ಒಂದೇ ಸಮನೆ ಮೈದಾನಕ್ಕೆ ನುಗ್ಗಿದ ವಿರಾಟ್ ಕೊಹ್ಲಿ ಫ್ಯಾನ್ಸ್: ಸಿಬ್ಬಂದಿಗಳು ತಬ್ಬಿಬ್ಬು..!

Virat Kohli Ranji Trophy: ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿ ಪಂದ್ಯದಲ್ಲಿ ದೆಹಲಿ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ತಂಡ 241 ರನ್​ ಕಲೆಹಾಕಿದರೆ, ದೆಹಲಿ 374 ರನ್ ಪೇರಿಸಿತು. ಇದಕ್ಕುತ್ತರವಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡವು ಕೇವಲ 114 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ 12 ವರ್ಷಗಳ ಬಳಿಕ ರಣಜಿ ಪಂದ್ಯವಾಡಿರುವ ವಿರಾಟ್ ಕೊಹ್ಲಿ ಗೆಲುವಿನ ನಗೆ ಬೀರಿದ್ದಾರೆ.

ಒಂದೇ ಸಮನೆ ಮೈದಾನಕ್ಕೆ ನುಗ್ಗಿದ ವಿರಾಟ್ ಕೊಹ್ಲಿ ಫ್ಯಾನ್ಸ್: ಸಿಬ್ಬಂದಿಗಳು ತಬ್ಬಿಬ್ಬು..!
Virat Kohli
Follow us
ಝಾಹಿರ್ ಯೂಸುಫ್
|

Updated on: Feb 01, 2025 | 2:53 PM

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದಾರೆ. ಈ ಪಂದ್ಯದ ಮೂರನೇ ದಿನದಾಟದಲ್ಲಿ ರೈಲ್ವೇಸ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಮೂವರು ಅಭಿಮಾನಿಗಳು ಒಂದೇ ಸಮನೆ ಮೈದಾನಕ್ಕೆ ನುಗ್ಗಿದ್ದಾರೆ.

ಇತ್ತ ಒಂದೇ ಬಾರಿ ಮೂವರು ಅಭಿಮಾನಿಗಳು ಮೈದಾನಕ್ಕೆ ಜಿಗಿದಿದ್ದರಿಂದ ಸಿಬ್ಬಂದಿಗಳು ಯಾರನ್ನು ಹಿಡಿಯಬೇಕೆಂದು ಗೊಂದಲಕ್ಕೀಡಾದರು. ಅಷ್ಟರಲ್ಲಾಗಲೇ ಮೂವರು ಅಭಿಮಾನಿಗಳು ವಿರಾಟ್ ಕೊಹ್ಲಿ ಬಳಿಗೆ ತಲುಪಿ ಅವರ ಕಾಲಿಗೆ ನಮಿಸಿದ್ದಾರೆ.

ಇದರ ನಡುವೆ ಕೆಲ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಏಟಿ ರುಚಿ ತೋರಿಸಿ, ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಕಾಲಿಗೆ ನಮಿಸಿದ ಅಭಿಮಾನಿಗಳ ವಿಡಿಯೋ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಅಭಿಮಾನಿಗಳ ವಿಡಿಯೋ:

ಇದಕ್ಕೂ ಮುನ್ನ ಈ ಪಂದ್ಯದ ಮೊದಲ ದಿನದಾಟದಂತು ಅಭಿಮಾನಿಯೋರ್ವ ಮೈದಾನಕ್ಕೆ ನುಗಿದ್ದ. ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಓಡಿ ಹೋದ ಯುವಕನೊಬ್ಬ ನೇರವಾಗಿ ಅವರ ಕಾಲಿಗೆ ಎರಗಿದ್ದ. ಇದೀಗ ಮತ್ತೆ ಅಭಿಮಾನಿಗಳು ಮೈದಾನಕ್ಕೆ ನುಗ್ಗುವ ಮೂಲಕ ಪಂದ್ಯಕ್ಕೆ ಅಡಚಣೆಯನ್ನು ಉಂಟು ಮಾಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 241 ರನ್​ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ದೆಹಲಿ ಪರ ವಿರಾಟ್ ಕೊಹ್ಲಿ ಕೇವಲ 6 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಉಳಿದ ಬ್ಯಾಟರ್​​ಗಳ ಉತ್ತಮ ಪ್ರದರ್ಶನದೊಂದಿಗೆ ದೆಹಲಿ ತಂಡ ಮೊದಲ ಇನಿಂಗ್ಸ್​ನಲ್ಲಿ 374 ರನ್​ ಕಲೆಹಾಕಿದೆ.

