AFG vs SL: ಟಿ20 ವಿಶ್ವಕಪ್‌ನಿಂದ ಅಫ್ಘಾನಿಸ್ತಾನ ಔಟ್; ಸೆಮಿಫೈನಲ್ ರೇಸ್​ಗೆ ಎಂಟ್ರಿಕೊಟ್ಟ ಶ್ರೀಲಂಕಾ..!

T20 World Cup 2022: ಈ ಪಂದ್ಯದ ಗೆಲುವಿನ ನಂತರ, ಶ್ರೀಲಂಕಾ ತಂಡದ ಸೆಮಿಫೈನಲ್ ಹಾದಿ ಇನ್ನು ಜೀವಂತವಾಗಿ ಉಳಿದಿದೆ. ಆದರೆ ಅಫ್ಘಾನಿಸ್ತಾನ ತಂಡದ ಟಿ20 ವಿಶ್ವಕಪ್ ಪ್ರಯಾಣ ಬಹುತೇಕ ಅಂತ್ಯಗೊಂಡಿದೆ.

AFG vs SL: ಟಿ20 ವಿಶ್ವಕಪ್‌ನಿಂದ ಅಫ್ಘಾನಿಸ್ತಾನ ಔಟ್; ಸೆಮಿಫೈನಲ್ ರೇಸ್​ಗೆ ಎಂಟ್ರಿಕೊಟ್ಟ ಶ್ರೀಲಂಕಾ..!
ಲಂಕಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Nov 01, 2022 | 2:18 PM

ಟಿ20 ವಿಶ್ವಕಪ್‌ನ (T20 World Cup 2022) 32ನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ತಂಡ (Sri Lanka defeated Afghanistan) ತನ್ನ ಸೇಮಿಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆದ ಈ ಗುಂಪು-1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 19ನೇ ಓವರ್‌ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶ್ರೀಲಂಕಾ ತಂಡದ ಗೆಲುವಿನ ಹೀರೋ ಆದ ಧನಂಜಯ್ ಡಿ ಸಿಲ್ವಾ (Dhananjay de Silva) ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಧನಂಜಯ್ 42 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರೆ, ಬೌಲಿಂಗ್​ನಲ್ಲಿ ವನಿಂದು ಹಸರಂಗ 4 ಓವರ್​ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದರು.

ಈ ಪಂದ್ಯದ ಗೆಲುವಿನ ನಂತರ, ಶ್ರೀಲಂಕಾ ತಂಡದ ಸೆಮಿಫೈನಲ್ ಹಾದಿ ಇನ್ನು ಜೀವಂತವಾಗಿ ಉಳಿದಿದೆ. ಆದರೆ ಅಫ್ಘಾನಿಸ್ತಾನ ತಂಡದ ಟಿ20 ವಿಶ್ವಕಪ್ ಪ್ರಯಾಣ ಬಹುತೇಕ ಅಂತ್ಯಗೊಂಡಿದೆ. ಅಫ್ಘಾನಿಸ್ತಾನ ತಂಡ ಆಡಿರುವ 4 ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಲಷ್ಟೇ ಶಕ್ತವಾಗಿದೆ. ಮಳೆಯಿಂದಾಗಿ ಪಂದ್ಯ ರದ್ದಾದ ಕಾರಣ ಈ ಅಂಕಗಳನ್ನೂ ಪಡೆದಿರುವ ಅಫ್ಘಾನ್ ತಂಡಕ್ಕೆ ಈ ಟೂರ್ನಿಯಲ್ಲಿ ಇದು ಎರಡನೇ ಸೋಲಾಗಿದೆ.

