AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NZ vs BAN: ತವರಿನಲ್ಲೇ ಕಿವೀಸ್​ಗೆ ಮುಖಭಂಗ; ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಬಾಂಗ್ಲಾದೇಶ

NZ vs BAN: 21 ವರ್ಷಗಳ ನಂತರ ಬಾಂಗ್ಲಾದೇಶ ತಂಡವು ಕಿವೀಸ್ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿದ್ದು ಇದೇ ಮೊದಲು. ಈ ಸೋಲಿನ ಮೊದಲು, ಆತಿಥೇಯ ತಂಡವು ಇಲ್ಲಿಯವರೆಗೆ ತವರಿನಲ್ಲಿ ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿರಲಿಲ್ಲ.

NZ vs BAN: ತವರಿನಲ್ಲೇ ಕಿವೀಸ್​ಗೆ ಮುಖಭಂಗ; ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಬಾಂಗ್ಲಾದೇಶ
ಬಾಂಗ್ಲಾ ತಂಡ
TV9 Web
| Updated By: ಪೃಥ್ವಿಶಂಕರ|

Updated on: Jan 05, 2022 | 2:43 PM

Share

ನ್ಯೂಜಿಲೆಂಡ್ ತಲುಪಿರುವ ಬಾಂಗ್ಲಾದೇಶ ತಂಡ ಗೆಲುವಿನೊಂದಿಗೆ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೌಂಟ್ ಮಂಗುಯಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. 21 ವರ್ಷಗಳ ನಂತರ ಬಾಂಗ್ಲಾದೇಶ ತಂಡವು ಕಿವೀಸ್ ತಂಡವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿದ್ದು ಇದೇ ಮೊದಲು. ಈ ಸೋಲಿನ ಮೊದಲು, ಆತಿಥೇಯ ತಂಡವು ಇಲ್ಲಿಯವರೆಗೆ ತವರಿನಲ್ಲಿ ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿರಲಿಲ್ಲ. ಈ ಜಯದಿಂದ ಬಾಂಗ್ಲಾದೇಶ ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬಾಂಗ್ಲಾದೇಶದ ಈ ಗೆಲುವು ಎಷ್ಟು ಮುಖ್ಯವಾದುದೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಚಾಂಪಿಯನ್ ತಂಡವಾದ ನ್ಯೂಜಿಲೆಂಡ್ 5 ವರ್ಷ ಮತ್ತು 17 ಟೆಸ್ಟ್ ಪಂದ್ಯಗಳ ನಂತರ ತವರಿನಲ್ಲಿ ಸೋತಿದೆ ಎಂಬ ಅಂಶದಿಂದ ಅಳೆಯಬಹುದು. ಸರಣಿಯ ಎರಡನೇ ಟೆಸ್ಟ್ ಜನವರಿ 9 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಬಾಂಗ್ಲಾದೇಶ ತಂಡಕ್ಕೆ ಇದೀಗ ಮೊದಲ ಬಾರಿಗೆ ಕಿವೀಸ್‌ನಿಂದ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಸಿಕ್ಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಬಾಂಗ್ಲಾದೇಶ ಈ ಗೆಲುವಿನಿಂದ 12 ಪ್ರಮುಖ ಅಂಕಗಳನ್ನು ಪಡೆದುಕೊಂಡಿದೆ.

ಇಬಾದತ್ ಹುಸೇನ್ ಅದ್ಭುತ ಬೌಲಿಂಗ್ ಐದನೇ ದಿನದಂತ್ಯಕ್ಕೆ ನ್ಯೂಜಿಲೆಂಡ್ ಐದು ವಿಕೆಟ್‌ಗೆ 147 ರನ್‌ಗಳ ಮುಂದೆ ಆಟ ಆರಂಭಿಸಿತು. ಅವರ ಕೊನೆಯ ಐದು ವಿಕೆಟ್‌ಗಳು ಕೇವಲ 22 ರನ್‌ಗಳನ್ನು ಸೇರಿಸಲು ಸಾಧ್ಯವಾಯಿತು, ಈ ಇಶಸ್ಸು ಬಾಂಗ್ಲಾದೇಶದ ವೇಗದ ಬೌಲರ್ ಇಬಾದತ್ ಹೊಸೈನ್‌ಗೆ ಸಲ್ಲುತ್ತದೆ. ಇಬಾದತ್ ಹುಸೇನ್ 46 ರನ್ ನೀಡಿ ಆರು ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ನ್ಯೂಜಿಲೆಂಡ್‌ಗೆ ಬರುವ ಮೊದಲು ಅವರು 10 ಟೆಸ್ಟ್ ಪಂದ್ಯಗಳಲ್ಲಿ 81.54 ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು. ಇವರಲ್ಲದೆ ತಸ್ಕಿನ್ ಅಹ್ಮದ್ ಮೂರು ವಿಕೆಟ್ ಪಡೆದರು. ಒಂದು ವಿಕೆಟ್ ಕೂಡ ಮೆಹದಿ ಹಸನ್ ಮಿರಾಜ್ ಖಾತೆಗೆ ಸೇರಿತು. ಇದಾದ ಬಳಿಕ ಬಾಂಗ್ಲಾದೇಶ ತಂಡಕ್ಕೆ 40 ರನ್‌ಗಳ ಗುರಿ.

ಕಳಪೆ ಆರಂಭದ ನಂತರ ಬಾಂಗ್ಲಾದೇಶಕ್ಕೆ ಗೆಲುವು 42 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶದ ಆರಂಭ ಅತ್ಯಂತ ಕಳಪೆಯಾಗಿತ್ತು. ಎರಡನೇ ಓವರ್‌ನಲ್ಲಿ ಟಿಮ್ ಸೌಥಿ ಆರಂಭಿಕ ಆಟಗಾರ ಶದ್ಮನ್ ಇಸ್ಲಾಂ (3) ವಿಕೆಟ್ ಪಡೆದರು. ಇದಾದ ಬಳಿಕ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಅರ್ಧಶತಕ ಗಳಿಸಿದ್ದ ನಜ್ಮುಲ್ ಹಸನ್ ಶಾಂಟೊ (17) ಅವರನ್ನು ಕೈಲ್ ಜೇಮಿಸನ್ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಮೊಮಿನುಲ್ ಹಕ್ (ಔಟಾಗದೆ 13) ಮತ್ತು ಮುಶ್ಫಿಕರ್ ರಹೀಮ್ (ಔಟಾಗದೆ 5) ತಂಡಕ್ಕೆ ಜಯ ತಂದುಕೊಟ್ಟ ಬಳಿಕವೇ ವಾಪಸಾದರು.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 328 ರನ್ ಗಳಿಸಿತ್ತು. ನಾಯಕ ಮೊಮಿನುಲ್ ಹಕ್ (88), ಲಿಟನ್ ದಾಸ್ (86), ಮಹ್ಮುದುಲ್ ಹಸನ್ ಜಾಯ್ (78) ಮತ್ತು ನಜ್ಮುಲ್ ಹೊಸೈನ್ ಶಾಂಟೊ (64) ಅವರ ಅರ್ಧಶತಕಗಳ ನೆರವಿನಿಂದ ಬಾಂಗ್ಲಾದೇಶ 458 ರನ್ ಗಳಿಸಿ 130 ರನ್​ಗಳ ಬೃಹತ್ ಮುನ್ನಡೆ ಸಾಧಿಸಿತು.