IND vs PAK: ಸ್ಮೃತಿ ಮಂಧಾನ ಅಬ್ಬರಕ್ಕೆ ಶರಣಾದ ಪಾಕಿಸ್ತಾನ; 12 ಓವರ್‌ಗಳಲ್ಲೇ ಪಂದ್ಯ ಮುಗಿಸಿದ ಭಾರತ!

| Updated By: ಪೃಥ್ವಿಶಂಕರ

Updated on: Jul 31, 2022 | 8:24 PM

IND vs PAK: ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಅಬ್ಬರದ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ 12 ಓವರ್‌ಗಳಲ್ಲಿ 100 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಿತು.

IND vs PAK:  ಸ್ಮೃತಿ ಮಂಧಾನ ಅಬ್ಬರಕ್ಕೆ ಶರಣಾದ ಪಾಕಿಸ್ತಾನ; 12 ಓವರ್‌ಗಳಲ್ಲೇ ಪಂದ್ಯ ಮುಗಿಸಿದ ಭಾರತ!
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮಂಧಾನ ಅವರ ಬ್ಯಾಟ್​ನಿಂದ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ತಮ್ಮ ಅಬ್ಬರ ಮುಂದುವರೆಸಿರುವ ಮಂಧಾನ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸಹ ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಆಡಿದ ಸ್ಮೃತಿ ಎರಡನೇ ಏಕದಿನ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ನೀಡಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಬರೆದುಕೊಂಡಿದ್ದಾರೆ.
Follow us on

ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಮಹಿಳಾ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳು ಯಾವ ರೀತಿಯ ಫಲಿತಾಂಶವನ್ನು ನಿರೀಕ್ಷಿಸಿದ್ದರು ಅದೇ ದೃಶ್ಯ ಎಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಕಂಡುಬಂದಿದೆ. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 (Commonwealth Games 2022) ರ ತಮ್ಮ ಎರಡನೇ ಪಂದ್ಯದಲ್ಲಿ, ಸಾವಿರಾರು ದಕ್ಷಿಣ ಏಷ್ಯಾದ ಪ್ರೇಕ್ಷಕರ ಸಮ್ಮುಖದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಪ್ರತಿ ಬಾರಿಯಂತೆ, ಮತ್ತೊಮ್ಮೆ ಭಾರತ ಮಹಿಳಾ ತಂಡವು ಯಾವುದೇ ತೊಂದರೆಯಿಲ್ಲದೆ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಅಬ್ಬರದ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ 12 ಓವರ್‌ಗಳಲ್ಲಿ 100 ರನ್‌ಗಳ ಸಾಧಾರಣ ಗುರಿಯನ್ನು ಸಾಧಿಸಿತು.

ಕ್ರೀಡಾಕೂಟದ ಮೊದಲ ದಿನವೇ ಪ್ರಬಲ ಪ್ರದರ್ಶನ ನೀಡಿದ ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಎಡ್ಜ್‌ಬಾಸ್ಟನ್‌ನಲ್ಲಿ ಮಳೆಯಿಂದಾಗಿ ತಡವಾದ ಕಾರಣ, ಪಂದ್ಯವನ್ನು 18-18 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಆದರೆ ಈ ನಿರ್ಧಾರವು ಇಡೀ ಪಂದ್ಯದಲ್ಲಿ ಸರಿ ಎಂದು ಸಾಬೀತಾಗಲಿಲ್ಲ ಮತ್ತು ಇಡೀ ತಂಡ 99 ರನ್‌ಗಳಿಗೆ ಆಲೌಟ್ ಆಯಿತು.

ಎರಡನೇ ಓವರ್‌ನಲ್ಲಿಯೇ ಮೇಘನಾ ಸಿಂಗ್ ಆರಂಭಿಕ ಆಟಗಾರ್ತಿ ಇರಾಮ್ ಜಾವೇದ್‌ಗೆ ಪೆವಿಲಿಯನ್ ಹಾದಿ ತೋರಿದ ಬಳಿಕ ಪಾಕಿಸ್ತಾನದ ಇನ್ನಿಂಗ್ಸ್‌ಗೆ ಹಿನ್ನಡೆಯಾಯಿತು. ಅದುವರೆಗೂ ಪಾಕಿಸ್ತಾನ ಖಾತೆ ಕೂಡ ತೆರೆದಿರಲಿಲ್ಲ. ಇದಾದ ನಂತರ ಪಾಕ್ ನಾಯಕಿ ಬಿಸ್ಮಾ ಮರೂಫ್ ಮತ್ತು ಮುನೀಬಾ ಅಲಿ ನಡುವೆ 50 ರನ್ ಜೊತೆಯಾಟವಿತ್ತು, ಆದರೆ ಅದರಲ್ಲಿ ಯಾವುದೇ ವೇಗವಿರಲಿಲ್ಲ. ಮುನಿಬಾ ಕೆಲವು ಉತ್ತಮ ಹೊಡೆತಗಳನ್ನು ಆಡುವ ಮೂಲಕ ಬೌಂಡರಿ ಗಳಿಸಿದರು. ಒಂಬತ್ತನೇ ಓವರ್‌ನಲ್ಲಿ ಸ್ನೇಹ್ ರಾಣಾ ಇಬ್ಬರನ್ನೂ ಔಟ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದರು. ಇದಾದ ಬಳಿಕ ಪಾಕ್ ತಂಡಕ್ಕೆ ಚೇತರಿಸಿಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಪಾಕಿಸ್ತಾನ ಕೊನೆಯ 8 ಎಸೆತಗಳಲ್ಲಿ ಐದು ವಿಕೆಟ್ ಕಳೆದುಕೊಂಡು 99 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ರಾಧಾ ಯಾದವ್ ಮತ್ತು ಸ್ನೇಹ ರಾಣಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ
CWG 2022: ಭಾರತಕ್ಕೆ ಎರಡನೇ ಚಿನ್ನದ ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ ..!
CWG 2022: ಕಾಮನ್​ವೆಲ್ತ್​ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್​ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ..!
Commonwealth Games 2022 Medal Tally: ಟಾಪ್-8ರಲ್ಲಿ ಭಾರತ, ಆಸ್ಟ್ರೇಲಿಯಾ ನಂ.1; ಪದಕ ಪಟ್ಟಿ ಹೀಗಿದೆ

ಆಸ್ಟ್ರೇಲಿಯಾ ವಿರುದ್ಧ ವೇಗದ ಆರಂಭದ ನಂತರ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾದ ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ ಈ ಬಾರಿಯೂ ಆಕ್ರಮಣಕಾರಿಯಾಗಿ ಪ್ರಾರಂಭಿಸಿದರು, ಆದರೆ ಈ ಬಾರಿ ಕೊನೆಯವರೆಗೂ ನಿಂತರು. ಪಾಕಿಸ್ತಾನದ ದುರ್ಬಲ ಬೌಲಿಂಗ್‌ನ ಲಾಭ ಪಡೆದ ಮಂಧಾನ ಸುಲಭವಾಗಿ ಬೌಂಡರಿ ಸಂಗ್ರಹಿಸಿದರು. ಅವರು ಶೆಫಾಲಿ ವರ್ಮಾ ಅವರೊಂದಿಗೆ ಪವರ್‌ಪ್ಲೇನಲ್ಲಿ 61 ರನ್‌ಗಳ ಜೊತೆಯಾಟವನ್ನು ಮಾಡಿ ಗೆಲುವನ್ನು ಖಚಿತಪಡಿಸಿದರು.

ಸ್ಮೃತಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಈ ಅದ್ಭುತ ಸಾಧನೆ ಮಾಡಿದ್ದರು.

ಶೆಫಾಲಿ (16) ವಿಕೆಟ್‌ ರೂಪದಲ್ಲಿ ಪಾಕಿಸ್ತಾನ ಮೊದಲ ಯಶಸ್ಸನ್ನು ಕಂಡಿತು, ಆದರೆ ಅದು ಮಂಧಾನ ಮೇಲೆ ಪರಿಣಾಮ ಬೀರಲಿಲ್ಲ. ಗೆಲುವಿಗೆ 6 ರನ್‌ಗಳ ಮೊದಲು ಪಾಕಿಸ್ತಾನ ಎರಡನೇ ಯಶಸ್ಸನ್ನು ಗಳಿಸಿತು. ಎಸ್ ಮೇಘನಾ ಬೌಲ್ಡ್ ಆದರು, ಆದರೆ 12 ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗೆ ಕಳುಹಿಸುವ ಮೂಲಕ ಸ್ಮೃತಿ ಭಾರತಕ್ಕೆ ಮೊದಲ ಜಯವನ್ನು ನೀಡಿದರು. ಅವರು 42 ಎಸೆತಗಳಲ್ಲಿ (8 ಬೌಂಡರಿ, 3 ಸಿಕ್ಸರ್) 63 ರನ್ ಗಳಿಸಿ ಅಜೇಯರಾಗಿ ಉಳಿದರು.

Published On - 7:08 pm, Sun, 31 July 22