T20 World Cup 2026: ನೆದರ್ಲ್ಯಾಂಡ್ಸ್ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ

Pakistan Edges Netherlands in T20 World Cup Opener: 2026ರ ಟಿ20 ವಿಶ್ವಕಪ್ ಇಂದಿನಿಂದ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನೆದರ್ಲ್ಯಾಂಡ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ವರೆಗೂ ಸಾಗಿದ ಈ ಪಂದ್ಯದಲ್ಲಿ ಫಹೀಮ್ ಅಶ್ರಫ್ ಅವರ ಅಬ್ಬರದ ಬ್ಯಾಟಿಂಗ್ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟಿತು. 19ನೇ ಓವರ್‌ನಲ್ಲಿ ನೆದರ್ಲ್ಯಾಂಡ್ಸ್ ಕೈಚೆಲ್ಲಿದ ಕ್ಯಾಚ್ ಪಾಕಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ವಿಶ್ವಕಪ್ ಅಭಿಯಾನವನ್ನು ಶುಭಾರಂಭ ಮಾಡಿದೆ.

T20 World Cup 2026: ನೆದರ್ಲ್ಯಾಂಡ್ಸ್ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ
Pak Vs Ned

Updated on: Feb 07, 2026 | 3:21 PM

2026 ರ ಟಿ20 ವಿಶ್ವಕಪ್ (2026 T20 World Cup) ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಮೂರು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ( Pakistan vs Netherlands) ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್​ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇತ್ತ 19ನೇ ಓವರ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ನೆದರ್ಲ್ಯಾಂಡ್ಸ್ ರೋಚಕ ಗೆಲುವಿನಿಂದ ವಂಚಿತವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 147 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ನೇ ಓವರ್ ವೇಳೆಗೆ ಸೋಲಿನ ಸನಿಹಕ್ಕೆ ತಲುಪಿತ್ತು. ಆದರೆ 19 ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ಇದೇ ಓವರ್​ನಲ್ಲಿ ಅಶ್ರಫ್​ಗೆ ಜೀವದಾನವೂ ಸಿಕ್ಕಿತು. ಇದರ ಪರಿಣಾಮವಾಗಿ ಪಾಕಿಸ್ತಾನ 20 ನೇ ಓವರ್‌ನಲ್ಲಿ ಪಂದ್ಯ ಗೆದ್ದು ಗೆಲುವಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು.

147 ರನ್ ಕಲೆಹಾಕಿದ ನೆದರ್ಲ್ಯಾಂಡ್ಸ್

ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಆರಂಭಿಕ ಮೈಕೆಲ್ ಲೆವಿಟ್ 24 ರನ್ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್ 37 ರನ್ ಕಲೆಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದಾಗ್ಯೂ, ಪಾಕಿಸ್ತಾನಿ ಬೌಲರ್ ಸಲ್ಮಾನ್ ಮಿರ್ಜಾ (3/24) ಅದ್ಭುತ ಸ್ಪೆಲ್ ಮೂಲಕ ನೆದರ್ಲ್ಯಾಂಡ್ಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ಪಾಕ್ ಅಬ್ರಾರ್ ಅಹ್ಮದ್, ಸ್ಯಾಮ್ ಅಯೂಬ್ ಮತ್ತು ಮೊಹಮ್ಮದ್ ನವಾಜ್ ತಲಾ ಎರಡು ವಿಕೆಟ್ ಪಡೆದು ನೆದರ್ಲ್ಯಾಂಡ್ಸ್ ದೊಡ್ಡ ಸ್ಕೋರ್ ಗಳಿಸುವುದನ್ನು ತಡೆದರು. ಕೊನೆಯ 20 ರನ್‌ ಕಲೆಹಾಕಲು ಡಚ್ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ತಂಡದ ಅಲ್ಪ ರನ್​ಗಳ ಕುಸಿತಕ್ಕೆ ಕಾರಣವಾಯಿತು.

U19 World Cup: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ

ಕೊನೆಯ ಓವರ್​ನಲ್ಲಿ ಗೆದ್ದ ಪಾಕ್

148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತು. ಡಚ್ ಬೌಲರ್​ಗಳು ಪಾಕ್ ತಂಡದ ವಿಕೆಟ್​​ಗಳನ್ನು ನಿಯಮಿತ ಅಂತರದಲ್ಲಿ ಉರುಳಿಸಿದರಿಂದ ಪಾಕ್ ತಂಡಕ್ಕೆ 147 ರನ್ ಬೆನ್ನಟ್ಟುವುದು ಕಷ್ಟಕರವಾಗಿತ್ತು. ಅನುಭವಿ ಬಾಬರ್ ಆಝಂ (15) ಮತ್ತು ಸ್ಯಾಮ್ ಅಯೂಬ್ (24) ಬೇಗನೆ ಔಟಾದರು. ಸಾಹಿಬ್‌ಜಾದಾ ಫರ್ಹಾನ್ (47) ಮಾತ್ರ ಹೋರಾಟದ ಇನ್ನಿಂಗ್ಸ್ ಆಡಿದರು. ಇದರ ಪರಿಣಾಮವಾಗಿ ಪಾಕ್ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 29 ರನ್‌ಗಳು ಬೇಕಿದ್ದವು. 19ನೇ ಓವರ್​ನಲ್ಲಿ ಫಹೀಮ್ ಅಶ್ರಫ್ (11 ಎಸೆತಗಳಲ್ಲಿ 29) ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ 24 ರನ್‌ಗಳು ಹರಿದುಬಂದವು. ಅಂತಿಮ ಓವರ್‌ನಲ್ಲಿ ಉಳಿದ ರನ್ ಕಲೆಹಾಕಿದ ಪಾಕಿಸ್ತಾನ 19.3 ಓವರ್‌ಗಳಲ್ಲಿ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sat, 7 February 26