AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AFG vs BAN: ವಿಶ್ವಕಪ್ ರೇಸ್​ನಿಂದ ಬಾಂಗ್ಲಾದೇಶ, ಆಸ್ಟ್ರೇಲಿಯಾ ಔಟ್; ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ

AFG vs BAN T20 World Cup 2024: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಅಫ್ಘಾನಿಸ್ತಾನ ತಂಡ ವಿಶ್ವಕಪ್ ಸೆಮಿಫೈನಲ್ ತಲುಪಿದ್ದು ಇದೇ ಮೊದಲು. ಇದರೊಂದಿಗೆ 2024ರ ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡ ಹೊರಬಿದ್ದಿದೆ.

AFG vs BAN: ವಿಶ್ವಕಪ್ ರೇಸ್​ನಿಂದ ಬಾಂಗ್ಲಾದೇಶ, ಆಸ್ಟ್ರೇಲಿಯಾ ಔಟ್; ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ
ವಿಶ್ವಕಪ್ ರೇಸ್​ನಿಂದ ಬಾಂಗ್ಲಾದೇಶ, ಆಸ್ಟ್ರೇಲಿಯಾ ಔಟ್; ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ
Follow us
Ganapathi Sharma
|

Updated on:Jun 25, 2024 | 12:18 PM

ಸೇಂಟ್ ವಿನ್ಸೆಂಟ್‌ನಲ್ಲಿ ನಡೆದ ಟಿ20 ವಿಶ್ವಕಪ್​​ನ (T20 World Cup) ಸೂಪರ್ 8 ಹಂತದ ಕೊನೆಯ ಹಾಗೂ ರೋಚಕ ಪಂದ್ಯದಲ್ಲಿ ನಾಯಕ, ಸ್ಪಿನ್ನರ್ ರಶೀದ್ ಖಾನ್ ಕೈಚಳಕ ಹಾಗೂ ವೇಗಿ ನವೀನ್ ಉಲ್ ಹಕ್ ಕರಾರುವಕ್ಕು ದಾಳಿಯಿಂದ ಬಾಂಗ್ಲಾದೇಶದ ವಿರುದ್ಧ 9 ರನ್​ ಅಂತರದ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ಸೆಮಿ ಫೈನಲ್​ ಪ್ರವೇಶಿಸಿದೆ. ಇದರೊಂದಿಗೆ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಅಫ್ಘಾನಿಸ್ತಾನ ತಂಡವು ಇದೇ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್​ ಗಳಿಸಿತು. ಗೆಲ್ಲಲು ಬಾಂಗ್ಲಾದೇಶಕ್ಕೆ 116 ರನ್​ಗಳ ಗುರಿ ನಿಗದಿಯಾಗಿದ್ದರೂ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿ ಓವರ್​​ಗಳನ್ನು 19ಕ್ಕೆ ಕಡಿತಗೊಳಿಸಲಾಯಿತು. ಗೆಲುವಿನ ಗುರಿ ಕೂಡ 114ಕ್ಕೆ ಪರಿಷ್ಕರಿಸಲಾಯಿತು. ಬಾಂಗ್ಲಾದೇಶ 17.5 ಓವರ್​ಗಳಲ್ಲಿ 105 ರನ್​​ಗಳಿಗೆ ಸರ್ವ ಪತನ ಕಂಡಿತು.

ಇತಿಹಾಸ ಸೃಷ್ಟಿಸಿದ ಅಫ್ಘಾನಿಸ್ತಾನ

ಟಿ20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಅಫ್ಘಾನಿಸ್ತಾನ ಇತಿಹಾಸವನ್ನೇ ನಿರ್ಮಿಸಿದೆ. ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ, ಅವರು ಮೊದಲ ಬಾರಿಗೆ ಸೆಮಿಫೈನಲ್‌ಗೆ ಟಿಕೆಟ್ ಪಡೆದಿದ್ದಾರೆ. ಇದರೊಂದಿಗೆ, 2024 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡುವ ಆಸ್ಟ್ರೇಲಿಯಾದ ಆಸೆ ಕೊನೆಗೊಂಡಿದೆ. ಈ ಮೂಲಕ ಈ ಹಿಂದಿನ ಟಿ20 ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿ ಸೂಪರ್-8ರಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಈ ಗೆಲುವು ಐತಿಹಾಸಿಕವಾಗಿದೆ. ಏಕೆಂದರೆ ಈ ಗೆಲುವು ಅಫ್ಘಾನಿಸ್ತಾನವನ್ನು ವಿಶ್ವ ಚಾಂಪಿಯನ್ ಆಗುವ ಕನಸಿನತ್ತ ಒಂದು ಹೆಜ್ಜೆ ಮುಂದೆ ಇರಿಸಿದೆ.

