Bundesliga Women 2024: ಬಲಿಷ್ಠ ಫ್ರಾಂಕ್‌ಫರ್ಟ್ ತಂಡಕ್ಕೆ ಸೋಲುಣಿಸಿದ ವೆರ್ಡರ್ ಬ್ರೆಮೆನ್

Bundesliga Women 2024: ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯ ಮ್ಯಾಚ್‌ಡೇ 7 ರ 38ನೇ ಪಂದ್ಯದಲ್ಲಿ ವೆರ್ಡರ್ ಬ್ರೆಮೆನ್ ತಂಡ 1-0 ಗೋಲುಗಳ ಅಂತರದಿಂದ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

Bundesliga Women 2024: ಬಲಿಷ್ಠ ಫ್ರಾಂಕ್‌ಫರ್ಟ್ ತಂಡಕ್ಕೆ ಸೋಲುಣಿಸಿದ ವೆರ್ಡರ್ ಬ್ರೆಮೆನ್
ವೆರ್ಡರ್ ಬ್ರೆಮೆನ್
Follow us
|

Updated on: Oct 19, 2024 | 8:46 PM

ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯ ಮ್ಯಾಚ್‌ಡೇ 7 ರ 38ನೇ ಪಂದ್ಯದಲ್ಲಿ ಇಂದು ಅಂದರೆ ಅಕ್ಟೋಬರ್ 19 ರಂದು ಬಲಿಷ್ಠ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ಹಾಗೂ ವೆರ್ಡರ್ ಬ್ರೆಮೆನ್ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ವೆರ್ಡರ್ ಬ್ರೆಮೆನ್ ತಂಡ 1-0 ಗೋಲುಗಳ ಅಂತರದಿಂದ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಫ್ರಾಂಕ್‌ಫರ್ಟ್ ತಂಡ ಟೂರ್ನಿಯಲ್ಲಿ ಮೊದಲು ಸೋಲು ದಾಖಲಿಸಿದರೆ, ವೆರ್ಡರ್ ಬ್ರೆಮೆನ್ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿತು.

75 ನೇ ನಿಮಿಷದಲ್ಲಿ ಗೋಲು

ಉಭಯ ತಂಡಗಳ ನಡುವೆ ಸಮಬಲದ ಹೋರಾಟ ಕಂಡುಬಂತು. ಹೀಗಾಗಿ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲೂ ಗೋಲುಗಳಿಸಲು ಎರಡು ತಂಡಗಳು ಸಾಕಷ್ಟು ಪ್ರಯತ್ನ ಪಟ್ಟರು ಸಫಲವಾಗಲಿಲ್ಲ. ಆದರೆ ಪಂದ್ಯದ 75 ನೇ ನಿಮಿಷದಲ್ಲಿ ವೆರ್ಡರ್ ಬ್ರೆಮೆನ್ ತಂಡದ ಮಿಡಲ್ ಫೀಲ್ಡರ್ ಸೋಫಿ ವೀಡೌರ್ ಎದುರಾಳಿ ತಂಡದ ರಕ್ಷಣೆಯನ್ನು ಭೇದಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಒಟ್ಟಾರೆ 95 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮತ್ತ್ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ವೆರ್ಡರ್ ಬ್ರೆಮೆನ್ ತಂಡ, ಅಗ್ರಸ್ಥಾನದಲ್ಲಿರುವ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡವನ್ನು 1-0 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

ಪಾಯಿಂಟ್ ಪಟ್ಟಿ ಹೀಗಿದೆ

ಇನ್ನು ಟೂರ್ನಿಯಲ್ಲಿ ಉಭಯ ತಂಡಗಳ ಇದುವರೆಗಿನ ಪ್ರದರ್ಶನ ಬಗ್ಗೆ ಹೇಳುವುದಾದರೆ.. ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ ತಂಡದ ಬಳಿ ಒಟ್ಟಾರೆ 16 ಪಾಯಿಂಟ್​ಗಳಿವೆ. ಇತ್ತ ವೆರ್ಡರ್ ಬ್ರೆಮೆನ್ ತಂಡ ಆಡಿರುವ 7 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದಂತೆ 2 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ತಂಡ ಪ್ರಸ್ತುತ 8 ಅಂಕ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು