ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ ಮೂರನೇ ದಿನವು ಕೂಡ ಪಂದ್ಯಗಳಿಂದ ತುಂಬಿದೆ. ವಿಶ್ವದ ಅತ್ಯುತ್ತಮ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಪಂದ್ಯ ನಡೆಯುವ ವೇಳೆ ಕುತೂಹಲಕಾರಿ ದೃಶ್ಯವೊಂದು ಕಂಡುಬಂತು. ಎದುರಾಳಿ ತಂಡದ ಕೋಚ್ ಒಬ್ಬ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ದೃಶ್ಯ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿತು. ಕಾಮನ್‌ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.
ಈವೆಂಟ್‌ನ ಎರಡನೇ ದಿನ ಮಲೇಷ್ಯಾ ಮತ್ತು ಜಮೈಕಾ ನಡುವೆ ಬ್ಯಾಡ್ಮಿಂಟನ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಜಮೈಕಾದ ಅತ್ಯುತ್ತಮ ಆಟಗಾರ ಸ್ಯಾಮ್ಯುಯೆಲ್ ರಿಕೆಟ್ಸ್ ಅವರ ಬೂಟ್ ಪಂದ್ಯದ ವೇಳೆ ಹರಿಯಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಜೊತೆಗೆ ಹರಿದ ಬೂಟ್ ತೊಟ್ಟು ಸ್ಯಾಮ್ಯುಯೆಲ್ ರಿಕೆಟ್ಸ್ಗೆ ಆಡಲು ಕಷ್ಟವಾಗಿತ್ತು. ಇದನ್ನು ಗಮನಿಸಿದ ಮಲೇಷಿಯಾದ ಕೋಚ್ ಹೆಂಡ್ರುವಾನ್, ಎದುರಾಳಿ ಆಟಗಾರ ರಿಕೆಟ್ಸ್ಗೆ ತಾವು ಧರಿಸಿದ್ದ ಬೂಟ್ಗಳನ್ನು ತೆಗೆದುಕೊಟ್ಟು ಕ್ರೀಡಾಸ್ಫೂರ್ತಿ ತೋರಿದರು.
When the opposition coach is your shoe size and saves the day ?
It’s what the Games is all about!#B2022 #CommonwealthGames #Badminton pic.twitter.com/wnJcJ7uNKW
— Commonwealth Sport (@thecgf) July 30, 2022
ತರಬೇತುದಾರ ಹೆಂಡ್ರೇವನ್ ಅವರ ಈ ಕಾರ್ಯವನ್ನು ಕಂಡು ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪ್ರೇಕ್ಷಕರೆಲ್ಲರೂ ಚಪ್ಪಾಳೆ ತಟ್ಟಲಾರಂಭಿಸಿದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕಾಗಿ ಕೋಚ್‌ಗೆ ಜಮೈಕಾ ಆಟಗಾರ ರಿಕೆಟ್ಸ್ ಕೂಡ ಧನ್ಯವಾದ ಹೇಳಿದ್ದಾರೆ. ಆದರೆ ಈ ಪಂದ್ಯದಲ್ಲಿ ರಿಕೆಟ್ಸ್ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯದಲ್ಲಿ ರಿಕೆಟ್ಸ್ ತನ್ನ ಜೊತೆಗಾರ ಜೋಯಲ್ ಆಂಗಸ್ ವಿರುದ್ಧ 21-7, 21-11 ಅಂತರದಲ್ಲಿ ಸೋಲು ಅನುಭವಿಸಿದರು.
Published On - 6:13 pm, Sun, 31 July 22