ಅಫ್ಘಾನಿಸ್ತಾನಕ್ಕೆ ಸಿಕ್ಕಿತ್ತು ಉತ್ತಮ ಆರಂಭ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಆರಂಭಿಕ ಜೋಡಿಯು ಭದ್ರ ಬುನಾದಿ ಹಾಕಿಕೊಟ್ಟಿತು.  ಆರಂಭಿಕ ಜೋಡಿ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಆರಂಭಿಕ ವಿಕೆಟ್‌ಗೆ 59 ರನ್ ಸೇರಿಸಿದರು. ಇದರ ನೆರವಿನಿಂದ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್​ ಗಳಿಸಿತು.

ಇದನ್ನೂ ಓದಿ: ಸೇಡಿನ ಸಮರದಲ್ಲಿ ಆಸೀಸ್​ಗೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ..!

ಗುರಿ ಬೆನ್ನತ್ತಿದ ಬಾಂಗ್ಲಾದೇಶ ಪರ ಇಬ್ಬರು ದೊಡ್ಡ ಬ್ಯಾಟ್ಸ್‌ಮನ್‌ಗಳು (ಶಕೀಬ್ ಅಲ್ ಹಸನ್ ಮತ್ತು ತಂಜೀದ್ ಹಸನ್) ಖಾತೆ ತೆರೆಯಲು ವಿಫಲರಾದರು. ಇವುಗಳ ಹೊರತಾಗಿ ಕ್ಯಾಪ್ಟನ್ ಶಾಂಟೊ ಕೂಡ ಅಫ್ಘಾನಿಸ್ತಾನ ವಿರುದ್ಧ ವಿಶೇಷ ಸಾಧನೆ ಮಾಡಲಾಗಲಿಲ್ಲ. ಕೇವಲ 5 ಎಸೆತಗಳನ್ನು ಎದುರಿಸಿದ ಅವರು ಕೇವಲ 5 ರನ್ ಗಳಿಸಿದರು.

ರಶೀದ್ ಖಾನ್, ನವೀನ್ ಉಲ್ ಹಕ್ ಕೈಚಳಕ

ಅತ್ತ ಅಫ್ಘಾನಿಸ್ತಾನದ ಪರ ನಾಯಕ ರಶೀದ್ ಖಾನ್ 4 ಓವರ್​ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ನವೀನ್ ಉಲ್ ಹಕ್ 4 ಓವರ್​ಗಳಲ್ಲಿ 26 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮವಾಗಿ ಬಾಂಗ್ಲಾದೇಶ 17.5 ಓವರ್​ಗಳಲ್ಲಿ 105 ರನ್​​ಗಳಿಗೆ ಪತನವಾಯಿತು. ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ಔಟ್ ಆಗದೆ 54 ರನ್ ಗಳಿಸಿದರು. ಅವರ ಹೋರಾಟ ವ್ಯರ್ಥವಾಯಿತು.

ಆಸ್ಟ್ರೇಲಿಯಾ ಸೆಮಿ ಫೈನಲ್ ಕನಸಿಗೆ ಕೊಳ್ಳಿ

ಪಾಯಿಂಟ್ ಟೇಬಲ್ ಲೆಕ್ಕಾಚಾರ ಪ್ರಕಾರ ಸೂಪರ್ 8 ಹಂತದ ಗ್ರೂಪ್ 1ರಲ್ಲಿ ಭಾರತ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಫ್ಘಾನಿಸ್ತಾನ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ. ಒಂದು ವೇಳೆ ಈ ಪಂದ್ಯವನ್ನು ಬಾಂಗ್ಲಾದೇಶ ಗೆದ್ದಿದ್ದರೆ ರನ್​​ರೇಟ್ ಲೆಕ್ಕಾಚಾರ ಪ್ರಕಾರ ಆಸ್ಟ್ರೇಲಿಯಾ ಸೆಮಿ ಫೈನಲ್​​ಗೆ ಪ್ರವೇಶಿಸುತ್ತಿತ್ತು. ಹಾಗಾಗಿ ಸೆಮಿ ಫೈನಲ್ ಪ್ರವೇಶಿಸಲು ಈ ಪಂದ್ಯವನ್ನು 12.1 ಓವರ್‌ಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಬಾಂಗ್ಲಾದೇಶಕ್ಕಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Tue, 25 June 24

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