Chess Olympiad: ಭಾರತವನ್ನು ಪ್ರತಿನಿಧಿಸುತ್ತಿರುವ ಈ ನಾಲ್ವರು ಚದುರಂಗದ ಸಿಪಾಯಿಗಳ ಮೇಲೆ ಎಲ್ಲರ ಕಣ್ಣು

Chess Olympiad: ಈ ನಾಲ್ವರಲ್ಲಿ, ಪ್ರಗ್ನಾನಂದ, ಡಿ ಗುಕೇಶ್ ಮತ್ತು ರೌನಕ್ ಸಾಧ್ವನಿ 16 ವರ್ಷ ವಯಸ್ಸಿನವರಾಗಿದ್ದರೆ ನಿಹಾಲ್ ಸರಿನ್ ಅವರಿಗೆ 18 ವರ್ಷ. ಆದರೂ, ಅವರೆಲ್ಲರೂ 2600 ಕ್ಕಿಂತ ಹೆಚ್ಚಿನ ಲೈವ್ ರೇಟಿಂಗ್‌ಗಳೊಂದಿಗೆ ಅಪಾರ ಅನುಭವವನ್ನು ಹೊಂದಿದ್ದು, ಇತ್ತೀಚಿನ ದಿನದಲ್ಲಿ ಪೆಂಟಾಲ ಹರಿಕೃಷ್ಣ ಅವರನ್ನು ಒಳಗೊಂಡ A ತಂಡವನ್ನು ಮೀರಿಸುವ ಸಾಮಥ್ಯ್ರ ಹೊಂದಿದ್ದಾರೆ.

Chess Olympiad: ಭಾರತವನ್ನು ಪ್ರತಿನಿಧಿಸುತ್ತಿರುವ ಈ ನಾಲ್ವರು ಚದುರಂಗದ ಸಿಪಾಯಿಗಳ ಮೇಲೆ ಎಲ್ಲರ ಕಣ್ಣು
ಪ್ರಗ್ನಾನಂದ, ಗುಕೇಶ್, ನಿಹಾಲ್ ಮತ್ತು ರೌನಕ್Image Credit source: The Indian Express
Follow us
TV9 Web
| Updated By: ಪೃಥ್ವಿಶಂಕರ

Updated on:Jul 28, 2022 | 10:01 PM

ಅತಿದೊಡ್ಡ 44 ನೇ ಚೆಸ್ ಒಲಿಂಪಿಯಾಡ್ (Chess Olympiad 2022) ಭಾರತದಲ್ಲಿ ಪ್ರಾರಂಭವಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ 190 ದೇಶಗಳ 1700 ಚೆಸ್ ಆಟಗಾರರು ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಚೆಸ್ ಒಲಿಂಪಿಯಾಡ್ ಉದ್ಘಾಟಿಸಿದರು. ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ವಿಶೇಷ ಆಕರ್ಷಣೆಯಾಗಿದ್ದರು. 187 ದೇಶಗಳ ಮುಕ್ತ ಸ್ಪರ್ಧಿಗಳು ಮತ್ತು ಮಹಿಳಾ ವಿಭಾಗದಲ್ಲಿ 343 ತಂಡಗಳು ಈಗಾಗಲೇ ಟೂರ್ನಿಗೆ ಪ್ರವೇಶಿಸಿವೆ. ವಿಶೇಷ ಎಂದರೆ ಮಹಿಳಾ ವಿಭಾಗದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ತಂಡಗಳು ಭಾಗವಹಿಸುತ್ತಿದೆ. ಓಪನ್‌ ಮತ್ತು ವನಿತಾ ವಿಭಾಗಗಳಲ್ಲಿ ಭಾರತ ತಲಾ 3 ತಂಡಗಳನ್ನು ಕಣಕ್ಕಿಳಿಸಲಿದೆ. ಇದರಲ್ಲಿ ಬಿ ತಂಡದಲ್ಲಿ ಸ್ಥಾನ ಪಡೆದಿರುವ ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ನಿಖೀಲ್‌ ಸರಿನ್‌, ರೌನಕ್‌ ಸಾಧ್ವನಿ (Praggnanandhaa, Gukesh, Nihal and Raunak) ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಈ ನಾಲ್ವರಲ್ಲಿ, ಪ್ರಗ್ನಾನಂದ, ಡಿ ಗುಕೇಶ್ ಮತ್ತು ರೌನಕ್ ಸಾಧ್ವನಿ 16 ವರ್ಷ ವಯಸ್ಸಿನವರಾಗಿದ್ದರೆ ನಿಹಾಲ್ ಸರಿನ್ ಅವರಿಗೆ 18 ವರ್ಷ. ಆದರೂ, ಅವರೆಲ್ಲರೂ 2600 ಕ್ಕಿಂತ ಹೆಚ್ಚಿನ ಲೈವ್ ರೇಟಿಂಗ್‌ಗಳೊಂದಿಗೆ ಅಪಾರ ಅನುಭವವನ್ನು ಹೊಂದಿದ್ದು, ಇತ್ತೀಚಿನ ದಿನದಲ್ಲಿ ಪೆಂಟಾಲ ಹರಿಕೃಷ್ಣ ಅವರನ್ನು ಒಳಗೊಂಡ A ತಂಡವನ್ನು ಮೀರಿಸುವ ಸಾಮಥ್ಯ್ರ ಹೊಂದಿದ್ದಾರೆ.

