Bundesliga Women 2024: ಎಸ್ಸೆನ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ 5 ಗೆಲುವು ದಾಖಲಿಸಿದ ವೋಲ್ಫ್ಸ್‌ಬರ್ಗ್

Bundesliga Women 2024: ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯಲ್ಲಿ ಅಕ್ಟೋಬರ್ 20 ರಂದು ಎಸ್​ಜಿಎಸ್​ ಎಸ್ಸೆನ್ ಹಾಗೂ ವೋಲ್ಫ್ಸ್‌ಬರ್ಗ್ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ವೋಲ್ಫ್ಸ್‌ಬರ್ಗ್ ತಂಡ 2-0 ಗೋಲುಗಳ ಅಂತರದಿಂದ ಎಸ್​ಜಿಎಸ್​ ಎಸ್ಸೆನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

Bundesliga Women 2024: ಎಸ್ಸೆನ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ 5 ಗೆಲುವು ದಾಖಲಿಸಿದ ವೋಲ್ಫ್ಸ್‌ಬರ್ಗ್
ವೋಲ್ಫ್ಸ್‌ಬರ್ಗ್ ತಂಡ
Follow us
ಪೃಥ್ವಿಶಂಕರ
|

Updated on:Oct 20, 2024 | 9:06 PM

ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯ ಮ್ಯಾಚ್‌ಡೇ 8ರ 40ನೇ ಪಂದ್ಯದಲ್ಲಿ ಇಂದು ಅಂದರೆ ಅಕ್ಟೋಬರ್ 20 ರಂದು ಎಸ್​ಜಿಎಸ್​ ಎಸ್ಸೆನ್ ಹಾಗೂ ವೋಲ್ಫ್ಸ್‌ಬರ್ಗ್ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ವೋಲ್ಫ್ಸ್‌ಬರ್ಗ್ ತಂಡ 2-0 ಗೋಲುಗಳ ಅಂತರದಿಂದ ಎಸ್​ಜಿಎಸ್​ ಎಸ್ಸೆನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ವೋಲ್ಫ್ಸ್‌ಬರ್ಗ್ ತಂಡ ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರೆದರೆ, ಎಸ್​ಜಿಎಸ್​ ಎಸ್ಸೆನ್ ತಂಡ 4ನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಂದುವರೆದಿದೆ.

ಮೊದಲಾರ್ಧದಲ್ಲೇ ಮೇಲುಗೈ

ಸ್ಟೇಷನ್ ಎಸ್ಸೆನ್​ನಲ್ಲಿ ನಡೆದ ಈ ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ಸೆಕೆಂಡ್ ಬಾಕಿ ಇರುವಾಗ ವೋಲ್ಫ್ಸ್‌ಬರ್ಗ್ ತಂಡ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ತಂಡದ ಪರ ಮಿಡಲ್ ಫೀಲ್ಡರ್ ಜನಿನಾ ಮಿಂಗೆ ಪಂದ್ಯದ 25ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣೆ ಭೇದಿಸಿ ಗೋಲು ಪೋಸ್ಟ್​ ಮಾಡುವಲ್ಲಿ ಯಶಸ್ವಿಯಾದರು. ಇತ್ತ ಎಸ್ಸೆನ್ ತಂಡ ಗೋಲು ಬಾರಿಸಲು ಸಾಕಷ್ಟು ಪ್ರಯತ್ನ ಮಾಡಿತ್ತಾದರೂ, ವೋಲ್ಫ್ಸ್‌ಬರ್ಗ್ ತಂಡದ ರಕ್ಷಣೆಯನ್ನು ಭೇದಿಸಿ ಗೋಲು ಪೋಸ್ಟ್​ ಮಾಡುವಲ್ಲಿ ವಿಫಲವಾಯಿತು.

ವಿರಾಮದ ನಂತರ ಪಂದ್ಯದ ದ್ವಿತೀಯಾರ್ಧದಲ್ಲೂ ಎರಡು ತಂಡಗಳಿಂದ ಗೋಲು ದಾಖಲಿಸಲು ಸಾಕಷ್ಟು ಕಸರತ್ತು ನಡೆಯಿತು. ಈ ವೇಳೆ ಪಂದ್ಯದ 72ನೇ ನಿಮಿಷದಲ್ಲಿ ವೋಲ್ಫ್ಸ್‌ಬರ್ಗ್ ತಂಡ ಪಂದ್ಯದ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಬಾರಿ ತಂಡದ ಪರ ಸ್ಟ್ರೈಕರ್ ಲಿನೆತ್ ಬೀರೆನ್‌ಸ್ಟೈನ್ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಇತ್ತ ಎಸ್ಸೆನ್ ತಂಡ ಕೂಡ ಗೋಲಿಗಾಗಿ ಸಾಕಷ್ಟು ಶ್ರಮ ಪಟ್ಟಿತ್ತಾದರೂ, ವೋಲ್ಫ್ಸ್‌ಬರ್ಗ್ ತಂಡ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಅಂತಿಮವಾಗಿ 94 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ವೋಲ್ಫ್ಸ್‌ಬರ್ಗ್ ತಂಡ 2-0 ಗೋಲುಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಪಾಯಿಂಟ್ ಪಟ್ಟಿ ಹೀಗಿದೆ

ಇನ್ನು ಟೂರ್ನಿಯಲ್ಲಿ ಉಭಯ ತಂಡಗಳ ಇದುವರೆಗಿನ ಪ್ರದರ್ಶನ ಬಗ್ಗೆ ಹೇಳುವುದಾದರೆ.. ವೋಲ್ಫ್ಸ್‌ಬರ್ಗ್ ತಂಡ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ ತಂಡದ ಬಳಿ ಒಟ್ಟಾರೆ 16 ಪಾಯಿಂಟ್​ಗಳಿವೆ. ಇತ್ತ ಎಸ್​ಜಿಎಸ್​ ಎಸ್ಸೆನ್ ತಂಡ ಆಡಿರುವ 7 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದಂತೆ 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ತಂಡ ಪ್ರಸ್ತುತ 7 ಅಂಕ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sun, 20 October 24

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