AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ACT 2021: ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟ ಭಾರತ ಹಾಕಿ ತಂಡ

Asian champions trophy 2021: ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021 ರ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4-3 ಗೋಲುಗಳ ಅಂತರದ ರೋಚಕ ಜಯವನ್ನು ದಾಖಲಿಸಿತು.

ACT 2021: ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟ ಭಾರತ ಹಾಕಿ ತಂಡ
ಭಾರತ- ಪಾಕ್ ಹಾಕಿ ತಂಡ
TV9 Web
| Edited By: |

Updated on:Dec 22, 2021 | 5:28 PM

Share

ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021 ರ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4-3 ರೋಚಕ ಜಯವನ್ನು ದಾಖಲಿಸಿತು. ಭಾರತವು ಕೊನೆಯ ಕೆಲವು ನಿಮಿಷಗಳಲ್ಲಿ ಕೇವಲ ಒಂಬತ್ತು ಆಟಗಾರರೊಂದಿಗೆ ಆಡಿದ್ದರು ಕೂಡ ತಮ್ಮ ಮುನ್ನಡೆಯನ್ನು ಕಳೆದುಕೊಳ್ಳದೆ ಗೆಲುವನ್ನು ದಾಖಲಿಸಿದರು. ಕಳೆದ ಬಾರಿ ಈ ಟೂರ್ನಮೆಂಟ್ ಅನ್ನು ಗೆದ್ದಿದ್ದ ಟೀಮ್ ಇಂಡಿಯಾ ಈ ಬಾರಿ ಜಪಾನ್ ವಿರುದ್ಧ ದುರ್ಬಲ ಆಟದಿಂದ ಪ್ರಶಸ್ತಿಯನ್ನು ಕೈಯಿಂದ ಕಳೆದುಕೊಂಡಿತು.ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಇದು ಎರಡನೇ ಗೆಲುವು. ಇದಕ್ಕೂ ಮೊದಲು ರೌಂಡ್ ರಾಬಿನ್ ಹಂತದಲ್ಲಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿತ್ತು.

ಈ ಪಂದ್ಯದಲ್ಲಿ ಭಾರತವು ಒಟ್ಟು 11 ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು ಆದರೆ ಕೇವಲ ಎರಡು ಗೋಲುಗಳನ್ನು ಪರಿವರ್ತಿಸಲು ಸಾಧ್ಯವಾಯಿತು. ಈ ಮೂಲಕ ಪೆನಾಲ್ಟಿ ಕಾರ್ನರ್ ಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೆ ಭಾರತದ ಹಳೇ ಸಂಕಷ್ಟ ಮುಂದುವರಿದಿದೆ. ಜಪಾನ್ ವಿರುದ್ಧದ ಪಂದ್ಯದಲ್ಲೂ ಭಾರತ ಅದೇ ತಪ್ಪನ್ನು ಮಾಡಬೇಕಾಯಿತು. ಮತ್ತೊಂದೆಡೆ, ಇಡೀ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಅವರಲ್ಲಿ ಒಬ್ಬರು ಗೋಲು ಹೊಡೆದರು. ಆಟಗಾರರು ಕೂಡ ಪಂದ್ಯದಲ್ಲಿ ಉತ್ಸಾಹ ತೋರಿದರು ಮತ್ತು ಇದರಿಂದಾಗಿ ಅವರು ಅನೇಕ ತಪ್ಪುಗಳನ್ನು ಮಾಡಿದರು. ಪಂದ್ಯದುದ್ದಕ್ಕೂ ಎಂಟು ಕಾರ್ಡ್‌ಗಳನ್ನು ತೋರಿಸಲಾಯಿತು. ಇದರ ಅಡಿಯಲ್ಲಿ ಪಾಕಿಸ್ತಾನಕ್ಕೆ ಮೂರು ಹಸಿರು ಮತ್ತು ಒಂದು ಹಳದಿ ಕಾರ್ಡ್ ತೋರಿಸಲಾಯಿತು. ಅದೇ ಸಮಯದಲ್ಲಿ ಭಾರತಕ್ಕೆ ಒಂದು ಹಸಿರು ಮತ್ತು ಮೂರು ಹಳದಿ ಕಾರ್ಡ್‌ಗಳು ದೊರೆತವು.

ಈ ಆಟಗಾರರು ಗೋಲು ಗಳಿಸಿದರು ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್, ಸುಮಿತ್ ಕುಮಾರ್ (45ನೇ ನಿ), ವರುಣ್ ಕುಮಾರ್ (53ನೇ ನಿ) ಮತ್ತು ಆಕಾಶದೀಪ್ ಸಿಂಗ್ (57ನೇ ನಿ) ಗೋಲು ಗಳಿಸಿದರು. ಮತ್ತೊಂದೆಡೆ ಪಾಕಿಸ್ತಾನ ಪರ ಅಫ್ರಾಜ್ (10ನೇ), ಅಬ್ದುಲ್ ರಾಣಾ (33ನೇ) ಮತ್ತು ಅಹ್ಮದ್ ನದೀಮ್ (57ನೇ ನಿಮಿಷ) ಗೋಲು ಗಳಿಸಿದರು. ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲ ನಿಮಿಷದಿಂದಲೇ ಮುನ್ನಡೆ ಸಾಧಿಸಿತ್ತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಗೋಲು ದಾಖಲಿಸಿದರು. ಭಾರತ ಆರಂಭಿಕ ಕ್ಷಣಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಕಲೆಹಾಕಿತು ಆದರೆ ಹರ್ಮನ್‌ಪ್ರೀತ್ ಮಾತ್ರ ಗೋಲು ಗಳಿಸಲು ಸಾಧ್ಯವಾಯಿತು.

Published On - 5:13 pm, Wed, 22 December 21

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