ಪ್ರಗ್ನಾನಂದ

ಇದನ್ನೂ ಓದಿ
Image
Chess Olympiad 2022 ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮುಖ್ಯ; ಚೆಸ್ ಒಲಿಂಪಿಯಾಡ್ ಉದ್ಘಾಟಿಸಿ ಮೋದಿ ಭಾಷಣ
Image
44th Chess Olympiad 2022 Inauguration- 44ನೇ ಚೆಸ್ ಒಲಿಂಪಿಯಾಡ್​ಗೆ ಅದ್ಧೂರಿ ಚಾಲನೆ ನೀಡಿದ ಪ್ರಧಾನಿ ಮೋದಿ
Image
44th Chess Olympiad 2022 Inauguration- ಇಂದು ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್​ಗೆ ಪ್ರಧಾನಿ ಮೋದಿ ಚಾಲನೆ

ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಏರ್ಥಿಂಗ್ ಮಾಸ್ಟರ್ಸ್ ಆನ್​ಲೈನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್​​ಗೆ ಪ್ರಗ್ನಾನಂದ ಸೋಲುಣಿಸಿ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಹೀಗಾಗಿ ಇವರ ಮೇಲೂ ನಿರೀಕ್ಷೆ ಹೆಚ್ಚಿದೆ. ತರಬೇತುದಾರ ಆರ್‌ಬಿ ರಮೇಶ್ ಹೇಳುವ ಪ್ರಕಾರ, ಪ್ರಗ್ನಾನಂದ ಅವರ ಆಟ ಹೆಚ್ಚು ನಿರ್ಣಾಯಕ ಮತ್ತು ಕ್ಲಿನಿಕಲ್. ಅಲ್ಲದೆ ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ತನ್ನ ತಾಯ್ನಾಡಿನಲ್ಲೇ ಈ ಟೂರ್ನಿ ನಡೆಯುತ್ತಿರುವುದರಿಂದ ಪ್ರಗ್ನಾನಂದಗೆ ಹೆಚ್ಚುವರಿ ಒತ್ತಡವಿಲ್ಲ ಎಂದಿದ್ದಾರೆ.

