CWG 2022: ಕಾಮನ್​ವೆಲ್ತ್​ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್​ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ..!

CWG 2022: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂಕೇತ್‌ಗೆ ರಾಜ್ಯ ಸರ್ಕಾರದಿಂದ 30 ಲಕ್ಷ ಮತ್ತು ಅವರ ಕೋಚ್‌ಗೆ ಏಳೂವರೆ ಲಕ್ಷ ಹಣ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

CWG 2022: ಕಾಮನ್​ವೆಲ್ತ್​ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್​ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ..!
ಸಂಕೇತ್ ಸರ್ಗರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ
TV9kannada Web Team

| Edited By: pruthvi Shankar

Jul 31, 2022 | 3:33 PM

ಸಾಂಗ್ಲಿಯ ಸಂಕೇತ್ ಸರ್ಗರ್ (Sanket Sargar) ಬರ್ಮಿಂಗ್ ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (Commonwealth Games) ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ (CWG 2022 Weightlifting) ಅವರು 55 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) ಅವರು ಬೆಳ್ಳಿ ಪದಕ ಗೆದ್ದ ಅಥ್ಲೀಟ್ ಸಂಕೇತ್ ಸರ್ಗರ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂಕೇತ್‌ಗೆ ರಾಜ್ಯ ಸರ್ಕಾರದಿಂದ 30 ಲಕ್ಷ ಮತ್ತು ಅವರ ಕೋಚ್‌ಗೆ ಏಳೂವರೆ ಲಕ್ಷ ಹಣ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಸಂಕೇತ್ ಅವರ ಕಾರ್ಯವೈಖರಿಯನ್ನು ಗಮನಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ರಾಜ್ಯ ಸರ್ಕಾರದಿಂದ ಮೂವತ್ತು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಅದೇ ಸಮಯದಲ್ಲಿ ಮುಖ್ಯಮಂತ್ರಿಗಳು ಔರಂಗಾಬಾದ್‌ನಲ್ಲಿ ಸಂಕೇತ್​ ಕೋಚ್‌ಗೆ ಏಳೂವರೆ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.

ಸಂಕೇತ್ ಸರ್ಗರ್ ಬಗ್ಗೆ…

-ಸಂಕೇತ್ ಸರ್ಗರ್ ಮೂಲತಃ ಸಾಂಗ್ಲಿಯವರು

– ಸಂಕೇತ್ ತನ್ನ ತಂದೆಯ ಪಾನ್ ಮತ್ತು ಟೀ ಅಂಗಡಿ ನಡೆಸುವ ಮೂಲಕ ತನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ.

– ಸಂಕೇತ್ ಕೂಡ ತಂದೆಯ ಕೆಲಸಕ್ಕೆ ಸಹಾಯ ಮಾಡುತ್ತಾರೆ.

– ಸಂಕೇತ್ ತನ್ನ ತಂದೆಯ ಟೀ ಅಂಗಡಿಯಲ್ಲಿ ಮೂಂಗ್ ವಡಾ ಮತ್ತು ವಡಾ ಪಾವ್ ಮಾಡುವುದರಲ್ಲಿ ಪರಿಣಿತರು.

– ಸಂಕೇತ್ ಅವರ ತಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಕ್ರೀಡಾ ಕ್ಷೇತ್ರದಲ್ಲಿ ಯಶಸ್ವಿ ಕ್ರೀಡಾಪಟುಗಳನ್ನು ನೀಡಿದ್ದಾರೆ.

– ಸರ್ಗರ್ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ

– ಇವರಲ್ಲಿ ಕಾಜಲ್ ಮತ್ತು ಸಂಕೇತ್ ಇಬ್ಬರೂ ವೇಟ್ ಲಿಫ್ಟರ್​ಗಳು

256 ಕೆಜಿ ಭಾರ ಎತ್ತಿ ದಾಖಲೆ

21ರ ಹರೆಯದ ಸಂಕೇತ್ ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 256 ಕೆಜಿ ಭಾರ ಎತ್ತುವ ಮೂಲಕ ದಾಖಲೆ ಬರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಹಲವು ಪದಕಗಳನ್ನು ಗೆದ್ದಿದ್ದಾರೆ. ಸಂಕೇತ್ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಇತಿಹಾಸದ ವಿದ್ಯಾರ್ಥಿ ಕೂಡ ಆಗಿದ್ದಾರೆ.

ಇಂಜುರಿಯಿಂದ ಚಿನ್ನ ಮಿಸ್

ಇದನ್ನೂ ಓದಿ

ಸ್ನ್ಯಾಚ್‌ನಲ್ಲಿ ಸರ್ಗರ್ ಮೊದಲ ಪ್ರಯತ್ನದಲ್ಲಿ 107 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತಿದರು. ಮೂರನೇ ಯತ್ನದಲ್ಲಿ 113 ಕೆ.ಜಿ ಭಾರ ಎತ್ತುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಅದೇ ಸಮಯದಲ್ಲಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ ಸರ್ಗರ್ 135 ಭಾರ ಎತ್ತಿದರು, ಆದರೆ ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ ಅವರು 139 ಕೆಜಿ ತೂಕ ಎತ್ತುವ ಪ್ರಯತ್ನದಿಂದ ಹಿಂದೆ ಸರಿದರು. ಮಲೇಷ್ಯಾ ಆಟಗಾರ ಕೊನೆಯ ಪ್ರಯತ್ನದಲ್ಲಿ 142 ಕೆಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ ಮಲೇಷ್ಯಾದ ಬಿನ್ 107 ಕೆಜಿ ಭಾರ ಎತ್ತಿದರು. ಹೀಗಾಗಿ ಚಿನ್ನದ ಪದಕಕ್ಕೆ ಅವರು ಕೊರಳೊಡ್ಡಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada