ವಿಶ್ವಕಪ್ ಫೈನಲ್​ಗೇರಿದ ಭಾರತ; ಲಕ್ಷ ದಾಟಿದ ಹೋಟೆಲ್ ದರ! ವಿಮಾನ ಪ್ರಯಾಣವೂ ದುಬಾರಿ

ICC World Cup 2023 Final: ಐಸಿಸಿ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಫೈನಲ್​ಗೇರಿದ್ದೆ ಬಂತು ಅಹಮದಾಬಾದ್​ನಲ್ಲಿರುವ ಹೋಟೆಲ್​ಗಳ ಭಾಗ್ಯದ ಬಾಗಿಲು ತೆರೆದಂತ್ತಾಗಿದೆ. ಇದೇ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಕಾರಣ ನಗರದ ಹಲವಾರು ಪ್ರಸಿದ್ಧ ಹೋಟೆಲ್‌ಗಳು ತಮ್ಮ ದರವನ್ನು ದುಪ್ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ.

ವಿಶ್ವಕಪ್ ಫೈನಲ್​ಗೇರಿದ ಭಾರತ; ಲಕ್ಷ ದಾಟಿದ ಹೋಟೆಲ್ ದರ! ವಿಮಾನ ಪ್ರಯಾಣವೂ ದುಬಾರಿ
ವಿಶ್ವಕಪ್ ಫೈನಲ್
Follow us
ಪೃಥ್ವಿಶಂಕರ
|

Updated on:Nov 16, 2023 | 8:47 PM

ಐಸಿಸಿ ವಿಶ್ವಕಪ್​ನಲ್ಲಿ (ICC World Cup 2023) ಟೀಂ ಇಂಡಿಯಾ ಫೈನಲ್​ಗೇರಿದ್ದೆ ಬಂತು ಅಹಮದಾಬಾದ್​ನಲ್ಲಿರುವ (Ahmedabad) ಹೋಟೆಲ್​ಗಳ ಭಾಗ್ಯದ ಬಾಗಿಲು ತೆರೆದಂತ್ತಾಗಿದೆ. ಇದೇ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿರುವ ಫೈನಲ್ ಪಂದ್ಯದ ಕಾರಣ ನಗರದ ಹಲವಾರು ಪ್ರಸಿದ್ಧ ಹೋಟೆಲ್‌ಗಳು ತಮ್ಮ ದರವನ್ನು ದುಪ್ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಹೋಟೆಲ್ ಕೊಠಡಿಯ ಒಂದು ರಾತ್ರಿ ಬಾಡಿಗೆ 5 ಸಾವಿರ ರೂಪಾಯಿ ಇದ್ದು, ಈಗ 50 ಸಾವಿರ ರೂಪಾಯಿಗೆ ಏರಿಯಾಗಿದೆ. ಅಷ್ಟೇ ಅಲ್ಲ ಕೆಲವು ಹೋಟೆಲ್​ಗಳ ದರ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಸದ್ಯದ ವರದಿ ಪ್ರಕಾರ, ಹೆಚ್ಚಿನ ಹೋಟೆಲ್‌ಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಕೆಲವು ಐಷಾರಾಮಿ ಹೋಟೆಲ್‌ಗಳು ನವೆಂಬರ್ 18 ಕ್ಕೆ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿವೆ ಎಂದು ತಿಳಿದುಬಂದಿದೆ.

5 ಸ್ಟಾರ್, ತ್ರೀ ಸ್ಟಾರ್ ಹೋಟೆಲ್‌ಗಳು ಭರ್ತಿ

ವಾಸ್ತವವಾಗಿ ವಿಶ್ವಕಪ್​ ವೇಳಾಪಟ್ಟಿ ಹೊರಬಿದ್ದ ಕೂಡಲೇ ಅಹಮದಾಬಾದ್‌ನ ಹೋಟೆಲ್​ಗಳು ದರ ಏರಿಕೆಯ ಬಗ್ಗೆ ಚಿಂತಿಸಿಲಾರಂಭಿಸಿದ್ದವು. ಅದಕ್ಕೆ ಪ್ರಮುಖ ಕಾರಣ ನವೆಂಬರ್ 19 ರಂದು ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಆತಿಥ್ಯವಹಿಸುತ್ತಿರುವುದು. ಇದೀಗ ಟೀಂ ಇಂಡಿಯಾ ಫೈನಲ್​ಗೇರಿರುವುದು ಅಹಮದಾಬಾದ್‌ ಹೋಟೆಲ್​ಗಳ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇನ್ನು ಪ್ರತಿಷ್ಠಿತ ಹೋಟೆಲ್ ಕುರಿತು ಮಾತನಾಡುವುದಾದರೆ, ಐಟಿಸಿ ವೆಲ್‌ಕಮ್‌ನ ಒಂದು ರಾತ್ರಿಯ ರೂಮ್ ದರ ಒಂದು ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಹೋಟೆಲ್ ವಿವಾಂತದ ಒಂದು ರಾತ್ರಿ ಬಾಡಿಗೆ 90 ಸಾವಿರ ರೂಪಾಯಿ. ಕೋರ್ಟ್ಯಾರ್ಡ್ ಮ್ಯಾರಿಯೆಟ್ನ 60 ಸಾವಿರ ರೂಪಾಯಿ, ಹೋಟೆಲ್ ನವೋದಯ 55000 ರೂಪಾಯಿಗಳು ಮತ್ತು ಹಿಲಕ್ನ ಹೋಟೆಲ್​ 63000 ರೂಪಾಯಿಗಳ ದರ ನಿಗದಿಪಡಿಸಿವೆ. ಪ್ರಸ್ತುತ ನಗರದಲ್ಲಿ ಪಂಚತಾರಾ ಮತ್ತು ತ್ರಿತಾರಾ ಹೋಟೆಲ್‌ಗಳ 10 ಸಾವಿರಕ್ಕೂ ಹೆಚ್ಚು ಕೊಠಡಿಗಳಿವೆ. ಅದರಲ್ಲಿ ಹೆಚ್ಚಿನವು ಈಗಾಗಲೇ ಬುಕ್ ಆಗಿವೆ ಎಂದು ವರದಿಯಾಗಿದೆ.

