್ ಸಮೇಹ್ ಈಜಿಪ್ಟ್ 3-1 ಜಯ
ಫೈನಲ್ ರುಕಾಯಾ ಸಲೇಮ್ ಈಜಿಪ್ಟ್ 3-0 ಜಯ

ಒಲಿಂಪಿಕ್ಸ್ ಮೇಲೆ ಕಣ್ಣು:

ಇದು ಅನಾಹತ್ ಸಿಂಗ್ ಅವರ ಕೊನೆಯ ಜೂನಿಯರ್ ಟೂರ್ನಮೆಂಟ್ ಆಗಿದ್ದು, ಈಗಾಗಲೇ ಸೀನಿಯರ್ ಪಿಎಸ್‌ಎ (PSA) ಜಾಗತಿಕ ಶ್ರೇಯಾಂಕದಲ್ಲಿ ಟಾಪ್ 20 ರೊಳಗೆ ಸ್ಥಾನ ಪಡೆದ ಅತ್ಯಂತ ಕಿರಿಯ ಏಷ್ಯನ್ ಆಟಗಾರ್ತಿಯಾಗಿದ್ದಾರೆ.

ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ

2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಅಧಿಕೃತವಾಗಿ ಸೇರ್ಪಡೆಯಾಗುತ್ತಿರುವುದರಿಂದ, ಭಾರತಕ್ಕೆ ಒಲಿಂಪಿಕ್ ಪದಕ ತಂದುಕೊಡುವ ದೊಡ್ಡ ಭರವಸೆಯಾಗಿ ಅನಾಹತ್ ಸಿಂಗ್ ಹೊರಹೊಮ್ಮಿದ್ದಾರೆ.

Published On - 11:05 am, Sun, 26 July 26

Follow Us
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
‘ಓಂ’ ನನ್ನ ಮೆಚ್ಚಿನ ಸಿನಿಮಾ ಎಂದ ತೆಲುಗು ನಟ ಸುನಿಲ್
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!