AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಕಿರಿ ವಯಸ್ಸಿನಲ್ಲಿ ರಣಜಿಗೆ ಪದಾರ್ಪಣೆ; ಇತಿಹಾಸ ಸೃಷ್ಟಿಸಿದ ಬಿಹಾರದ ಯುವ ಕ್ರಿಕೆಟಿಗ..!

Ranji Trophy: ಇದುವರೆಗೆ ಗರಿಷ್ಠ ಬಾರಿ ಈ ಟ್ರೋಫಿ ಗೆದ್ದಿರುವ ಮುಂಬೈ ತಂಡ ಹಾಗೂ ಬಿಹಾರ ತಂಡದ ನಡುವೆ ಈ ಸೀಸನ್​ನ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಿಹಾರ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ 12 ವರ್ಷದ ವೈಭವ್ ಸೂರ್ಯವಂಶಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಅತಿ ಕಿರಿ ವಯಸ್ಸಿನಲ್ಲಿ ರಣಜಿಗೆ ಪದಾರ್ಪಣೆ; ಇತಿಹಾಸ ಸೃಷ್ಟಿಸಿದ ಬಿಹಾರದ ಯುವ ಕ್ರಿಕೆಟಿಗ..!
ವೈಭವ್ ಸೂರ್ಯವಂಶಿ
ಪೃಥ್ವಿಶಂಕರ
|

Updated on:Jan 05, 2024 | 2:51 PM

Share

2023- 24 ನೇ ಸಾಲಿನ ರಣಜಿ ಟ್ರೋಫಿ (Ranji Trophy) ಸೀಸನ್ ಜನವರಿ 5 ರಿಂದ ಅಂದರೆ ಇಂದಿನಿಂದ ಆರಂಭವಾಗಿದೆ. ಈ ಬಾರಿ ಎಲೈಟ್ ಮತ್ತು ಪ್ಲೇಟ್ ಗುಂಪಿನ ಎಲ್ಲಾ ತಂಡಗಳು ಸೇರಿದಂತೆ ಒಟ್ಟು 38 ತಂಡಗಳು ಈ ದೇಶೀ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಇದುವರೆಗೆ ಗರಿಷ್ಠ ಬಾರಿ ಈ ಟ್ರೋಫಿ ಗೆದ್ದಿರುವ ಮುಂಬೈ ತಂಡ ಹಾಗೂ ಬಿಹಾರ (Mumbai vs Bihar) ತಂಡದ ನಡುವೆ ಈ ಸೀಸನ್​ನ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಿಹಾರ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ 12 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ದಾಖಲೆಗಳ ಪ್ರಕಾರ ವೈಭವ್ ಸೂರ್ಯವಂಶಿ ಅವರ ವಯಸ್ಸು ಕೇವಲ 12 ವರ್ಷ 284 ದಿನಗಳು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ವೈಭವ್ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ 5ನೇ ಯುವ ಆಟಗಾರ ಎನಿಸಿಕೊಂಡಿದ್ದಾರೆ.

ಭಾರತ ಅಂ-19 ಬಿ ತಂಡದಲ್ಲಿ ಸ್ಥಾನ

ವೈಭವ್ ಸೂರ್ಯವಂಶಿ ಬಗ್ಗೆ ಹೇಳುವುದಾದರೆ, ಪ್ರಸ್ತುತ ಬಿಹಾರ ತಂಡದ ಪರ ರಣಜಿಗೆ ಪದಾರ್ಪಣೆ ಮಾಡಿರುವ ಅವರು ಭಾರತ ಅಂಡರ್-19 ಬಿ ತಂಡದ ಭಾಗವಾಗಿದ್ದಾರೆ. ಇದರಲ್ಲಿ ಅವರು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದೊಂದಿಗಿನ ಚತುರ್ಭುಜ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 177 ರನ್ ಕಲೆಹಾಕಿದ್ದರು. ಇದಲ್ಲದೆ, ದೇಶೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ 2023 ರ ವಿನೂ ಮಂಕಡ್ ಟ್ರೋಫಿಯಲ್ಲೂ ಆಡಿದ್ದಾರೆ. ಇದರಲ್ಲಿ ಅವರ ಬ್ಯಾಟ್‌ನಿಂದ 393 ರನ್​ಗಳು ಸಿಡಿದಿದ್ದವು. ವೈಭವ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ.

ಇಂದಿನಿಂದ ರಣಜಿ ಟ್ರೋಫಿ ಆರಂಭ: ರಣಜಿ ಇತಿಹಾಸದಲ್ಲಿ ಹೆಚ್ಚಿನ ರನ್ಸ್, ಗರಿಷ್ಠ ವಿಕೆಟ್ಸ್ ಯಾರು?

15 ನೇ ವಯಸ್ಸಿಗೆ ಸಚಿನ್ ಎಂಟ್ರಿ

1942-43ರ ರಣಜಿ ಸೀಸನ್​ನಲ್ಲಿ ಕೇವಲ 12 ವರ್ಷ ಮತ್ತು 73 ದಿನಗಳಲ್ಲಿ ರಜಪೂತಾನ ತಂಡದ ಪರ ಚೊಚ್ಚಲ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದ ಅಲಿಮುದ್ದೀನ್ ಅವರ ಹೆಸರಿನಲ್ಲಿ ಭಾರತದ ಪರ ಅತಿ ಚಿಕ್ಕ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಎಂಬ ದಾಖಲೆ ದಾಖಲಾಗಿದೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಕೂಡ 15 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು.

ಕೇವಲ 9 ಆಟಗಾರರು ಈ ಸಾಧನೆ ಮಾಡಿದ್ದಾರೆ

ಇಲ್ಲಿಯವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಕೇವಲ 9 ಆಟಗಾರರು 13 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರಲ್ಲಿ ಅಲಿಮುದ್ದೀನ್ ಹೊರತುಪಡಿಸಿ, ಎಸ್‌ಕೆ ಬೋಸ್, ಆಕಿಬ್ ಜಾವೇದ್, ಮೊಹಮ್ಮದ್ ಅಕ್ರಮ್, ಮೊಹಮ್ಮದ್ ರಿಜ್ವಾನ್, ರಿಜ್ವಾನ್ ಸತ್ತಾರ್, ಸಲೀಮುದ್ದೀನ್ ಮತ್ತು ಖಾಸಿಂ ಫಿರೋಜಿ, ವೈಭವ್ ಸೂರ್ಯವಂಶಿ ಸೇರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 5 January 24

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್