ಇದನ್ನೂ ಓದಿ: IND vs BAN: ನಾವು ವಿಶ್ವಕಪ್‌ ಗೆಲ್ಲಲು ಇಲ್ಲಿಗೆ ಬಂದಿಲ್ಲ, ಆದರೆ ಭಾರತ..? ಬಾಂಗ್ಲಾ ನಾಯಕನ ಶಾಕಿಂಗ್ ಹೇಳಿಕೆ

ಧನಂಜಯ ಅರ್ಧಶತಕ

ಈ ಸಾಧಾರಣ ಮೊತ್ತ ಬೆನ್ನಟ್ಟಿದ್ದ ಶ್ರೀಲಂಕಾ ತಂಡದ ಆರಂಭವೂ ಅಷ್ಟು ಉತ್ತಮವಾಗಿರಲಿಲ್ಲ. ತಂಡದ ಆರಂಭಿಕ ಆಟಗಾರ ಪಾತುಮ್ ನಿಸಂಕಾ ಕೇವಲ 10 ರನ್ ಗಳಿಸುವ ಮೂಲಕ ಮುಜೀಬ್ ಉರ್ ರೆಹಮಾನ್‌ಗೆ ಬಲಿಯಾದರು. ಮೊದಲ 6 ಓವರ್​ಗಳಲ್ಲಿ ಅಫ್ಘಾನ್ ಬೌಲರ್​ಗಳ ದಾಳಿಗೆ ಶ್ರೀಲಂಕಾ ಸಿಲುಕಿ ಹಾಕಿಕೊಂಡಿತು. ರಶೀದ್ ಖಾನ್ ಕೂಡ ಮಧ್ಯಮ ಓವರ್‌ಗಳಲ್ಲಿ ಒತ್ತಡ ಹೇರಿ, 25 ರನ್ ಗಳಿಸಿದ್ದ ಕುಸಾಲ್ ಮೆಂಡಿಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಈ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಧನಂಜಯ್ ಡಿ ಸಿಲ್ವಾ, 42 ಎಸೆತಗಳಲ್ಲಿ ಔಟಾಗದೆ 66 ರನ್‌ಗಳ ಇನಿಂಗ್ಸ್‌ ಆಡಿದರು. ಇವರಿಗೆ ಚರಿತ್ ಅಸಲಂಕಾ ಮತ್ತು ಭಾನುಕ ರಾಜಪಕ್ಸೆ ಕೂಡ ಉತ್ತಮ ಬೆಂಬಲ ನೀಡಿದರು. ಅಫ್ಘಾನಿಸ್ತಾನ ಪರ ರಶೀದ್ ಮತ್ತು ಮುಜೀಬ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು

ಅಫ್ಘಾನ್ ಬ್ಯಾಟಿಂಗ್ ವಿಫಲ

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಗಬ್ಬಾ ಪಿಚ್‌ನಲ್ಲಿ ಸಾರಾಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕರಿಬ್ಬರೂ 42 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರಾದರೂ ವೇಗವಾಗಿ ರನ್‌ಗಳಿಸಲು ಸಾಧ್ಯವಾಗಲಿಲ್ಲ. 28 ರನ್ ಗಳಿಸಿದ ಗುರ್ಬಾಜ್ ಮೊದಲು ಬಲಿಯಾದರೆ, ಆ ಬಳಿಕ 11ನೇ ಓವರ್​ನಲ್ಲಿ ಹಸರಂಗ ಉಸ್ಮಾನ್ ಘನಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇಬ್ರಾಹಿಂ ಜದ್ರಾನ್ ಕೂಡ 22 ರನ್ ಗಳಿಸಿ ಔಟಾದರು.

ಏತನ್ಮಧ್ಯೆ, ನಜೀಬುಲ್ಲಾ 18 ರನ್‌ಗಳಿಗೆ ಔಟಾದ ಕಾರಣ ಅಫ್ಘಾನಿಸ್ತಾನದ ದೊಡ್ಡ ಮೊತ್ತದ ಭರವಸೆ ಕೊನೆಗೊಂಡಿತು. ಲೆಗ್ ಸ್ಪಿನ್ನರ್ ಹಸರಂಗ ಡೆತ್ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಶ್ರೀಲಂಕಾ ಗೆಲುವನ್ನು ಖಚಿತಪಡಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