ಇದೀಗ ದ್ವಿತೀಯ ಇನಿಂಗ್ಸ್ ರೈಲ್ವೇಸ್ ತಂಡವು ಕೇವಲ 114 ರನ್​ಗಳಿಗೆ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್​ನಲ್ಲಿ 133 ರನ್​ಗಳ ಮುನ್ನಡೆ ಹೊಂದಿದ್ದ ದೆಹಲಿ ತಂಡವು ಇನಿಂಗ್ಸ್ ಹಾಗೂ 19 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ದೆಹಲಿ (ಪ್ಲೇಯಿಂಗ್ XI): ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ವಿರಾಟ್ ಕೊಹ್ಲಿ, ಯಶ್ ಧುಲ್, ಆಯುಷ್ ಬದೋನಿ (ನಾಯಕ), ಪ್ರಣವ್ ರಾಜುವಂಶಿ (ವಿಕೆಟ್ ಕೀಪರ್), ಸುಮಿತ್ ಮಾಥುರ್, ಶಿವಂ ಶರ್ಮಾ, ನವದೀಪ್ ಸೈನಿ, ಮನಿ ಗ್ರೇವಾಲ್, ಸಿದ್ಧಾಂತ್ ಶರ್ಮಾ.

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್

ರೈಲ್ವೇಸ್ (ಪ್ಲೇಯಿಂಗ್ XI): ಅಂಚಿತ್ ಯಾದವ್, ವಿವೇಕ್ ಸಿಂಗ್, ಸೂರಜ್ ಅಹುಜಾ (ನಾಯಕ), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಮೊಹಮ್ಮದ್ ಸೈಫ್, ಭಾರ್ಗವ್ ಮೆರಾಯ್, ಕರ್ಣ್ ಶರ್ಮಾ, ರಾಹುಲ್ ಶರ್ಮಾ, ಹಿಮಾಂಶು ಸಾಂಗ್ವಾನ್, ಅಯಾನ್ ಚೌಧರಿ, ಕುನಾಲ್ ಯಾದವ್.

ಫೆಬ್ರುವರಿ 21ಕ್ಕೆ ತೆರೆಕಾಣಲಿದೆ ಶ್ರೇಯಸ್-ಪ್ರಿಯಾ ಅಭಿನಯದ ವಿಷ್ಣು ಪ್ರಿಯ
ಫೆಬ್ರುವರಿ 21ಕ್ಕೆ ತೆರೆಕಾಣಲಿದೆ ಶ್ರೇಯಸ್-ಪ್ರಿಯಾ ಅಭಿನಯದ ವಿಷ್ಣು ಪ್ರಿಯ
ಸತೀಶ್​ಗೆ ಸಿಎಂ ಆಗುವ ಆಕಾಂಕ್ಷೆ ಬಿಟ್ಟು ಬೇರೆ ಆಸೆ ಏನಾದರೂ ಉಳಿದಿದೆಯಾ?
ಸತೀಶ್​ಗೆ ಸಿಎಂ ಆಗುವ ಆಕಾಂಕ್ಷೆ ಬಿಟ್ಟು ಬೇರೆ ಆಸೆ ಏನಾದರೂ ಉಳಿದಿದೆಯಾ?
ಏರ್​ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ಏರ್​ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ವರಿಷ್ಠರನ್ನು ಭೇಟಿಯಾಗುವ ಅವಕಾಶ ಯತ್ನಾಳ್ ಟೀಮಿಗೆ ಈ ಬಾರಿಯೂ ಇಲ್ಲ!
ವರಿಷ್ಠರನ್ನು ಭೇಟಿಯಾಗುವ ಅವಕಾಶ ಯತ್ನಾಳ್ ಟೀಮಿಗೆ ಈ ಬಾರಿಯೂ ಇಲ್ಲ!
ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