CWG 2022: ರೋಚಕ ಪಂದ್ಯದಲ್ಲಿ ಹರಿದ ಆಟಗಾರನ ಶೂ.. ಕ್ರೀಡಾಸ್ಫೂರ್ತಿ ತೋರಿದ ಎದುರಾಳಿ ಕೋಚ್; ವಿಡಿಯೋ ವೈರಲ್

CWG 2022: ಎದುರಾಳಿ ತಂಡದ ಕೋಚ್ ಒಬ್ಬ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ದೃಶ್ಯ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿತು. ಕಾಮನ್‌ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.

CWG 2022: ರೋಚಕ ಪಂದ್ಯದಲ್ಲಿ ಹರಿದ ಆಟಗಾರನ ಶೂ.. ಕ್ರೀಡಾಸ್ಫೂರ್ತಿ ತೋರಿದ ಎದುರಾಳಿ ಕೋಚ್; ವಿಡಿಯೋ ವೈರಲ್
Follow us
TV9 Web
| Updated By: ಪೃಥ್ವಿಶಂಕರ

Updated on:Jul 31, 2022 | 6:13 PM

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ ಮೂರನೇ ದಿನವು ಕೂಡ ಪಂದ್ಯಗಳಿಂದ ತುಂಬಿದೆ. ವಿಶ್ವದ ಅತ್ಯುತ್ತಮ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಪಂದ್ಯ ನಡೆಯುವ ವೇಳೆ ಕುತೂಹಲಕಾರಿ ದೃಶ್ಯವೊಂದು ಕಂಡುಬಂತು. ಎದುರಾಳಿ ತಂಡದ ಕೋಚ್ ಒಬ್ಬ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ದೃಶ್ಯ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿತು. ಕಾಮನ್‌ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.

ಈವೆಂಟ್‌ನ ಎರಡನೇ ದಿನ ಮಲೇಷ್ಯಾ ಮತ್ತು ಜಮೈಕಾ ನಡುವೆ ಬ್ಯಾಡ್ಮಿಂಟನ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಜಮೈಕಾದ ಅತ್ಯುತ್ತಮ ಆಟಗಾರ ಸ್ಯಾಮ್ಯುಯೆಲ್ ರಿಕೆಟ್ಸ್ ಅವರ ಬೂಟ್ ಪಂದ್ಯದ ವೇಳೆ ಹರಿಯಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಜೊತೆಗೆ ಹರಿದ ಬೂಟ್ ತೊಟ್ಟು ಸ್ಯಾಮ್ಯುಯೆಲ್ ರಿಕೆಟ್ಸ್​ಗೆ ಆಡಲು ಕಷ್ಟವಾಗಿತ್ತು. ಇದನ್ನು ಗಮನಿಸಿದ ಮಲೇಷಿಯಾದ ಕೋಚ್ ಹೆಂಡ್ರುವಾನ್, ಎದುರಾಳಿ ಆಟಗಾರ ರಿಕೆಟ್ಸ್​ಗೆ ತಾವು ಧರಿಸಿದ್ದ ಬೂಟ್​ಗಳನ್ನು ತೆಗೆದುಕೊಟ್ಟು ಕ್ರೀಡಾಸ್ಫೂರ್ತಿ ತೋರಿದರು.

ಇದನ್ನೂ ಓದಿ
Image
CWG 2022: ಭಾರತಕ್ಕೆ ಎರಡನೇ ಚಿನ್ನದ ಪದಕ; ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ ..!
Image
CWG 2022: ಕಾಮನ್​ವೆಲ್ತ್​ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್​ಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ..!
Image
Commonwealth Games 2022 Medal Tally: ಟಾಪ್-8ರಲ್ಲಿ ಭಾರತ, ಆಸ್ಟ್ರೇಲಿಯಾ ನಂ.1; ಪದಕ ಪಟ್ಟಿ ಹೀಗಿದೆ

ತರಬೇತುದಾರ ಹೆಂಡ್ರೇವನ್ ಅವರ ಈ ಕಾರ್ಯವನ್ನು ಕಂಡು ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪ್ರೇಕ್ಷಕರೆಲ್ಲರೂ ಚಪ್ಪಾಳೆ ತಟ್ಟಲಾರಂಭಿಸಿದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕಾಗಿ ಕೋಚ್‌ಗೆ ಜಮೈಕಾ ಆಟಗಾರ ರಿಕೆಟ್ಸ್ ಕೂಡ ಧನ್ಯವಾದ ಹೇಳಿದ್ದಾರೆ. ಆದರೆ ಈ ಪಂದ್ಯದಲ್ಲಿ ರಿಕೆಟ್ಸ್​ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯದಲ್ಲಿ ರಿಕೆಟ್ಸ್ ತನ್ನ ಜೊತೆಗಾರ ಜೋಯಲ್ ಆಂಗಸ್ ವಿರುದ್ಧ 21-7, 21-11 ಅಂತರದಲ್ಲಿ ಸೋಲು ಅನುಭವಿಸಿದರು.

Published On - 6:13 pm, Sun, 31 July 22