ಗುಕೇಶ್

ಸ್ಪೇನ್‌ನಲ್ಲಿ ಅತ್ಯಂತ ಯಶಸ್ವಿ ಪ್ರವಾಸ ಮುಗಿಸಿದ ಗುಕೇಶ್ ಅವರು ಲೀಗ್‌ನಲ್ಲಿ ನಾಲ್ಕು ಪಂದ್ಯಾವಳಿಗಳನ್ನು ಗೆದ್ದಿದ್ದಾರೆ. ಜೊತೆಗೆ ಬಿಯೆಲ್ ಜಿಎಂ ಟ್ರಯಥ್ಲಾನ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಚೆಸ್ ಇತಿಹಾಸದಲ್ಲಿ ವೀ ಯಿ ನಂತರ 2700-ರೇಟಿಂಗ್ ಶಿಖರವನ್ನು ಏರಿದ ನಾಲ್ಕನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗೂ ಮೊದಲು ಕಾರ್ಲ್ಸೆನ್ ಮತ್ತು ಅಲಿರೆಜಾ ಫಿರೌಜ್ಜಾ ಈ ಸಾಧನೆ ಮಾಡಿದ್ದರು.

ನಿಹಾಲ್ ಮತ್ತು ರೌನಕ್

ನಿಹಾಲ್ ಮತ್ತು ರೌನಕ್ ಅವರು ಕೂಡ ಆಗಾಗ್ಗೆ ಪ್ರಬಲ ಆಟವನ್ನು ಪ್ರದರ್ಶಿಸಿದ ಆಟಗಾರರಾಗಿದ್ದಾರೆ. ಕೆಳ ಬೋರ್ಡ್‌ಗಳಲ್ಲಿ ರೌನಕ್ ಉಪಸ್ಥಿತಿಯು ಭಾರತ ಬಿ ತಂಡಕ್ಕೆ ಹೆಚ್ಚು ಉಪಯುಕ್ತವಾಗಿದೆ. ಆದರೆ ನಿಹಾಲ್ ಅವರ ಒಲಿಂಪಿಯಾಡ್‌ ಹಾದಿ ಅಷ್ಟೇನೂ ಸುಗಮವಾಗಿಲ್ಲ. ಅವರು ಶಾರ್ಜಾ ಓಪನ್‌ನಲ್ಲಿ 37 ನೇ ಸ್ಥಾನವನ್ನು ಪಡೆದರು. ಇದರೊಂದಿಗೆ 14 ನೇ ಶ್ರೇಯಾಂಕವನ್ನು ತಲುಪಿದ್ದಾರೆ. ಜೊತೆಗೆ ನಿಹಾಲ್ ಆಡಿರುವ ಕೊನೆಯ 15 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಈ ನಾಲ್ವರು ಕಿರಿಯ ಗ್ರ್ಯಾಂಡ್ ಮಾಸ್ಟರ್​ಗಳಲ್ಲಿ ಅತ್ಯಂತ ಕಿರಿಯ (16 ವರ್ಷ) ಗ್ರ್ಯಾಂಡ್ ಮಾಸ್ಟರ್ ರೌನಕ್ ಮಾತ್ರ ಯಾವುದೇ ಅಲಂಕಾರಗಳಿಲ್ಲದ, ಸ್ಥಿರ ಆಟಗಾರ ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ವೆಸ್ಟ್‌ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿಯಲ್ಲಿ ರೌನಕ್ ಅವರಿಗೆ ಮಾರ್ಗದರ್ಶಕರಾಗಿರುವ ಆನಂದ್ ಅವರೇ ರೌನಕ್ ಶ್ರದ್ಧೆಗೆ ಮಾರುಹೋಗಿದ್ದರು. ರೌನಕ್ ಕೇವಲ 12 ವರ್ಷದವರಾಗಿದ್ದಾಗಲೇ ಐಲ್ ಆಫ್ ಮ್ಯಾನ್ ಚೆಸ್ ಟೂರ್ನಮೆಂಟ್‌ನಲ್ಲಿ ಆನಂದ್‌ಗೆ ಪ್ರಬಲ ಫೈಪೋಟಿ ನೀಡಿದ್ದರು. ರೌನಕ್ ಕೂಡ ತನ್ನ ಕೊನೆಯ 30 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಸೋತಿದ್ದಾರೆ.

Published On - 10:00 pm, Thu, 28 July 22

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್