ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022 ) ಭಾರತದ ಶಕ್ತಿ ಪ್ರದರ್ಶನ ಮುಂದುವರೆದಿದೆ. ಇದೀಗ ಪುರುಷರ ಹೈ ಜಂಪ್ನಲ್ಲಿ ಭಾರತದ ತೇಜಸ್ವಿನ್ ಶಂಕರ್ (Tejaswin Shankar) ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ 2.10 ಮೀಟರ್ ಜಿಗಿದ ಶಂಕರ್ ಉತ್ತಮ ಆರಂಭ ಕಂಡರರು. ಬಹಮಾಸ್ನ ಡೊನಾಲ್ಡ್ ಥೋಮಸ್ (Donald Thomas) ಕೂಡ 2.22 ಮೀ. ಜಿಗಿದು ಶಂಕರ್ ಜೊತೆ ಸಮಬಲ ಸಾಧಿಸಿದರು. ಆದರೆ, ಭಾರತದ ಅಥ್ಲೀಟ್ ಕೆಲ ಫೌಲ್ಗಳನ್ನು ಮಾಡಿದ ಕಾರಣ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಸಂಖ್ಯೆ 18ಕ್ಕೇರಿದೆ. ಇದುವರೆಗೆ ಐದು ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕ ಭಾರತ ಬಾಜಿಕೊಂಡಿದೆ.
ಇನ್ನು ವೇಟ್‌ಲಿಫ್ಟರ್ ಗುರ್ದೀಪ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಪುರುಷರ 109kg ವಿಭಾಗದಲ್ಲಿ ಒಟ್ಟು 390 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಗುರ್ದೀಪ್ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18 ಕ್ಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ 18 ಪದಕಗಳ ಪೈಕಿ 10 ಪದಕ ವೇಟ್ಲಿಫ್ಟಿಂಗ್ನಿಂದಲೇ ಆಗಿದೆ.
ಗುರ್ದೀಪ್ ಸ್ನಾಚ್ ರೌಂಡ್ನ 167kg ಯಲ್ಲಿ ಯಶಸ್ಸು ಸಾಧಿಸಲು ಆಗಲಿಲ್ಲ. ಒಟ್ಟಾರೆ ಸ್ನಾಚ್ ರೌಂಡ್ ಅನ್ನು ಮೂರನೇ ಸ್ಥಾನದ ಮೂಲಕ ಅಂತ್ಯಗೊಳಿಸಿದರು. ಆದರೆ, ಜೆರ್ಕ್ ರೌಂಡ್ನ ಮೊದಲ ಪ್ರಯತ್ನದಲ್ಲೇ 207 ಕೆಜಿ ಎತ್ತಿದರು. 215Kgಯ ಎರಡನೇ ಪ್ರಯತ್ನದಲ್ಲಿ ವಿಫಲರಾದರು. ಕೊನೆಯ ಪ್ರಯತ್ನದಲ್ಲಿ 223kg ಭಾರತ ಎತ್ತುವ ಮೂಲಕ ಕಂಚನ್ನು ಬಾಜಿಕೊಂಡಿದ್ದಾರೆ. ಸದ್ಯ ಭಾರತ 18 ಪದಕವನ್ನು ಬಾಜಿಕೊಂಡಿದ್ದು ಐದು ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕ ಗೆದ್ದುಕೊಂಡಿದೆ.
ಇನ್ನು ವೇಟ್‌ಲಿಫ್ಟಿಂಗ್‌ನಲ್ಲಿ ಲವಪ್ರೀತ್ ಸಿಂಗ್ ಅವರು ಪುರುಷರ 109 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದರು. ಒಟ್ಟು 355 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 163 ಕೆ.ಜಿ ಹಾಗೂ ಕ್ಲೀನ್– ಜರ್ಕ್‌ನಲ್ಲಿ 192 ಕೆ.ಜಿ ಸಾಧನೆ ಮಾಡಿದರು. ಸ್ನ್ಯಾಚ್‌ನಲ್ಲಿ 157 ಕೆ.ಜಿ.ಯೊಂದಿಗೆ ಸ್ಪರ್ಧೆ ಆರಂಭಿಸಿದ ಅವರು ಕೊನೆಯ ಪ್ರಯತ್ನದಲ್ಲಿ 163 ಕೆ.ಜಿ. ಭಾರ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೂರು ಅವಕಾಶಗಳಲ್ಲಿ ಕ್ರಮವಾಗಿ 185 ಕೆ.ಜಿ, 189 ಕೆ.ಜಿ ಮತ್ತು 192 ಕೆ.ಜಿ. ಭಾರ ಎತ್ತಿದರು.
ಇತ್ತ ಸೌರವ್ ಘೋಷಾಲ್ ಅವರು ಸ್ಕ್ವಾಷ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸೌರವ್, ಬುಧವಾರ ನಡೆದ ಕಂಚಿನ ಪದಕದ ಸುತ್ತಿನ ಪ್ಲೇ ಆಫ್‌ನಲ್ಲಿ 11-6, 11-1, 11-4ರಿಂದ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರಾಪ್ ಅವರನ್ನು ಸೋಲಿಸಿದರು. ಸೌರವ್ ಅವರಿಗೆ ಕಾಮನ್‌ವೆಲ್ತ್ ಕೂಟದಲ್ಲಿ ಇದು ಎರಡನೇ ಪದಕ. 2018ರ ಗೋಲ್ಡ್‌ಕೋಸ್ಟ್ ಆವೃತ್ತಿಯಲ್ಲಿ ದೀಪಿಕಾ ಪಳ್ಳಿಕಲ್ ಜೊತೆಗೂಡಿ ಬೆಳ್ಳಿ ಪದಕ ಜಯಿಸಿದ್ದರು.
Published On - 7:08 am, Thu, 4 August 22