ಅಫ್ಘಾನಿಸ್ತಾನ್ ಕ್ರಿಕೆಟಿಗನ 2 ವರ್ಷದ ಪುಟ್ಟ ಮಗಳು ನಿಧನ..!
Hazratullah Zazai: ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ 26 ವರ್ಷದ ಹಝರತುಲ್ಲಾ ಝಝಾಹಿ 16 ಏಕದಿನ ಕ್ರಿಕೆಟ್‌ನಲ್ಲಿ 2 ಅರ್ಧಶತಕಗಳೊಂದಿಗೆ 361 ರನ್ ಕಲೆಹಾಕಿದ್ದಾರೆ. ಹಾಗೆಯೇ 45 ಟಿ20 ಪಂದ್ಯಗಳಿಂದ 1161 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ.

ಅಫ್ಘಾನಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಹಝರತುಲ್ಲಾ ಝಝಾಹಿ ಅವರ 2 ವರ್ಷದ ಪುಟ್ಟ ಕಂದಮ್ಮ ನಿಧನವಾಗಿದೆ. ಈ ಆಘಾತಕಾರಿ ಸುದ್ದಿಯನ್ನು ಅಫ್ಘಾನ್ ತಂಡ ಆಲ್ರೌಂಡರ್ ಕರೀಮ್ ಜನ್ನತ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದು, ಝಝಾಹಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದಾಗ್ಯೂ ಪುಟ್ಟ ಮಗುವಿನ ನಿಧನಕ್ಕೆ ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
“ನನ್ನ ಆತ್ಮೀಯ ಸ್ನೇಹಿತ ಸಹೋದರ ಹಝರತುಲ್ಲಾ ಝಝಾಹಿ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂಬ ದುಃಖಕರ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ಅವರ ಮತ್ತು ಅವರ ಕುಟುಂಬಕ್ಕಾಗಿ ನನ್ನ ಸಂತಾಪಗಳು. ಅವರಿಗಾಗಿ ಅವರ ಕುಟುಂಬಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಕರೀಮ್ ಜನ್ನತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
View this post on Instagram
26 ವರ್ಷದ ಹಝರತುಲ್ಲಾ ಝಝಾಹಿ ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿ. 2016 ರಲ್ಲಿ ಅಫ್ಘಾನಿಸ್ತಾನ್ ಪರ ಪಾದಾರ್ಪಣೆ ಮಾಡಿದ್ದ ಝಝಾಹಿ ಈವರೆಗೆ 16 ಏಕದಿನ ಹಾಗೂ 45 ಟಿ20 ಪಂದ್ಯಗಳನ್ನಾಡಿದ್ದಾರೆ.
16 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 361 ರನ್ ಕಲೆಹಾಕಿದರೆ, 45 ಟಿ20 ಪಂದ್ಯಗಳಿಂದ 1161 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ಇನ್ನು 2018 ರಲ್ಲಿ ನಡೆದ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ನಲ್ಲಿ (ಎಪಿಎಲ್) ಹಝರತುಲ್ಲಾ ಝಝಾಹಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ್ದರು. ಅಲ್ಲದೆ ಬಾಲ್ಖ್ ಲೆಜೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಾಬೂಲ್ ಜ್ವಾನಾನ್ ಪರ ಕಣಕ್ಕಿಳಿದಿದ್ದ ಅವರು 14 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.
ಈ ಮೂಲಕ ಒಂದೇ ಓವರ್ನಲ್ಲಿ ಆರು ಸಿಕ್ಸ್ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.




