AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022 Opening Ceremony LIVE Streaming: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ? ಕಾರ್ಯಕ್ರಮದ ಪೂರ್ಣ ಮಾಹಿತಿ

CWG 2022 Opening Ceremony LIVE Streaming: ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭವು ಸ್ಥಳೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ ಭಾರತದ ಕಾಲಮಾನದ ಪ್ರಕಾರ 11.30 ಕ್ಕೆಆರಂಭವಾಗಲಿದೆ.

CWG 2022 Opening Ceremony LIVE Streaming: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ? ಕಾರ್ಯಕ್ರಮದ ಪೂರ್ಣ ಮಾಹಿತಿ
CWG 2022 Opening Ceremony
TV9 Web
| Updated By: ಪೃಥ್ವಿಶಂಕರ|

Updated on: Jul 27, 2022 | 7:35 AM

Share

ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಜುಲೈ 28 ರಿಂದ ಪ್ರಾರಂಭವಾಗಲಿದ್ದು, ಇದನ್ನು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಯೋಜಿಸಲಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭವಾಗಲು ಇನ್ನೇನು ದಿನಗಣನೆ ಬಾಕಿ ಇದೆ. 22ನೇ ಆವೃತ್ತಿಯು ಜುಲೈ 28 ರಂದು ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಒಟ್ಟು 72 ರಾಷ್ಟ್ರಗಳು ಕಾಮನ್‌ವೆಲ್ತ್ ಗೇಮ್ಸ್‌ನ ಸದಸ್ಯರಾಗಿದ್ದಾರೆ. ಈ ಎಲ್ಲಾ ದೇಶಗಳ ಒಟ್ಟು 5000 ಕ್ಕೂ ಹೆಚ್ಚು ಆಟಗಾರರು ವಿವಿಧ ಕ್ರೀಡೆಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಬರ್ಮಿಂಗ್ಹ್ಯಾಮ್ (Birmingham) ಮೊದಲ ಬಾರಿಗೆ ಈ ಆಟವನ್ನು ಆಯೋಜಿಸುತ್ತಿದೆ. ಲಂಡನ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ 1934 ರ ಪಂದ್ಯಗಳ ನಂತರ ಮೂರನೇ ಬಾರಿಗೆ ಇಂಗ್ಲೆಂಡ್‌ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಭಾರತದ ಧ್ವಜದಾರಿ ಯಾರು?

ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಇದರಲ್ಲಿ 30,000ಕ್ಕೂ ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಇರುತ್ತಾರೆ. ಭಾರತೀಯ ಕಾಲಮಾನ ಬೆಳಗ್ಗೆ 11.30ಕ್ಕೆ ಸಮಾರಂಭ ಆರಂಭವಾಗಲಿದೆ. ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಚಿನ್ನದ ಪದಕ ವಿಜೇತ, ಭಾರತದ ನೀರಜ್ ಚೋಪ್ರಾ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂಜುರಿಯಿಂದಾಗಿ ಈ ಬಾರಿಯ ಕಾಮನ್​ವೆಲ್ತ್ ಕೀಡಾಕೂಟದಿಂದ ನೀರಜ್ ಹಿಂದೆ ಸರಿದಿದ್ದಾರೆ. ಹೀಗಾಗಿ ಭಾರತದ ಧ್ವಜದಾರಿ ಯಾರ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಕಳೆದ ಬಾರಿ ಅಂದರೆ 2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್​ವೆಲ್ತ್ ಗೇಮ್​ನಲ್ಲಿ ಭಾರತದ ಧ್ವಜಧಾರಿಯಾಗಿ ಪಿವಿ ಸಿಂಧು ಭಾರತವನ್ನು ಮುನ್ನಡೆಸಿದ್ದರು. ಹೀಗಾಗಿ ಈ ಬಾರಿಯೂ ಅವರೆ ಭಾರತದ ಧ್ವಜದಾರಿಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ
Image
CWG 2022: ಭಾರತ ಮಹಿಳಾ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರ್ತಿಗೆ ಕೊರೊನಾ ಸೋಂಕು..!
Image
CWG 2022: ಕಾಮನ್‌ವೆಲ್ತ್‌ ಗೇಮ್ಸ್​ನಿಂದ ನೀರಜ್ ಔಟ್, ಭಾರತಕ್ಕೆ ಪದಕ ಮಿಸ್! ಪಾಕಿಸ್ತಾನಕ್ಕೆ ತೆರೆಯಿತು ಭಾಗ್ಯದ ಬಾಗಿಲು
Image
CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭ ಯಾವಾಗ ನಡೆಯಲಿದೆ?

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭ ಜುಲೈ 28 ರಂದು ನಡೆಯಲಿದೆ

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭ ಯಾವಾಗ ಪ್ರಾರಂಭವಾಗುತ್ತದೆ?

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭವು ಸ್ಥಳೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ ಭಾರತದಲ್ಲಿ 11.30 ಕ್ಕೆ ವೀಕ್ಷಿಸಬಹುದಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭವು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 ರ ಉದ್ಘಾಟನಾ ಸಮಾರಂಭವನ್ನು ಎಲ್ಲಿ ವೀಕ್ಷಿಸಬಹುದು?

ಬರ್ಮಿಂಗ್ಹ್ಯಾಮ್ ಪಂದ್ಯಗಳನ್ನು ಸೋನಿ TEN 1, Sony TEN 2, Sony TEN 3, Sony SIX ಮತ್ತು Sony TEN 4 ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸೋನಿ LIV ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ಲಭ್ಯವಿರುತ್ತದೆ. ಸೋನಿ ನೆಟ್‌ವರ್ಕ್ ಹೊರತುಪಡಿಸಿ, ಡಿಡಿ ಸ್ಪೋರ್ಟ್ಸ್ ಭಾರತದಲ್ಲಿ ಉದ್ಘಾಟನಾ ಸಮಾರಂಭವನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.

ಕಾಮನ್‌ವೆಲ್ತ್ ಗೇಮ್ಸ್ 2022 ಯಾವಾಗ ಕೊನೆಗೊಳ್ಳುತ್ತದೆ?

ಕಾಮನ್‌ವೆಲ್ತ್ ಕ್ರೀಡಾಕೂಟವು ಸೋಮವಾರ, ಆಗಸ್ಟ್ 8, 2022 ರಂದು ಮುಕ್ತಾಯಗೊಳ್ಳಲಿದ್ದು, ಹಾಕಿಯನ್ನು ಅಂತಿಮ ಪಂದ್ಯವಾಗಿ ಆಡಲಾಗುತ್ತದೆ.

ಕಾಮನ್‌ವೆಲ್ತ್ ಗೇಮ್ಸ್ 2022 ರ ಮುಕ್ತಾಯ ಸಮಾರಂಭ ಯಾವಾಗ?

ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಸೋಮವಾರ 8 ಆಗಸ್ಟ್ 2022 ರಂದು ಉದ್ಘಾಟನಾ ಸಮಾರಂಭದಂತೆಯೇ ನಡೆಯಲಿದೆ. ಸಮಾರಂಭವು ಸ್ಥಳೀಯ ಸಮಯ (ಯುಕೆ) 12:30 ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:30 ಕ್ಕೆ ಕೊನೆಗೊಳ್ಳುತ್ತದೆ

ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