ಅಪ್ಪ ಇಲ್ಲ, ಅಮ್ಮ ಬೆಸ್ಟ್ ಕಂಡಕ್ಟರ್: ಮಗ.. ಅಪ್ಪಟ ಕ್ರಿಕೆಟ್ ಪ್ರತಿಭೆ!
ಆತ ಕ್ರಿಕೆಟಿಗನಾಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದ್ರೆ ಮಗ 10 ವರ್ಷದವನಿದ್ದಾಗಲೇ ಅಪ್ಪ ಎಂದೂ ಬಾರದ ಲೋಕಕ್ಕೆ ಹೋಗಿದ್ದ. ಆದ್ರೆ ಅಮ್ಮ ಮಾತ್ರ ಬಸ್ ನಿರ್ವಾಹಕಿಯಾಗಿಯೇ ಮಗನನ್ನ ಕ್ರಿಕೆಟ್ ಲೋಕದಲ್ಲಿ ಧ್ರುವತಾರೆಯಾಗುವಂತೆ ಬೆಳೆಸಿದ್ದಾಳೆ. ಅದೇ ದ್ರುವತಾರೆ ಈಗ ಭಾರತಕ್ಕೆ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದೆ. ಅಪ್ಪ ಇಲ್ಲ, ಅಮ್ಮ ಬೆಸ್ಟ್ ಕಂಡಕ್ಟರ್: ಆತ ಮುಂಬೈ ಮೂಲದ ಯುವ ಕ್ರಿಕೇಟಿಗ ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಪ್ರೀತಿಯಲ್ಲಿ ಕಷ್ಟ, ನೋವನ್ನು ಕಂಡು ಬೆಳೆದು ಇಂದು ಭಾರತಕ್ಕೆ […]
ಆತ ಕ್ರಿಕೆಟಿಗನಾಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದ್ರೆ ಮಗ 10 ವರ್ಷದವನಿದ್ದಾಗಲೇ ಅಪ್ಪ ಎಂದೂ ಬಾರದ ಲೋಕಕ್ಕೆ ಹೋಗಿದ್ದ. ಆದ್ರೆ ಅಮ್ಮ ಮಾತ್ರ ಬಸ್ ನಿರ್ವಾಹಕಿಯಾಗಿಯೇ ಮಗನನ್ನ ಕ್ರಿಕೆಟ್ ಲೋಕದಲ್ಲಿ ಧ್ರುವತಾರೆಯಾಗುವಂತೆ ಬೆಳೆಸಿದ್ದಾಳೆ. ಅದೇ ದ್ರುವತಾರೆ ಈಗ ಭಾರತಕ್ಕೆ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದೆ.
ಅಪ್ಪ ಇಲ್ಲ, ಅಮ್ಮ ಬೆಸ್ಟ್ ಕಂಡಕ್ಟರ್: ಆತ ಮುಂಬೈ ಮೂಲದ ಯುವ ಕ್ರಿಕೇಟಿಗ ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಪ್ರೀತಿಯಲ್ಲಿ ಕಷ್ಟ, ನೋವನ್ನು ಕಂಡು ಬೆಳೆದು ಇಂದು ಭಾರತಕ್ಕೆ ಕೀರ್ತಿತಂದು ಕೊಟ್ಟ ಯುವತಾರೆ. ಆತನೇ ಅಥರ್ವ ಅಂಕೋಲೇಕರ್
ಇತ್ತೀಚೆಗೆ ಮುಗಿದ U-19 ಏಷ್ಯ ಕಪ್ ನಲ್ಲಿ ಚಾಂಪಿಯನ್ ಪಟ್ಟತಂದು ಕೊಟ್ಟ ಧ್ರುವತಾರೆ.. ಭಾರತ U-19 ತಂಡ 7ನೇ ಬಾರಿಗೆ ಏಷ್ಯಕಪ್ ಗೆದ್ದು ಬೀಗಿದೆ. ಬಾಂಗ್ಲಾ ಗೆಲುವಿಗೆ ಕೇವಲ 50 ಓವರ್ ಗಳಲ್ಲಿ 107 ರನ್ ಟಾರ್ಗೆಟ್ ನೀಡಲಾಗಿತ್ತು. ಇನ್ನೇನು ಬಾಂಗ್ಲಾ ಗೆಲುವಿಗೆ 6 ರನ್ ಬಾಕಿ ಇತ್ತು, ಗೆದ್ದೇ ಗೆಲ್ಲುತೀವಿ ಎಂದು ಕೊಂಡಿದ್ದ ಬಾಂಗ್ಲಾಗೆ ಶಾಕ್ ಕೊಟ್ಟಿದ್ದೆ ಈ ಅಥರ್ವ.
ಈತನ ಎಡಗೈ ಸ್ಪಿನ್ ಪವಾಡದಿಂದಲೇ ಬಾಂಗ್ಲಾಗೆ ಗೆಲುವು ತಪ್ಪಿದೆ. 33ನೇ ಓವರ್ ನಲ್ಲಿ 2 ವಿಕೆಟ್ ಪಡೆದು. ಭಾರತಕ್ಕೆ 5 ರನ್ ಗಳ ರಣರೋಚಕ ಗೆಲುವನ್ನು ತಂದುಕೊಟ್ಟಿದ್ದಾನೆ.
ಇನ್ನು ಅಥರ್ವ ಕೇವಲ ಫೈನಲ್ ಪಂದ್ಯದಲ್ಲಿ ಮಿಂಚುವುದಷ್ಟೆ ಅಲ್ಲದೆ ಲೀಗ್ ನಲ್ಲು ಮ್ಯಾಜಿಕ್ ಮಾಡಿದ್ದಾನೆ, ಪಾಕಿಸ್ತಾನದ ವಿರುದ್ಧ 3 ಹಾಗೂ ಆಫ್ಗಾನಿಸ್ಥಾನದ ವಿರುದ್ಧ 4 ವಿಕೆಟ್ ಪಡೆದುಕೊಂಡಿದ್ದಾನೆ.
ಈತನ ಈ ಸಾಧನೆಗೆ ತಾಯಿ ಸಂತೋಷವನ್ನು ಹಂಚಿಕೊಂಡಿದ್ದು, ಮಗನಿಗೆ ಹಾರೈಸಿದ್ದಾರೆ. ಈ ಸಾಧನೆ ಪ್ರತಿ ಯುವಕರಿಗೂ ಸ್ಫೂರ್ತಿಯಾಗಲಿದೆ.
Published On - 1:52 pm, Tue, 17 September 19