ಈ 8 ತಂಡಗಳಲ್ಲಿ ಯಾರಿಗೆ ಸೆಮಿಫೈನಲ್ ಟಿಕೆಟ್? ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ ಅಂತಿಮ ಪಟ್ಟಿ
Syed Mushtaq Ali Trophy 2022: ಟೂರ್ನಿಯ ಸೆಮಿಫೈನಲ್ ಪಂದ್ಯಗಳು ನವೆಂಬರ್ 3 ರಂದು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 5 ರಂದು ನಡೆಯಲಿದೆ.
2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಸೆಮಿಫೈನಲ್‌ಗಾಗಿ ರೇಸ್ ನಡೆಯುತ್ತಿದೆ. ಈ ಕಡೆ ಭಾರತದಲ್ಲಿ ನಡೆಯುತ್ತಿರುವ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy 2022) ಸೆಮಿಫೈನಲ್‌ನ 4 ಸ್ಥಾನಗಳಿಗಾಗಿ 8 ತಂಡಗಳು ಪೈಪೋಟಿ ನಡೆಸಲಿವೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಮಂಗಳವಾರದಿಂದ ಆರಂಭವಾಗಿವೆ. ಕೆಲವೇ ಗಂಟೆಗಳ ಒಳಗೆ, ಪಂದ್ಯಾವಳಿಯಲ್ಲಿ 8 ತಂಡಗಳ ನಡುವೆ 4 ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಅದರಲ್ಲಿ ಗೆಲುವು ಸಾಧಿಸುವ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಟೂರ್ನಿಯ ಕ್ವಾರ್ಟರ್ ಫೈನಲ್‌ನ ವೇಳಾಪಟ್ಟಿ ಈಗ ಹೊರಬಿದ್ದಿದ್ದು, ಈ ಪಟ್ಟಿಯ ಪ್ರಕಾರ ಮೊದಲ ಮೂರು ಪಂದ್ಯಗಳು ಬೆಳಗ್ಗೆ 11ರಿಂದ ಆರಂಭವಾಗಲಿದ್ದು, ಉಳಿದ ಒಂದು ಪಂದ್ಯ ಸಂಜೆ 4.30 ಕ್ಕೆ ಆರಂಭವಾಗಲಿದೆ.
ಕೆಲವೇ ಗಂಟೆಗಳಲ್ಲಿ ನಿರ್ಧಾರ
ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಕರ್ನಾಟಕ ಮತ್ತು ಪಂಜಾಬ್ ನಡುವೆ ನಡೆಯಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬೆಳಗ್ಗೆ 11 ರಿಂದ ಆರಂಭವಾಗಲಿದೆ. ಎರಡನೇ ಕ್ವಾರ್ಟರ್ ಫೈನಲ್ ಕೂಡ ದೆಹಲಿ ಮತ್ತು ವಿದರ್ಭ ತಂಡಗಳ ನಡುವೆ 11 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯ ಜಾಧವ್ ಸಿಂಗ್ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ. ಮೂರನೇ ಕ್ವಾರ್ಟರ್ ಫೈನಲ್ ಪಂದ್ಯವೂ ಬೆಳಿಗ್ಗೆ 11 ರಿಂದ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಬಂಗಾಳ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿದೆ. ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯ ಹಗಲು- ರಾತ್ರಿ ಮಾದರಿಯಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಮುಂಬೈ ಮತ್ತು ಸೌರಾಷ್ಟ್ರ ಮುಖಾಮುಖಿಯಾಗುತ್ತಿವೆ.
ಮುಖಾಮುಖಿ |
ಪಂದ್ಯ ಆರಂಭದ ಸಮಯ |
ಕರ್ನಾಟಕ VS ಪಂಜಾಬ್ |
ಬೆಳಿಗ್ಗೆ 11 ಗಂಟೆ |
ದೆಹಲಿ vs ವಿದರ್ಭ |
ಬೆಳಿಗ್ಗೆ 11ಗಂಟೆ |
ಹಿಮಾಚಲ ಪ್ರದೇಶ vs ಬಂಗಾಳ |
ಬೆಳಿಗ್ಗೆ 11 ಗಂಟೆ |
ಮುಂಬೈ vs ಸೌರಾಷ್ಟ್ರ |
ಮಧ್ಯಾಹ್ನ 4:30 |
ನವೆಂಬರ್ 5 ರಂದು ಫೈನಲ್
ನವೆಂಬರ್ 1 ರಂದು ಅರ್ಥಾತ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 4 ಸೆಮಿಫೈನಲ್ ತಂಡಗಳನ್ನು ಕೆಲವೇ ಗಂಟೆಗಳ ಒಳಗೆ ನಿರ್ಧರಿಸಲಾಗುತ್ತದೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ನವೆಂಬರ್ 3 ರಂದು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 5 ರಂದು ನಡೆಯಲಿದೆ.
ಕ್ವಾರ್ಟರ್ ಫೈನಲ್‌ಗೆ ಹೋಗುವ ಎಲ್ಲಾ ತಂಡಗಳು ಗುಂಪು ಹಂತದಲ್ಲಿ ಆಯಾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದವು. ಆದರೆ, ಈಗ ಸೆಮಿಫೈನಲ್ ಟಿಕೆಟ್ ಯಾರಿಗೆ ಎಂಬುದು ಕೋಲ್ಕತ್ತಾದ ಮೈದಾನದಲ್ಲಿ ಮಂಗಳವಾರ ನಿರ್ಧಾರವಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 1 November 22