44th Chess Olympiad 2022 Inauguration- ಇಂದು ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್​ಗೆ ಪ್ರಧಾನಿ ಮೋದಿ ಚಾಲನೆ

PM Modi in Tamil Nadu- ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದರ ಈವೆಂಟ್ ಜುಲೈ 28 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಆಗಸ್ಟ್ 10 ರವರೆಗೆ ನಡೆಯಲಿದೆ.

44th Chess Olympiad 2022 Inauguration- ಇಂದು ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್​ಗೆ ಪ್ರಧಾನಿ ಮೋದಿ ಚಾಲನೆ
PM Modi
TV9kannada Web Team

| Edited By: pruthvi Shankar

Jul 28, 2022 | 4:04 PM

ಇಂದು 44ನೇ ಚೆಸ್ ಒಲಿಂಪಿಯಾಡ್​ಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅದ್ಧೂರಿ ಚಾಲನೆ ನೀಡಲಿದ್ದಾರೆ. 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ವಿಶ್ವದ ಅತಿ ದೊಡ್ಡ ಚೆಸ್ ಸ್ಪರ್ಧೆಯಾಗಿದೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ (Jawaharlal Nehru Stadium in Chennai) ಪ್ರಧಾನಿ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದರ ಈವೆಂಟ್ ಜುಲೈ 28 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಆಗಸ್ಟ್ 10 ರವರೆಗೆ ನಡೆಯಲಿದೆ. 44ನೇ ಚೆಸ್ ಒಲಿಂಪಿಯಾಡ್ (44th Chess Olympiad) ಪಂದ್ಯಗಳು ಮಾಮಲಪುರಂನ ಪೂಂಜೇರಿ ಗ್ರಾಮದಲ್ಲಿ ನಡೆಯಲಿದೆ.

ಚೆಸ್ ಒಲಿಂಪಿಯಾಡ್ ಉದ್ಘಾಟನೆಗೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟನೆ ಹಾಗೂ ಕ್ರೀಡಾಕೂಟದ ಸ್ಥಳಕ್ಕೆ ಭೇಟಿ ನೀಡಿದ್ದರು. ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣ ಮತ್ತು ಪೂಂಜೇರಿ ಗ್ರಾಮದಲ್ಲಿ ಭದ್ರತಾ ವ್ಯವಸ್ಥೆಗಳನ್ನು ವೀಕ್ಷಿಸಿದರು.

ಪ್ರಧಾನಿ ಮೋದಿಗೆ ಬಿಗಿ ಭದ್ರತೆ

ಮೋದಿ ಭೇಟಿ ಹಿನ್ನೆಲೆಯಲ್ಲಿ ಚೆನ್ನೈ ನಗರದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಗ್ರೇಟರ್ ಚೆನ್ನೈ ಪೊಲೀಸರು ಐದು ಹಂತದ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. 22000 ಪೊಲೀಸರು ಭದ್ರತೆಯಲ್ಲಿ ನಿರತರಾಗಿದ್ದಾರೆ. ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ತಡೆಯಲು ಡ್ರೋನ್‌ಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಇದಲ್ಲದೇ ಸೆಕ್ಷನ್ 144 ಕೂಡ ಜಾರಿಯಾಗಲಿದೆ.

ತಮಿಳುನಾಡು ಸರ್ಕಾರವು ಪ್ರಧಾನಿಯ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ 4 ಜಿಲ್ಲೆಗಳ ಶಾಲಾ-ಕಾಲೇಜು ಹಾಗೂ ಇತರೆ ಸರ್ಕಾರೇತರ ಕಚೇರಿಗಳಿಗೂ ಗುರುವಾರ ರಜೆ ಘೋಷಿಸಲಾಗಿದೆ.

ಜುಲೈ 28 ಒಲಿಂಪಿಯಾಡ್‌ನ ಆರಂಭಿಕ ದಿನವಾಗಿರುವುದರಿಂದ, ಚೆನ್ನೈನ ಸಂಚಾರ ಪೊಲೀಸರು ಬುಧವಾರ ಮತ್ತು ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆಯನ್ನು ಘೋಷಿಸಿದ್ದಾರೆ.

14 ದಿನಗಳ ಕಾಲ ನಡೆಯಲಿದೆ ಚೆಸ್ ಒಲಿಂಪಿಯಾಡ್

44ನೇ ಚೆಸ್ ಒಲಿಂಪಿಯಾಡ್​ನಲ್ಲಿ ಭಾಗವಹಿಸಲು ವಿಶ್ವದ ಹಲವು ದೇಶಗಳ ಆಟಗಾರರು ಆಗಮಿಸಿದ್ದಾರೆ. ಭಾರತವು ಈ ಸ್ಪರ್ಧೆಯ ಆತಿಥೇಯ ಮತ್ತು ಪ್ರಮುಖ ಸ್ಪರ್ಧಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಆಟಗಾರರು ಈ 14 ದಿನಗಳ ಸುದೀರ್ಘ ಚೆಸ್ ರೇಸ್‌ನಲ್ಲಿ ಪ್ರದರ್ಶನ ನೀಡುವುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada