Chess World Cup 2023: ಚೆಸ್ ವಿಶ್ವಕಪ್: ಫೈನಲ್ಗೆ ಪ್ರವೇಶಿಸಿದ ಪ್ರಜ್ಞಾನಂದ
R. Praggnanandhaa: ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್ ಪ್ರವೇಶಿಸಿದ ಮೊದಲ ಚೆಸ್ ಚತುರ ಎಂಬ ಹೆಗ್ಗಳಿಕಗೆ ಆರ್. ಪ್ರಜ್ಞಾನಂದ ಪಾತ್ರರಾಗಿದ್ದಾರೆ.
ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಜಯ ಸಾಧಿಸಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಫೈನಲ್ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಚೆಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 2000 ಹಾಗೂ 2002 ರಲ್ಲಿ ಈ ಸಾಧನೆ ಮಾಡಿದ್ದರು.
ಭಾನುವಾರ ನಡೆದ ಸೆಮಿಫೈನಲ್ನ ಮೊದಲ ಗೇಮ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು. ಇನ್ನು 2ನೇ ಗೇಮ್ನಲ್ಲಿ ಫ್ಯಾಬಿಯಾನೊ ಕರುವಾನಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು.
ಅದರಂತೆ ಸೋಮವಾರ ನಡೆದ ಟೈಬ್ರೇಕರ್ನಲ್ಲಿ ಗೇಮ್ನಲ್ಲಿ ಪ್ರಜ್ಞಾನಂದ ಮೇಲೆ ಒತ್ತಡ ಹಾಕುವಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಚೆಸ್ ಪಟು ಫ್ಯಾಬಿಯಾನೊ ಕರುವಾನಾ ಯಶಸ್ವಿಯಾಗಿದ್ದರು. ಆದರೆ ನಿರ್ಣಾಯಕ ನಡೆಗಳ ಹಂತದಲ್ಲಿ ಮೇಲುಗೈ ಸಾಧಿಸಿದ 18 ರ ಹರೆಯದ ಭಾರತೀಯ ಚೆಸ್ ಚತುರ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
2ನೇ ಟೈಬ್ರೇಕರ್ ಗೇಮ್ನಲ್ಲೂ ಜಾಣ ನಡೆ ಪ್ರದರ್ಶಿಸಿದ ಪ್ರಜ್ಞಾನಂದ ಫ್ಯಾಬಿಯಾನೊ ಕರುವಾನಾ ಅವರ ಗೆಲುವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂದ್ಯವು 10+10 ಟೈಬ್ರೇಕ್‌ನತ್ತ ಸಾಗಿತು. ಇದಾದ ಬಳಿಕ ಮೊದಲ ರ್ಯಾಪಿಡ್ ಟೈಬ್ರೇಕ್ ನಲ್ಲಿ ಜಯ ಸಾಧಿಸುವ ಮೂಲಕ ಪ್ರಜ್ಞಾನಂದ ಫ್ಯಾಬಿಯಾನೊ ಮೇಲೆ ಒತ್ತಡ ಹೇರಿದರು.
ಅಂತಿಮವಾಗಿ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿ ಪ್ರಜ್ಞಾನಂದ ಫೈನಲ್ಗೆ ಪ್ರವೇಶಿಸಿದ್ದಾರೆ. ಇನ್ನು ಫೈನಲ್ನಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಪ್ರಜ್ಞಾನಂದ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಗೆಲ್ಲುವ ಮೂಲಕ ಯುವ ಚೆಸ್ ಚತುರ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.
🔥 Praggnanandhaa goes to the final of the #FIDEWorldCup!
The Indian prodigy managed to beat world #3 Fabiano Caruana 3.5-2.5 after tiebreaks and will battle it out against Magnus Carlsen for the title.
📷 Maria Emelianova pic.twitter.com/FDOjflp6jL
— International Chess Federation (@FIDE_chess) August 21, 2023
ಚದುರಂಗದಾಟದಲ್ಲಿ ವಿಶೇಷ ಸಾಧನೆ:
ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್ಗೆ ಪ್ರವೇಶಿಸಿದ ಮೊದಲ ಭಾರತೀಯ ಚೆಸ್ ಚತುರ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದ 18 ವರ್ಷದ ಆರ್. ಪ್ರಜ್ಞಾನಂದ ಇದೀಗ ಫೈನಲ್ಗೆ ಪ್ರವೇಶಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎಂಬ ದಾಖಲೆಯನ್ನು ತಮಿಳುನಾಡು ಮೂಲದ ರಮೇಶ್ ಬಾಬು ಪ್ರಜ್ಞಾನಂದ ನಿರ್ಮಿಸಿದ್ದಾರೆ.
ಫೈನಲ್ ಬಗ್ಗೆ ಪ್ರಜ್ಞಾನಂದ ಹೇಳಿದ್ದೇನು?
ನಾನು ಈ ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ಅವರನ್ನು ಎದುರಿಸುವುದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ನಾನು ಅವರ ವಿರುದ್ಧ ಆಡುವ ಏಕೈಕ ಮಾರ್ಗವೆಂದರೆ ಅದು ಫೈನಲ್ನಲ್ಲಿ ಮಾತ್ರ. ಅಲ್ಲದೆ ನಾನು ಫೈನಲ್‌ಗೇರುತ್ತೇನೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ ಎಂದು ಪ್ರಜ್ಞಾನಂದ ಹೇಳಿದ್ದಾರೆ.
Pragg speaks after his magnificent victory over Caruana on his qualification for Candidates and facing Magnus!#Praggnanandhaa #FIDEWorldCup2023 Courtesy: @FIDE_chess pic.twitter.com/XfLfoKvvWX
— H G Tannhaus (@tannhaushg) August 21, 2023
ಸೆಮಿಫೈನಲ್ನಲ್ಲಿ ನನ್ನ ರಕ್ಷಣಾತ್ಮಕ ಆಟದಿಂದ ಗೆದ್ದಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಕೆಲ ಗೇಮ್ಗಳು ತುಂಬಾ ಕಠಿಣವಾಗಿತ್ತು. ಆದರೆ ಕೆಲ ಹಂತದಲ್ಲಿ ಫ್ಯಾಬಿಯಾನೊ ಎಡವಿದರು. ಅಂತಿಮವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ. ಇದೀಗ ಫೈನಲ್ಗೆ ಬಂದಿದ್ದೇನೆ. ಅಲ್ಲದೆ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.
Published On - 9:03 pm, Mon, 21 August 23