CWG 2022: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಪದಕಕ್ಕಾಗಿ ಸೆಣಸಾಡಲಿದ್ದಾರೆ ಭಾರತದ ಈ 215 ಕ್ರೀಡಾಪಟುಗಳು
CWG 2022: ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ಜುಲೈ 28ರಿಂದ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಈ ಬಾರಿ ಭಾರತದ 215 ಆಟಗಾರರ ತಂಡ ಭಾಗವಹಿಸುತ್ತಿದೆ. ಈ 215 ಆಟಗಾರರಲ್ಲಿ 108 ಪುರುಷರು ಮತ್ತು 107 ಮಹಿಳೆಯರು ಸೇರಿದ್ದಾರೆ.
ಮತ್ತೊಮ್ಮೆ, ಕಾಮನ್‌ವೆಲ್ತ್ ಗೇಮ್ಸ್ (Commonwealth Games)ನಲ್ಲಿ ಭಾರತೀಯ ಆಟಗಾರರು ತಮ್ಮ ಪ್ರಾಬಲ್ಯವನ್ನು ತೋರಿಸಲು ಸಿದ್ಧರಾಗಿದ್ದಾರೆ. ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ಜುಲೈ 28ರಿಂದ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಈ ಬಾರಿ ಭಾರತದ 215 ಆಟಗಾರರ ತಂಡ ಭಾಗವಹಿಸುತ್ತಿದೆ. ಈ 215 ಆಟಗಾರರಲ್ಲಿ 108 ಪುರುಷರು ಮತ್ತು 107 ಮಹಿಳೆಯರು ಸೇರಿದ್ದಾರೆ. ಜ್ಯುವೆಲಿನ್ ಥ್ರೋವರ್ ನೀರಜ್ ಚೋಪ್ರಾ, ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ನಿಖತ್ ಜರೀನ್ (Neeraj Chopra , Wrestler Bajrang Poonia, Boxer Nikhat Zareen) ಅವರಂತಹ ಸ್ಟಾರ್ ಆಟಗಾರರನ್ನು ಈ ಬಾರಿ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೇ ಗುರಿಯೊಂದಿಗೆ ಭಾರತ ಕಾಮನ್‌ವೆಲ್ತ್ ಪ್ರವೇಶಿಸಲಿದೆ. ಭಾರತ ಹಲವು ಕ್ರೀಡೆಗಳಲ್ಲಿ ತಮ್ಮ ಆಟಗಾರರನ್ನು ಕಣಕ್ಕಿಳಿಸಲಿದೆ. ಭಾರತಕ್ಕಾಗಿ ಯಾವ ಆಟಗಾರರು ಪದಕಕ್ಕಾಗಿ ಸ್ಪರ್ಧಿಸುತ್ತಾರೆ ಎಂಬುದರ ಪೂರ್ಣ ಪಟ್ಟಿ ಇಲ್ಲಿದೆ.
ಅಥ್ಲೆಟಿಕ್ಸ್ ಆಟಗಾರರು
ಪುರುಷ ಆಟಗಾರ
ಲಾಂಗ್ ಜಂಪ್: ಎಂ. ಶ್ರೀಶಂಕರ್, ಮೊಹಮ್ಮದ್ ಅನೀಸ್ ಯಾಹ್ಯಾ ಮೆನ್ಸ್
ಜಾವೆಲಿನ್ ಎಸೆತ: ನೀರಜ್ ಚೋಪ್ರಾ, ಡಿಪಿ ಮನು, ರೋಹಿತ್ ಯಾದವ್
ಟ್ರಿಪಲ್ ಜಂಪ್: ಅಬ್ದುಲ್ಲಾ ಅಬೂಬೇಕರ್, ಅಲ್ದೋಜ್ ಪಾಲ್, ಪ್ರವೀಣ್ ಚಿತ್ರವೇಲ್
ಹೈ ಜಂಪ್: ತೇಜಸ್ವಿನ್ ಶಂಕರ್
ಶಾಟ್ ಪುಟ್: ತಜಿಂದರ್ಪಾಲ್ ಸಿಂಗ್ ತೂರ್
3000ಮೀ ಸ್ಟೀಪಲ್ ಚೇಸ್: ಅವಿನಾಶ್ ಸೇಬಲ್
ಮ್ಯಾರಥಾನ್: ನಿತೇಂದ್ರ ರಾವತ್
