- Kannada News Sports Argentina captain Lionel Messi has shattered multiple records in the FIFA World Cup 2022 final against France
ಲಿಯೋನೆಲ್ ಮೆಸ್ಸಿ ಕನಸು ಕಡೆಗೂ ನನಸು: ಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಾಲ್ಚೆಂಡಿನ ವೀರ
7 ಬಾರಿ ಬ್ಯಾಲನ್ ಡಿ'ಓರ್ ವಿಜೇತ ಕಿರೀಟವನ್ನು ಅಲಂಕರಿಸಿದ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಹೊರತುಪಡಿಸಿ ಫುಟ್ಬಾಲ್ ಆಟದಲ್ಲಿ ನೀಡುವ ಎಲ್ಲ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ಫಿಫಾ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಮೂಲಕ ತಮ್ಮ ಕನಸು ಕಡೆಗೂ ನನಸು ಮಾಡಿದ್ದಾರೆ. ಅಲ್ಲದೇ ತಮ್ಮ ಜೀವನದ ಕೊನೆಯ ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
Updated on:Dec 19, 2022 | 1:03 AM

ವಿಶ್ವ ಚಾಂಪಿಯನ್ ಆಗುವ ಲಿಯೋನೆಲ್ ಮೆಸ್ಸಿ ಕಡೆಗೂ ಈಡೇರಿದೆ.

ಈ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದು, ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಕನಸು ನನಸಾಗಿದೆ.

ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 2022ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುನ್ನಡೆಸುತ್ತಿರುವ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ, ಸಾಕಷ್ಟು ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.

ಕತಾರ್ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅದರೊಂದಿಗೆ ವಿಶ್ವಕಪ್‌ನ ಪ್ರತಿ ಸುತ್ತಿನಲ್ಲೂ ಗೋಲು ಸಿಡಿಸಿದ ವಿಶ್ವದ ಏಕೈಕ ಆಟಗಾರ ಲಿಯೋನೆಲ್ ಮೆಸ್ಸಿ ಆಗಿದ್ದಾರೆ.

35 ವರ್ಷದ ಲಿಯೋನೆಲ್ ಮೆಸ್ಸಿ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಆ ಮೂಲಕ ಜರ್ಮನಿಯ ಮತ್ತೊಬ್ಬ ದಿಗ್ಗಜ ತಾರೆ ಮ್ಯಾಥೌಸ್ ಅವರ ವಿಶ್ವದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.

ಅರ್ಜೆಂಟೀನಾದ ನಾಯಕ, ಕತಾರ್ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅದರೊಂದಿಗೆ ವಿಶ್ವಕಪ್‌ನ ಪ್ರತಿ ಸುತ್ತಿನಲ್ಲೂ ಗೋಲು ಸಿಡಿಸಿದ ವಿಶ್ವದ ಏಕೈಕ ಆಟಗಾರ ಲಿಯೋನೆಲ್ ಮೆಸ್ಸಿ ಆಗಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ನಿಮಿಷಗಳ ಕಾಲ ಮೈದಾನದಲ್ಲಿದ್ದ ದಾಖಲೆಯನ್ನು ಮೆಸ್ಸಿ ಮಾಡಿದ್ದಾರೆ. ಆ ಮೂಲಕ ಮೆಸ್ಸಿ ಇಟಲಿಯ ದಿಗ್ಗಜ ಪಾವ್ಲೋ ಮಾಲ್ಡಿನಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಮಾಲ್ಡಿನಿ 2217 ನಿಮಿಷಗಳ ಕಾಲ ಮೈದಾನದಲ್ಲಿದ್ದರು. ಫಿಫಾ ವಿಶ್ವಕಪ್ ಫೈನಲ್ ಮೊದಲ ಅವಧಿ ಪೂರ್ತಿ ಮೈದಾನದಲ್ಲಿ ಕಳೆಯುವ ಮೂಲಕ ಈ ವಿಶ್ವದಾಖಲೆಯನ್ನೂ ಮೆಸ್ಸಿ ಮುರಿದಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದ ಮೆಸ್ಸಿ, ಈವರೆಗೂ 19 ಪಂದ್ಯಗಳಲ್ಲಿ ನಾಯಕರಾಗಿ ಆಡಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ದಕ್ಷಿಣ ಅಮೆರಿಕದ ದಿಗ್ಗಜರ ಪೈಕಿ ಮೆಸ್ಸಿ ಮೂರನೇ ಸ್ಥಾನದಲ್ಲಿದ್ದಾರೆ. ರಾಫಾ ಮಾರ್ಕೆಜ್ (17) ಹಾಗೂ ಡೀಗೋ ಮರಡೋನಾ (16) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ
Published On - 12:54 am, Mon, 19 December 22
























