ಭಾರತದ ಸಂದೀಪ್ ಕುಮಾರ್ ಕಾಮನ್‌ವೆಲ್ತ್ ಗೇಮ್ಸ್-2022 (Commonwealth Games-2022)ರ ಪುರುಷರ 10,000 ಮೀಟರ್ ನಡಿಗೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಸಂದೀಪ್ 38 ನಿಮಿಷ 49 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನ ಪಡೆದರು. ಆಸ್ಟ್ರೇಲಿಯದ ಇವಾನ್ ಡನ್ಫಿ 38 ನಿಮಿಷ 36:37 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದು ಅಗ್ರಸ್ಥಾನ ಪಡೆದರು. ಮತ್ತೊಂದೆಡೆ, ಈ ದೂರವನ್ನು 38 ನಿಮಿಷ 42:33 ಸೆಕೆಂಡುಗಳಲ್ಲಿ ಕ್ರಮಿಸಿದ ಡೆಕ್ಲಾನ್ ಟಿಂಗೆ ಬೆಳ್ಳಿ ಪದಕ ಗೆದ್ದರು. ಈವೆಂಟ್‌ನಲ್ಲಿನ ಮತ್ತೊಬ್ಬ ಭಾರತೀಯ ಅಮಿತ್ ಖತ್ರಿ, ಸೀಸನ್ನ ಅತ್ಯುತ್ತಮ ಸಮಯ (43:04.97)ದೊಂದಿಗೆ ಒಂಬತ್ತನೇ ಸ್ಥಾನ ಪಡೆದರು.
It’s an #Indian day at the #CommonwealthGames2022 as Sandeep Kumar wins a bronze medal in the men’s 10000m Race Walk with a time of 38:49.21 minutes after the Gold & Silver medal in the men’s Triple Jump by Eldhose Paul (17.03m) and Abdulla Aboobacker (17.02m)#IndianAthletics pic.twitter.com/Ult1LvcPJ6
ಇದನ್ನೂ ಓದಿ— Athletics Federation of India (@afiindia) August 7, 2022
ಒಲಿಂಪಿಕ್ಸ್‌ನಲ್ಲಿ ವಿಫಲ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಂದೀಪ್‌ಗೆ ಇದು ಮೊದಲ ಪದಕವಾಗಿದೆ. ಈ ಹಿಂದೆಯೂ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರೂ ಯಾವುದೇ ಪವಾಡವನ್ನು ಮಾಡಲು ಸಾಧ್ಯವಾಗಿರಲಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ, ಅವರು 50 ಕಿಮೀ ಓಟದ ನಡಿಗೆಯಲ್ಲಿ ಭಾಗವಹಿಸಿ, 35 ನೇ ಸ್ಥಾನ ಪಡೆದಿದ್ದರು. ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 20 ಕಿಮೀ ಓಟದ ನಡಿಗೆಯಲ್ಲಿ ಭಾಗವಹಿಸಿ 23 ನೇ ಸ್ಥಾನ ಪಡೆದರು. ಆದರೆ 50 ಕಿ.ಮೀ ಮತ್ತು 20 ಕಿ.ಮೀ ಓಟದ ನಡಿಗೆಯಲ್ಲಿ ಸಂದೀಪ್ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2015ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿ 50 ಕಿ.ಮೀ ಓಟದ ನಡಿಗೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಾಧನೆ
ಸಂದೀಪ್‌ಗಿಂತ ಮೊದಲು ಭಾರತ ಅಥ್ಲೆಟಿಕ್ಸ್‌ನಲ್ಲಿ ಇನ್ನೂ ಹಲವು ಯಶಸ್ಸನ್ನು ಗಳಿಸಿತ್ತು. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ಡೋಸ್ ಪೌಲ್ ನೇತೃತ್ವದ ಭಾರತ ಮೊದಲೆರಡು ಸ್ಥಾನ ಗಳಿಸಿ ಇತಿಹಾಸ ಸೃಷ್ಟಿಸಿತು. ಪೌಲ್ ಅವರ ಚಿನ್ನದ ಪದಕವಲ್ಲದೆ, ಕೇರಳದ ಅವರ ಸಹ ಕ್ರೀಡಾಪಟು ಅಬ್ದುಲ್ಲಾ ಅಬೂಬಕರ್ ಕೂಡ ಈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಪೌಲ್ ತನ್ನ ಮೂರನೇ ಪ್ರಯತ್ನದಲ್ಲಿ 17.03 ಮೀಟರ್ ಜಿಗಿದು ಮೊದಲ ಸ್ಥಾನ ಗಳಿಸಿದರು. ಅಬೂಬಕರ್ 17.02ಮೀಟರ್ ದೂರ ಕ್ರಮಿಸಿ ದ್ವಿತೀಯ ಸ್ಥಾನ ಪಡೆದರು. ಅಬೂಬಕರ್ ತಮ್ಮ ಐದನೇ ಪ್ರಯತ್ನದಲ್ಲಿ ಈ ದೂರವನ್ನು ಕ್ರಮಿಸಿದರು. ಬರ್ಮುಡಾದ ಜಾಹ್-ಅನ್ಹಾಲ್ ಪೆರಿಂಚೆಫ್ 16.92 ಮೀ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಗೆದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನ ಟ್ರಿಪಲ್ ಜಂಪ್‌ನಲ್ಲಿ ಭಾರತ ನಾಲ್ಕು ಪದಕಗಳನ್ನು ಗೆದ್ದಿದೆ ಆದರೆ ದೇಶದ ಇಬ್ಬರು ಅಥ್ಲೀಟ್‌ಗಳು ಒಟ್ಟಿಗೆ ವೇದಿಕೆಗೆ ಬಂದಿರುವುದು ಇದೇ ಮೊದಲು. ಮೊಹಿಂದರ್ ಸಿಂಗ್ ಗಿಲ್ 1970 ಮತ್ತು 1974 ರಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕಗಳನ್ನು ಗೆದ್ದರೆ, 2010 ಮತ್ತು 2014 ರಲ್ಲಿ ರಂಜಿತ್ ಮಹೇಶ್ವರಿ ಮತ್ತು ಅರ್ಪಿಂದರ್ ಸಿಂಗ್ ಮೂರನೇ ಸ್ಥಾನ ಪಡೆದಿದ್ದರಯ. ಈ ಇಬ್ಬರ ನಂತರ ಸಂದೀಪ್ ಭಾರತಕ್ಕೆ ಮತ್ತೊಂದು ಪದಕವನ್ನು ಗೆದ್ದುಕೊಟ್ಟಿದ್ದಾರೆ.
Published On - 4:50 pm, Sun, 7 August 22