4 × 400 ಮೀ ರಿಲೇ: ಅಮೋಜ್ ಜಾಕೋಬ್, ನೋಹ್ ನಿರ್ಮಲ್ ಟಾಮ್, ಮೊಹಮ್ಮದ್ ಅಜ್ಮಲ್, ನಾಗನಾಥನ್ ಪಾಂಡಿ, ರಾಜೇಶ್ ರಮೇಶ್
10000ಮೀ ನಡಿಗೆ: ನಿತೇಂದ್ರ ರಾವತ್
ರೇಸ್ ವಾಕಿಂಗ್: ಸಂದೀಪ್ ಕುಮಾರ್, ಅಮಿತ್ ಖತ್ರಿ
ಪ್ಯಾರಾಸ್ಪೋರ್ಟ್: ದೇವೆಂದರ್, ಅನೀಶ್ ಕುಮಾರ್
ಮಹಿಳಾ ಆಟಗಾರ್ತಿಯರು
ಲಾಂಗ್ ಜಂಪ್: ಆನ್ಸಿ ಸೋಜನ್, ಐಶ್ವರ್ಯಾ ಬಾಬು
ಶಾಟ್ ಪುಟ್: ಮನ್‌ಪ್ರೀತ್ ಕೌರ್
ಹ್ಯಾಮರ್ ಥ್ರೋ: ಸರಿತಾ ರೋಮಿತ್ ಸಿಂಗ್, ಮಂಜು ಬಾಲಾ ಸಿಂಗ್
100 ಮೀ ಓಟ: ಧನಲಕ್ಷ್ಮಿ ಸೇಕರ್
4 × 100 ಮೀ ರಿಲೇ: ಧನಲಕ್ಷ್ಮಿ ಸೇಕರ್, ದುತಿ ಚಂದ್, ಹಿಮಾ ದಾಸ್, ಶ್ರಬಾನಿ ನಂದಾ, ಎಂವಿ ಜಿಲ್ನಾ, ಎನ್ಎಸ್ ಸಿಮಿ
100 ಮೀ ಹರ್ಡಲ್ಸ್: ಜ್ಯೋತಿ ಯರಾಜಿ
10000ಮೀ ಓಟದ ನಡಿಗೆ: ಪ್ರಿಯಾಂಕಾ ಗೋಸ್ವಾಮಿ, ಭಾವನಾ ಜಟ್
ಡಿಸ್ಕಸ್ ಥ್ರೋ: ನವಜಿತ್ ಧಿಲ್ಲೋನ್, ಸೀಮಾ ಪೂನಿಯಾ
ಜಾವೆಲಿನ್ ಥ್ರೋ: ಅಣ್ಣು ರಾಣಿ, ಶಿಲ್ಪಾ ರಾಣಿ
ಬ್ಯಾಡ್ಮಿಂಟನ್ ಆಟಗಾರರು
ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್,
ಪುರುಷರ ಡಬಲ್ಸ್: ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ, ಬಿ ಸುಮಿತ್ ರೆಡ್ಡಿ
ಮಹಿಳೆಯರ ಸಿಂಗಲ್ಸ್: ಪಿವಿ ಸಿಂಧು, ಆಕರ್ಷಿ ಕಶ್ಯಂ
ಮಹಿಳೆಯರ ಡಬಲ್ಸ್: ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ತ್ರಿಸಾ ಜಾಲಿ
ಬಾಕ್ಸಿಂಗ್
ಪುರುಷ ಬಾಕ್ಸರ್‌ಗಳು: ಅಮಿತ್ ಪಂಘಾಲ್ (63.5 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ), ಶಿವ ಥಾಪಾ (51 ಕೆಜಿ), ರೋಹಿತ್ ಟೋಕಾಸ್ (67 ಕೆಜಿ), ಸುಮಿತ್ ಕುಂದು (75 ಕೆಜಿ), ಆಶಿಶ್ ಚೌಧರಿ (80 ಕೆಜಿ), ಸಂಜೀತ್ ಕುಮಾರ್ (92 ಕೆಜಿ) , ಸೀ (92+ ಕೇಜಿ),
ಮಹಿಳಾ ಬಾಕ್ಸರ್‌ಗಳು: ನೀತು ಗಂಗಾಸ್ (48 ಕೆಜಿ), ನಿಖತ್ ಜರೀನ್ (50 ಕೆಜಿ), ಜಸ್ಮೀರ್ ಲಂಬೋರಿಯಾ (60 ಕೆಜಿ), ಲವ್ಲಿನಾ ಬೊರ್ಗೊಹೆನ್ (70 ಕೆಜಿ)
ಟೇಬಲ್ ಟೆನ್ನಿಸ್ ಆಟಗಾರರು
ಪುರುಷ ಆಟಗಾರರು: ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಸನಿಲ್ ಶೆಟ್ಟಿ, ಹರ್ಮೀತ್ ದೇಸಾಯಿ
