
ಯುಎಇನಲ್ಲಿ ನಡೆದ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ (APL) ಐದನೇ ಆವೃತ್ತಿಯ ಆಟಗಾರರ ಅಧಿಕೃತ ಡ್ರಾಫ್ಟ್ ಪ್ರಕ್ರಿಯೆಯು ಮುಕ್ತಾಯಗೊಂಡಿದೆ. ಈ ಬಾರಿಯ ಹರಾಜಿನಲ್ಲಿ ವಿಶ್ವ ಕ್ರಿಕೆಟ್‌ನ ಹಲವು ಸ್ಟಾರ್ ಆಟಗಾರರು ವಿವಿಧ ಫ್ರಾಂಚೈಸಿಗಳ ಪಾಲಾಗಿದ್ದರೆ, ಭಾರತದ ಮೂವರು ಪ್ರಮುಖ ಆಟಗಾರರನ್ನು ಖರೀದಿಸಲು ಯಾವುದೇ ತಂಡಗಳು ಆಸಕ್ತಿ ತೋರದಿರುವುದು ಅಚ್ಚರಿಗೆ ಕಾರಣವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿಯಮಗಳ ಪ್ರಕಾರ, ಸಕ್ರಿಯ ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡುವಂತಿಲ್ಲ. ಈ ಕಾರಣದಿಂದಾಗಿಯೇ ಭಾರತದ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ಗೆ ಅಧಿಕೃತವಾಗಿ ಗುಡ್-ಬೈ ಹೇಳಿದ್ದ ಮೂವರು ಅನುಭವಿ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಅದೃಷ್ಟ ಪರೀಕ್ಷಿಸಲು ಎಪಿಎಲ್ ಡ್ರಾಫ್ಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಆ ಆಟಗಾರರೆಂದರೆ…
‘ಗೋಲ್ಡ್ ಕ್ಯಾಟಗರಿ’ಯಲ್ಲಿದ್ದರೂ ಸಿಗದ ಮನ್ನಣೆ:
ಈ ಹರಾಜಿನಲ್ಲಿ ‘ಗೋಲ್ಡ್ ಕ್ಯಾಟಗರಿ’ ಅಡಿಯಲ್ಲಿ ಶಾರ್ಟ್‌ಲಿಸ್ಟ್ ಆಗಿದ್ದ ಭಾರತದ ವಿಜಯ ಶಂಕರ್ , ಕೆ. ಎಸ್. ಭರತ್ ಮತ್ತು ತಮಿಳುನಾಡಿನ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರು ಅಂತಿಮವಾಗಿ ಅನ್‌ಸೋಲ್ಡ್ಆಗಿ ಉಳಿದಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ, ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡಗಳನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದರೂ, ಯುಎಇ ಪಿಚ್‌ಗಳ ಲೆಕ್ಕಾಚಾರದಲ್ಲಿ ಫ್ರಾಂಚೈಸಿಗಳು ಇವರನ್ನು ಕಡೆಗಣಿಸಿವೆ.
ಇದನ್ನೂ ಓದಿ: ಹಿಂದೆಂದೂ ಕಾಣದ ಟ್ವಿಸ್ಟ್… ಸಣ್ಣ ತಪ್ಪಿನಿಂದ ಪಂದ್ಯದ ಫಲಿತಾಂಶವೇ ಬದಲಾಯ್ತು!
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯು (ACB) ದೇಶದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸುವ ಉದ್ದೇಶದಿಂದ 2018 ರಲ್ಲಿ ಈ ಲೀಗ್ ಅನ್ನು ಆರಂಭಿಸಿತ್ತು. ಮೊದಲ ಸೀಸನ್ ಬಳಿಕ ಹಣಕಾಸಿನ ವಿವಾದ ಹಾಗೂ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಲೀಗ್ ಸ್ಥಗಿತಗೊಂಡಿತ್ತು. ಆದರೆ ಸುಮಾರು 7 ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ, ಕಾನೂನು ಪ್ರಕ್ರಿಯೆಗಳು ಮತ್ತು ಹೂಡಿಕೆದಾರರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇದೀಗ 2026ರಲ್ಲಿ ಟೂರ್ನಿಯನ್ನು ಅದ್ಧೂರಿಯಾಗಿ ಪುನರಾರಂಭಿಸಲು ಎಸಿಬಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ಡಿಸೆಂಬರ್ 27, 2026 ರಂದು ಶುರುವಾಗಲಿದೆ.
ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಇರುವ ಭದ್ರತಾ ಸವಾಲುಗಳು ಮತ್ತು ಸೂಕ್ತ ಕ್ರೀಡಾಂಗಣಗಳ ಕೊರತೆಯಿಂದಾಗಿ, ಇಡೀ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ಆಯೋಜಿಸಲು ನಿರ್ಧರಿಸಲಾಗಿದೆ. ದುಬೈ, ಶಾರ್ಜಾ ಅಥವಾ ಅಬುಧಾಬಿಯಂತಹ ವಿಶ್ವದರ್ಜೆಯ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳು ಈ ಹೈ-ವೋಲ್ಟೇಜ್ ಪಂದ್ಯಗಳಿಗೆ ಸಾಕ್ಷಿಯಾಗಲಿದ್ದು, ಎಸಿಬಿ ಇದಕ್ಕಾಗಿ ಯುಎಇ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಅನುಮತಿಗಳನ್ನು ಪಡೆದುಕೊಂಡಿದೆ.
ಈ ಬಾರಿಯ ಲೀಗ್‌ನಲ್ಲಿ ಅಫ್ಘಾನಿಸ್ತಾನದ ಪ್ರಮುಖ ಕ್ರಿಕೆಟಿಂಗ್ ವಲಯಗಳನ್ನು ಪ್ರತಿನಿಧಿಸುವ ಒಟ್ಟು 5 ಫ್ರಾಂಚೈಸಿ ತಂಡಗಳು ಭಾವಹಿಸಲಿವೆ. ಆ ತಂಡಗಳೆಂದರೆ…
ಈ ಫ್ರಾಂಚೈಸಿಗಳ ಪೂರ್ಣ ಹೆಸರುಗಳು ಇನ್ವೆಸ್ಟರ್ ಕಂಪನಿಗಳ ಬ್ರ್ಯಾಂಡಿಂಗ್ ಒಳಗೊಂಡಿರಲಿದ್ದು, ಮುಂದಿನ ದಿನಗಳಲ್ಲಿ ಇವುಗಳನ್ನು ಅಧಿಕೃತವಾಗಿ ಲೋಗೋ ಸಮೇತ ಬಿಡುಗಡೆ ಮಾಡಲಾಗುತ್ತದೆ.