Odi World Cup 2027
Image Credit source: ICC
ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗಾಗಿ ಒಟ್ಟು 12 ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಸೌತ್ ಆಫ್ರಿಕಾದ 8, ಝಿಂಬಾಬ್ವೆಯ 3 ಹಾಗೂ ನಮೀಬಿಯಾದ 1 ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಆ ಕ್ರೀಡಾಂಗಣಗಳ ವಿವರ ಇಲ್ಲಿದೆ…
- ಸೌತ್ ಆಫ್ರಿಕಾ
- ವಾಂಡರರ್ಸ್ ಸ್ಟೇಡಿಯಂ – ಜೋಹಾನ್ಸ್ಬರ್ಗ್
- ನ್ಯೂಲಾಂಡ್ಸ್ ಕ್ರಿಕೆಟ್ ಮೈದಾನ – ಕೇಪ್ ಟೌನ್
- ಕಿಂಗ್ಸ್ಮೀಡ್ ಕ್ರಿಕೆಟ್ ಮೈದಾನ – ಡರ್ಬನ್
- ಸೂಪರ್‌ಸ್ಪೋರ್ಟ್ ಪಾರ್ಕ್ – ಸೆಂಚುರಿಯನ್
- ಸೇಂಟ್ ಜಾರ್ಜ್ ಪಾರ್ಕ್ – ಪೋರ್ಟ್ ಎಲಿಜಬೆತ್
- ಮಂಗಾಂಗ್ ಓವಲ್ – ಬ್ಲೋಮ್‌ಫಾಂಟೈನ್
- ಬೋಲ್ಯಾಂಡ್ ಪಾರ್ಕ್ – ಪಾರ್ಲ್
- ಬಫಲೋ ಪಾರ್ಕ್ – ಈಸ್ಟ್ ಲಂಡನ್
ಇದನ್ನೂ ಓದಿ: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1
- ಝಿಂಬಾಬ್ವೆ
- ಹರಾರೆ ಸ್ಪೋರ್ಟ್ಸ್ ಕ್ಲಬ್ – ಹರಾರೆ
- ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ – ಬುಲವಾಯೊ
- ಫಾಲೆ ಮೋಸಿ-ಓವಾ-ತುನ್ಯಾ ಕ್ರೀಡಾಂಗಣ – ವಿಕ್ಟೋರಿಯಾ ಫಾಲ್ಸ್
- ನಮೀಬಿಯಾ
- ನಮೀಬಿಯಾ ಕ್ರಿಕೆಟ್ ಮೈದಾನ – ವಿಂಡ್‌ಹೋಕ್
12 ಸ್ಟೇಡಿಯಂ, 57 ಪಂದ್ಯಗಳು:
ಈ 12 ಸ್ಟೇಡಿಯಂಗಳಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿಯ ವಿಶ್ವಕಪ್ ನಡೆಯಲಿರುವುದು ಹೊಸ ಸ್ವರೂಪದಲ್ಲಿ ಎಂಬುದು ವಿಶೇಷ. ಅಂದರೆ ಹೊಸ ಫಾರ್ಮ್ಯಾಟ್ ಮೂಲಕ ಒಟ್ಟು ನಾಲ್ಕು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.
ಹಂತ 1: ಸೂಪರ್ ಸೀರೀಸ್:
ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಆದರೆ ಈ ಹದಿನಾಲ್ಕು ತಂಡಗಳಲ್ಲಿ ಎರಡು ಟೀಮ್ಗಳು ಮೊದಲ ಸುತ್ತಿನಲ್ಲೇ ಹೊರಬೀಳಲಿವೆ. ಅಂದರೆ ವಿಶ್ವಕಪ್‌ಗೆ ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಅತ್ಯಂತ ಕಡಿಮೆ ಶ್ರೇಯಾಂಕ ಹೊಂದಿರುವ ಕೊನೆಯ 3 ತಂಡಗಳ (12, 13 ಮತ್ತು 14ನೇ ಸ್ಥಾನ) ನಡುವೆ ಮಾತ್ರ ಈ ಆರಂಭಿಕ ಸುತ್ತು ನಡೆಯಲಿದೆ.
- ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
- ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
- ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.
ಹಂತ 2: ಗ್ರೂಪ್ ರೌಂಡ್:
ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ಅಗ್ರ 11 ತಂಡಗಳು ಮತ್ತು ಮೊದಲ ಹಂತದ ಸೂಪರ್ ಸೀರೀಸ್‌ನಲ್ಲಿ ಗೆದ್ದು ಬರುವ 1 ತಂಡ ಸೇರಿ ಒಟ್ಟು 12 ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.
- ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
- ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
- ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
- 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.
ಹಂತ 3: ಸೂಪರ್ 7 ರೌಂಡ್:
ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿದ 12 ತಂಡಗಳಲ್ಲಿ ಮೂರನೇ ಸುತ್ತಿಗೆ 7 ತಂಡಗಳು ಮಾತ್ರ ಪ್ರವೇಶಿಸಲಿದೆ. ಅಂದರೆ ಇಲ್ಲಿ ಎರಡೂ ಗುಂಪುಗಳಿಂದ ತಲಾ 3 ಅತ್ಯುತ್ತಮ ತಂಡಗಳು (3 + 3 = 6) ಮತ್ತು ಎರಡೂ ಗುಂಪುಗಳನ್ನು ಒಟ್ಟಾರೆಯಾಗಿ ಪರಿಗಣಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡಕ್ಕೆ ಸೂಪರ್-7 ನಲ್ಲಿ ಅವಕಾಶ ಸಿಗಲಿದೆ.
- ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).
ಹಂತ 4: ನಾಕೌಟ್ ರೌಂಡ್:
ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
- ಸೆಮಿಫೈನಲ್ 1: ಸೂಪರ್ 7 ಅಂಕಪಟ್ಟಿಯಲ್ಲಿ ಮೊದಲ ಸ್ಥಾನ (ನಂ.1) ಪಡೆದ ತಂಡವು ನಾಲ್ಕನೇ ಸ್ಥಾನ (ನಂ.4) ಪಡೆದ ತಂಡದ ವಿರುದ್ಧ ಸೆಣಸಾಡಲಿದೆ.
- ಸೆಮಿಫೈನಲ್ 2: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ (ನಂ.2) ಪಡೆದ ತಂಡವು ಮೂರನೇ ಸ್ಥಾನ (ನಂ.3) ಪಡೆದ ತಂಡದ ಮುಖಾಮುಖಿಯಾಗಲಿದೆ.
ಇದನ್ನೂ ಓದಿ: CWG 2026: ಒಂದೇ ದಿನ 6 ಪದಕಗಳನ್ನು ಗೆದ್ದ ಭಾರತೀಯರು!
ಇನ್ನು ಸೆಮಿಫೈನಲ್ಗಳಲ್ಲಿ ಗೆಲ್ಲುವ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.