AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಜೊತೆ ಗೆಲ್ಲುತ್ತಿದ್ದಂತೆ ಟೂರ್ನಿ ಗೆದ್ದಾಯ್ತು ಎಂದ ವಿಶ್ವ ಚಾಂಪಿಯನ್

R Praggnanandhaa: 2013 ರ ವಿಶ್ವ ಚೆಸ್ ಚಾಂಪಿಯನ್ ಆಗಿರುವ ಕಾರ್ಲ್‌ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಪ್ರಗ್ನಾನಂದ ಹೆಸರಿನಲ್ಲಿದೆ.

ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಜೊತೆ ಗೆಲ್ಲುತ್ತಿದ್ದಂತೆ ಟೂರ್ನಿ ಗೆದ್ದಾಯ್ತು ಎಂದ ವಿಶ್ವ ಚಾಂಪಿಯನ್
R Praggnanandhaa
TV9 Web
| Edited By: |

Updated on: Mar 22, 2022 | 8:43 PM

Share

ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಪ್ರಸಿದ್ಧಿ ಪಡೆದಿರುವ ಆರ್. ಪ್ರಗ್ನಾನಂದ (R Praggnanandhaa) ಅವರು ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್​​ಗೆ (Magnus Carlsen) ಇತ್ತೀಚೆಗಷ್ಟೇ ಸೋಲುಣಿಸಿ ವಿಶ್ವದ ಗಮನ ಸೆಳೆದಿದ್ದರು. ಏರ್ಥಿಂಗ್ ಮಾಸ್ಟರ್ಸ್ (Air things Masters 2022) ಆನ್​ಲೈನ್ ಟೂರ್ನಿಯಲ್ಲಿ 16 ವರ್ಷದ ಪ್ರಗ್ನಾನಂದ ಕಾರ್ಲ್​ಸೆನ್​ಗೆ ಸೋಲಿನ ರುಚಿ ತೋರಿಸಿದ್ದರು. ಇದೀಗ ಮತ್ತೊಮ್ಮೆ ಕಾರ್ಲ್​ಸೆನ್ ಹಾಗೂ ಪ್ರಗ್ನಾನಂದ ಮುಖಾಮುಖಿಯಾಗಿದ್ದಾರೆ. ಆದರೆ ಈ ಬಾರಿ ಪ್ರಗ್ನಾನಂದ ವಿರುದ್ದ ಕಾರ್ಲ್​ಸೆನ್ ಗೆದ್ದಿದ್ದಾರೆ.

ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್‌ನ ಎರಡನೇ ಲೆಗ್, ಚಾರಿಟಿ ಕಪ್‌ನ ರೋಮಾಂಚನಕಾರಿ ರೌಂಡ್ 9 ಕಾರ್ಲ್‌ಸೆನ್ ಮತ್ತು ಪ್ರಗ್ನಾನಂದ ಮತ್ತೆ ಮುಖಾಮುಖಿಯಾಗಿದ್ದರು. ನಿನ್ನೆಯ ಅಂತಿಮ ಸುತ್ತಿನ ಆಟದ ನಂತರ , ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ ಆ ಐತಿಹಾಸಿಕ 39-ಚಲನೆಯ ಸಮಯದಲ್ಲಿ ಕಾರ್ಲ್‌ಸೆನ್ ಯುವ ಭಾರತೀಯ ತಾರೆಯ ಶಾಂತತೆಗೆ ಗೌರವ ಸಲ್ಲಿಸಿದರು. ಅಲ್ಲದೆ ಈ ಬಾರಿ “ನಾನು ಟೂರ್ನಿಯನ್ನು ಗೆದ್ದಿದ್ದೇನೆ!” ಎನ್ನುವ ಮೂಲಕ ಎಲ್ಲರ ಗಮನ ಸೆಳೆದರು.

ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಈವೆಂಟ್‌ನ 8 ರ ರೌಂಡ್‌ನಲ್ಲಿ ವಿಶ್ವದ ನಂ.3 ಡಿಂಗ್ ಲಿರೆನ್ ವಿರುದ್ಧದ ಅದ್ಭುತ ಜಯದೊಂದಿಗೆ ಪ್ರಗ್ನಾನಂದ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪ್ರಗ್ನಾನಂದ ಚಾರಿಟಿ ಕಪ್‌ನ ರೌಂಡ್-ರಾಬಿನ್ ಲೀಡರ್‌ಬೋರ್ಡ್‌ನಲ್ಲಿ 7 ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಮತ್ತೊಮ್ಮೆ ನಾಕೌಟ್‌ಗೆ ಪ್ರವೇಶಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಪ್ರಗ್ನಾನಂದ ನಿನ್ನೆ 5 ನೇ ಸುತ್ತಿನಲ್ಲಿ ಒಂದು ಕಠಿಣ ಪೈಪೋಟಿ ನೀಡಿದ್ದರು. ಆದಾಗ್ಯೂ ಪೋಲ್ ಜಾನ್-ಕ್ರಿಸ್ಜ್ಟೋಫ್ ಡುಡಾ ವಿರುದ್ಧ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಮತ್ತೊಂದೆಡೆ ಕೇವಲ 2 ಸೋಲನುಭವಿಸಿರುವ ಕಾರ್ಲ್​ಸೆನ್ 2ನೇ ಸ್ಥಾನದಲ್ಲಿದ್ದಾರೆ. ಇದೀಗ ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶ ಹೊಂದಿರುವ ಪ್ರಗ್ನಾನಂದ ಮತ್ತೊಮ್ಮೆ ಕಾರ್ಲ್​ಸೆನ್ ವಿರುದ್ದ ಚದುರಂಗ ಚತುರತೆ ಪ್ರದರ್ಶಿಸಲಿದ್ದಾರೆ ಕಾದು ನೋಡಬೇಕಿದೆ.

2013 ರ ವಿಶ್ವ ಚೆಸ್ ಚಾಂಪಿಯನ್ ಆಗಿರುವ ಕಾರ್ಲ್‌ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಪ್ರಗ್ನಾನಂದ ಹೆಸರಿನಲ್ಲಿದೆ. ಅಲ್ಲದೆ ವಿಶ್ವನಾಥನ್ ಆನಂದ್ ಮತ್ತು ಪೆಂಟಾಲಾ ಹರಿಕೃಷ್ಣ ನಂತರ ನಾರ್ವೇಜಿಯನ್ ವಿರುದ್ಧ ಗೆದ್ದ ಮೂರನೇ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪ್ರಗ್ನಾನಂದ ಪಾತ್ರರಾಗಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