ಕ್ರಿಕೆಟ್ ವಿಶ್ವಕಪ್ ಪಂದ್ಯದ ಕಾರಣ ಅಹಮದಾಬಾದ್‌ಗೆ ವಿಮಾನ ಪ್ರಯಾಣ ದರದಲ್ಲೂ ಭಾರಿ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ವಿಮಾನದ ಪ್ರಯಾಣ ದರ 3500 ರಿಂದ 5 ಸಾವಿರ ರೂಪಾಯಿಗಳಷ್ಟಿದ್ದರೆ, ವಿಮಾನ ಟಿಕೆಟ್‌ನ ಏಕಮುಖ ದರ ಈಗ 25 ರಿಂದ 30 ಸಾವಿರಕ್ಕೆ ಏರಿದೆ. ವಿಮಾನ ಪ್ರಯಾಣ ದರವನ್ನು ರಾತ್ರೋರಾತ್ರಿ 5 ರಿಂದ 7 ಪಟ್ಟು ಹೆಚ್ಚಿಸಲಾಗಿದೆ.

ವಿಮಾನಗಳ ದರದಲ್ಲಿ 5 ರಿಂದ 7 ಪಟ್ಟು ಹೆಚ್ಚಳ

ಸದ್ಯ ಹೋಟೆಲ್ ಮತ್ತು ವಿಮಾನ ದರ ಎರಡರಲ್ಲೂ ಸಾಮಾನ್ಯ ದಿನಕ್ಕಿಂತ 15 ರಿಂದ 20 ಸಾವಿರ ರೂ. ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ ಒಂದು ಮಾರ್ಗದ ವಿಮಾನ ದರ ಸುಮಾರು 4 ರಿಂದ 5 ಸಾವಿರ ಇತ್ತು. ಈಗ 25ರಿಂದ 30 ಸಾವಿರ ರೂ.ಗೆ ಏರಿಕೆಯಾಗಿದೆ. ಅಲ್ಲದೆ ನವೆಂಬರ್ 19 ರಂದು ಅಹಮದಾಬಾದ್‌ಗೆ ಆಗಮಿಸುವ ಹೆಚ್ಚಿನ ವಿಮಾನಗಳು ಬಹುತೇಕ ಸಂಪೂರ್ಣವಾಗಿ ಬುಕ್ ಆಗಿವೆ. ಪ್ರಸ್ತುತ ಸೀಮಿತ ಟಿಕೆಟ್‌ಗಳು ಮಾತ್ರ ಲಭ್ಯವಿವೆ. ಸಾಮಾನ್ಯ ದಿನಗಳಲ್ಲಿ ದೆಹಲಿಯಿಂದ ಅಹಮದಾಬಾದ್‌ಗೆ ಒಂದು ಮಾರ್ಗದ ವಿಮಾನ ದರ ಸುಮಾರು 3500 ರೂ. ಇರುತ್ತಿತ್ತು. ಆದರೆ ನವೆಂಬರ್ 18 ರಂದು ವಿಮಾನದ ಟಿಕೆಟ್ ದರವು 23000 ರೂ.ಗೆ ಏರಿದೆ. ಮುಂಬೈನಿಂದ ಅಹಮದಾಬಾದ್‌ಗೆ ವಿಮಾನ ದರ 3500 ರಿಂದ 28000 ರೂಪಾಯಿಗಳಿಗೆ ಏರಿಕೆಯಾಗಿದೆ. ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣ ದರವು 7000 ರಿಂದ 36000 ಕ್ಕೆ ಏರಿಕೆಯಾಗಿದೆ. ಹಾಗೆಯೇ ಚೆನ್ನೈನಿಂದ ಅಹಮದಾಬಾದ್‌ಗೆ 5000 ರಿಂದ 24000 ರೂ. ಏರಿಕೆಯಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Thu, 16 November 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