AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: ಗಂಗೂಲಿ ಬಳಿಕ ಮಗಳು ಸನಾ ಗಂಗೂಲಿಗೆ ಕೊರೊನಾ ಪಾಸಿಟಿವ್! ಮತ್ತಿಬ್ಬರು ಕುಟುಂಬ ಸದಸ್ಯರಿಗೂ ಸೋಂಕು

Sourav Ganguly: ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಳಿಕ ಅವರ ಪುತ್ರಿ ಸನಾ ಕೊರೊನಾಗೆ ತುತ್ತಾಗಿದ್ದಾರೆ. ಅದೇ ಸಮಯದಲ್ಲಿ, ಗಂಗೂಲಿ ಅವರ ಸಹೋದರ ಸ್ನೇಹಶಿಶ್ ಮತ್ತು ಅವರ ಪತ್ನಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

Sourav Ganguly: ಗಂಗೂಲಿ ಬಳಿಕ ಮಗಳು ಸನಾ ಗಂಗೂಲಿಗೆ ಕೊರೊನಾ ಪಾಸಿಟಿವ್! ಮತ್ತಿಬ್ಬರು ಕುಟುಂಬ ಸದಸ್ಯರಿಗೂ ಸೋಂಕು
ಪುತ್ರಿಯೊಂದಿಗೆ ಗಂಗೂಲಿ
TV9 Web
| Updated By: ಪೃಥ್ವಿಶಂಕರ|

Updated on: Jan 05, 2022 | 1:15 PM

Share

ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಳಿಕ ಅವರ ಪುತ್ರಿ ಸನಾ ಕೊರೊನಾಗೆ ತುತ್ತಾಗಿದ್ದಾರೆ. ಅದೇ ಸಮಯದಲ್ಲಿ, ಗಂಗೂಲಿ ಅವರ ಸಹೋದರ ಸ್ನೇಹಶಿಶ್ ಮತ್ತು ಅವರ ಪತ್ನಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ಸೋಂಕಿತ ಎಲ್ಲ ಸದಸ್ಯರನ್ನು ಮನೆಯೊಳಗೆ ಪ್ರತ್ಯೇಕಿಸಲಾಗಿದೆ. ಮಂಗಳವಾರ ರಾತ್ರಿ ಸನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅವರಿಗೆ ಸ್ವಲ್ಪ ಜ್ವರ ಮತ್ತು ಕೆಮ್ಮು ಇತ್ತು ನಂತರ ಅವರಿಗೆ ಕೊರೊನಾ ಪರೀಕ್ಷೆಯನ್ನು ಮಾಡಲಾಯಿತು. ಅವರ ರೋಗಲಕ್ಷಣಗಳು ಗಂಭೀರವಾಗಿಲ್ಲ, ಅದಕ್ಕಾಗಿಯೇ ಅವರನ್ನು ಮನೆಯಲ್ಲಿ ಪ್ರತ್ಯೇಕಿಸಲಾಗಿದೆ.

ಗಂಗೂಲಿ ವರದಿ ನೆಗೆಟಿವ್ ಕೆಲವು ದಿನಗಳ ಹಿಂದೆ, ಗಂಗೂಲಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಮನೆಗೆ ಮರಳಿದರು. ಅವರು ಡೆಲ್ಟಾ ರೂಪಾಂತರಿಗೆ ತುತ್ತಾಗಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಅದೇ ಸಮಯದಲ್ಲಿ, ಸನಾ ಗಂಗೂಲಿ ಮತ್ತು ಗಂಗೂಲಿ ಅವರ ಪತ್ನಿ ಡೊನ್ನಾ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಇಬ್ಬರ ವರದಿಗಳು ನೆಗೆಟಿವ್ ಬಂದಿತ್ತು. ಈಗ ಗಂಗೂಲಿಯವರ ವರದಿ ನೆಗೆಟಿವ್ ಬಂದಿದೆ. ಆದರೆ ಅವರ ಮಗಳಿಗೆ ಸೋಂಕು ತಗುಲಿದೆ. ಆದರೆ, ಯಾವ ವೇರಿಯಂಟ್‌ನಿಂದ ಅವರಿಗೆ ಕೊರೊನಾ ಬಂದಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

49 ವರ್ಷದ ಗಂಗೂಲಿ ಅವರು ಕೋವಿಡ್-19 ಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಪಾಸಿಟಿವ್ ಆದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಡಿಸೆಂಬರ್ 27 ರಂದು ರಾತ್ರಿ ವುಡ್‌ಲ್ಯಾಂಡ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವರ್ಷದ ಆರಂಭದಲ್ಲಿ ಗಂಗೂಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಮಸ್ಯೆಗಳಿಂದಾಗಿ ಅವರು ತುರ್ತು ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು.

ಇದನ್ನೂ ಓದಿ:Sourav Ganguly: ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್; ಕೊರೊನಾ ಸೋಂಕಿತ ಗಂಗೂಲಿಗೆ ಮನೆಯಲ್ಲೇ ಚಿಕಿತ್ಸೆ