ಮಹಿಳಾ ಆಟಗಾರ್ತಿಯರು: ಮನಿಕಾ ಬಾತ್ರಾ, ದಿಯಾ ಚಿತಾಲ್, ಶ್ರೀಜಾ ಅಕುಲಾ, ರೀತ್ ರಿಷಿ
ಕುಸ್ತಿ
ಪುರುಷ ಕುಸ್ತಿಪಟುಗಳು: ರವಿಕುಮಾರ್ ದಹಿಯಾ (57 ಕೆಜಿ), ಬಜರಂಗ್ ಪೂನಿಯಾ (65 ಕೆಜಿ), ನವೀನ್ (74 ಕೆಜಿ), ದೀಪಕ್ ಪೂನಿಯಾ (86 ಕೆಜಿ), ದೀಪಕ್, ಮೋಹಿತ್ ಅಗರ್ವಾಲ್ (125 ಕೆಜಿ)
ಮಹಿಳಾ ಕುಸ್ತಿಪಟುಗಳು: ಪೂಜಾ ಗೆಹ್ಲೋಟ್ (50 ಕೆಜಿ), ವಿನೇಶ್ ಫೋಗಟ್ (53 ಕೆಜಿ) ಅಂಶು ಮಲಿಕ್ (57 ಕೆಜಿ), ಸಾಕ್ಷಿ ಮಲಿಕ್ (62 ಕೆಜಿ), ದಿವ್ಯಾ ಕಕ್ರನ್ (68 ಕೆಜಿ), ಪೂಜಾ ಸಿಹಾಗ್ (76 ಕೆಜಿ)
ವೇಟ್ ಲಿಫ್ಟಿಂಗ್ ಕ್ರೀಡಾಪಟುಗಳು
ಪುರುಷ ವೇಟ್‌ಲಿಫ್ಟರ್‌ಗಳು: ಸಂಕೇತ್ ಮಹಾದೇವ್ (55 ಕೆಜಿ), ಚನ್ನಂಬಮ್ ರಿಷಿಕಾಂತ್ ಸಿಂಗ್ (55 ಕೆಜಿ), ಗುರುರಾಜ್ ಪೂಜಾರಿ (61 ಕೆಜಿ), ಜೆರೆಮಿ (67 ಕೆಜಿ), ಅಂಚಿತಾ ಶೂಲಿ (73 ಕೆಜಿ), ಅಜಯ್ ಸಿಂಗ್ (81 ಕೆಜಿ), ವಿಕಾಸ್ ಠಾಕೂರ್ (96 ಕೆಜಿ) , ರಾಗ್ಲಾ ವೆಂಕಟ್ ರಾಹುಲ್ (96 ಕೆಜಿ), ಲವ್‌ಪ್ರೀತ್ ಸಿಂಗ್ (109 ಕೆಜಿ), ಗುರುದೀಪ್ ಸಿಂಗ್ (+109)
ಮಹಿಳಾ ವೇಟ್‌ಲಿಫ್ಟರ್: ಮೀರಾಬಾಯಿ ಚಾನು (49 ಕೆಜಿ), ಬಿಂದ್ಯಾರಾಣಿ ದೇವಿ (55 ಕೆಜಿ), ಪಾಪಿ ಹಜಾರಿಕಾ (59 ಕೆಜಿ), ಹರ್ಜಿಂದರ್ ಕೌರ್ (71 ಕೆಜಿ), ಉಷಾ ಕುಮಾರಿ (87 ಕೆಜಿ), ಪೂನಂ ಪಾಂಡೆ (+87 ಕೆಜಿ)
ಹಾಕಿ
ಭಾರತ ಪುರುಷರ ಹಾಕಿ ತಂಡ
ಪಿಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಮತ್ತು ಜರ್ಮನ್ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್ (ಕ್ಯಾಪ್ಟನ್), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಂಠ ಶರ್ಮಾ. ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್
ಭಾರತ ಮಹಿಳಾ ಹಾಕಿ ತಂಡ
ಸವಿತಾ (ಕ್ಯಾಪ್ಟನ್ / ಗೋಲ್‌ಕೀಪರ್), ರಜನಿ ಎತಿಮಾರ್ಪು (ಗೋಲ್‌ಕೀಪರ್), ದೀಪ್ ಗ್ರೇಸ್ ಎಕ್ಕಾ (ಉಪ-ನಾಯಕಿ / ಡಿಫೆಂಡರ್), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ನಿಶಾ, ಸುಶೀಲಾ ಚಾನು, ಪುಖ್ರಂಬಮ್, ಮೋನಿಕಾ, ನೇಹಾ, ಜ್ಯೋತಿ, ನವಜೋತ್ ಕೌರ್, ವಂದನಾ ಕೌರ್ , ಲಾಲ್ರೆಮ್ ಸಿಯಾಮಿ, ನವನೀತ್ ಕೌರ್, ಶರ್ಮಿಳಾ ದೇವಿ ಮತ್ತು ಸಂಗೀತಾ ಕುಮಾರಿ