IND vs AUS: ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುತ್ತಾ ನಿದ್ರೆಗೆ ಜಾರಿದ ಅನುಷ್ಕಾ ಶರ್ಮಾ; ವಿಡಿಯೋ ನೋಡಿ

|

Updated on: Mar 05, 2025 | 7:03 PM

Anushka Sharma's Sleep Video Viral: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 84 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಈ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಅವರು ಕ್ರೀಡಾಂಗಣದಲ್ಲೇ ನಿದ್ರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

IND vs AUS: ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುತ್ತಾ ನಿದ್ರೆಗೆ ಜಾರಿದ ಅನುಷ್ಕಾ ಶರ್ಮಾ; ವಿಡಿಯೋ ನೋಡಿ
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
Follow us on

ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಿತು. ಮಾರ್ಚ್ 4 ರಂದು ನಡೆದ ಈ ಪಂದ್ಯದಲ್ಲಿ, ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಗೆಲುವಿನಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ 84 ರನ್‌ಗಳು ಪ್ರಮುಖ ಪಾತ್ರ ವಹಿಸಿದವು. ಈ ಸ್ಮರಣೀಯ ಇನ್ನಿಂಗ್ಸ್​ಗಾಗಿ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಈ ಹೈವೋಲ್ಟೇಜ್ ಕದನದಲ್ಲಿ ಪತಿರಾಯ ವಿರಾಟ್‌ಗೆ ಬೆಂಬಲ ನೀಡಲು ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಕ್ರೀಡಾಂಗಣಕ್ಕೆ ಬಂದಿದ್ದರು. ಈಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ನಿದ್ರಿಸುತ್ತಿರುವುದನ್ನು ಕಾಣಬಹುದಾಗಿದೆ. ಅಚ್ಚರಿಯ ಸಂಗತಿಯೆಂದರೆ ಅನುಷ್ಕಾ, ವಿರಾಟ್ ಬ್ಯಾಟಿಂಗ್ ನೋಡುತ್ತಲೇ ನಿದ್ರೆಗೆ ಜಾರಿದ್ದಾರೆ ಎಂದು ಹೇಳಲಾಗುತ್ತಿದೆ.

ನಿದ್ರೆಗೆ ಜಾರಿದ ಅನುಷ್ಕಾ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ, ಭಾರತದ ಇನ್ನಿಂಗ್ಸ್​ನ ವಿರಾಮದ ಸಮಯದಲ್ಲಿ ಸೆರೆಯಾಗಿರುವುದು ಎಂದು ಹೇಳಲಾಗುತ್ತಿದೆ. ವಿರಾಮದ ಸಮಯದಲ್ಲಿ ಕ್ಯಾಮೆರಾಮನ್ ಅನುಷ್ಕಾ ಶರ್ಮಾ ನಿದ್ರಿಸುತ್ತಿರುವುದನ್ನು ತೋರಿಸಿದ್ದಾನೆ. ಆ ಸಮಯದಲ್ಲಿ, ಕೊಹ್ಲಿ 28 ಎಸೆತಗಳಲ್ಲಿ 18 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಈ ದೃಷ್ಟಿಕೋನದಿಂದ ನೋಡಿದರೆ, ಕೊಹ್ಲಿ ಸ್ವಲ್ಪ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ವಿರಾಟ್ ಅವರ ಬ್ಯಾಟಿಂಗ್​ನಿಂದಾಗಿಯೇ ಅವರು ನಿದ್ರೆಗೆ ಜಾರಿದರು ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದಾಗ್ಯೂ, ವಿರಾಟ್ ಅವರ ನಿಧಾನಗತಿಯ ಇನ್ನಿಂಗ್ಸ್ ಬಗ್ಗೆ ಮಾತನಾಡಿದರೆ, ಈ ರೀತಿಯ ಬ್ಯಾಟಿಂಗ್ ಹಿಂದೆ ಒಂದು ದೊಡ್ಡ ಕಾರಣವಿತ್ತು. ವಾಸ್ತವವಾಗಿ, ಪವರ್ ಪ್ಲೇನಲ್ಲಿ ಎರಡು ವಿಕೆಟ್ ಕಳೆದುಕೊಂಡ ನಂತರ, ಭಾರತ ತಂಡವು ಸ್ವಲ್ಪ ಒತ್ತಡಕ್ಕೆ ಒಳಗಾಯಿತು. ನಂತರ ಪಂದ್ಯದಲ್ಲಿ ಹಿಡಿತ ಸಾಧಿಸಲು ಭಾರತಕ್ಕೆ ವಿಕೆಟ್‌ಗಳನ್ನು ಉಳಿಸುವುದರ ಜೊತೆಗೆ ಪಾಲುದಾರಿಕೆ ಅಗತ್ಯವಿತ್ತು. ಹೀಗಾಗಿ ಕೊಹ್ಲಿ ನಿಧಾನಗತಿಯ ಆಟಕ್ಕೆ ಮುಂದಾಗಿದ್ದರು.

ಇದನ್ನೂ ಓದಿ
ಕೊಹ್ಲಿ ಆಟವನ್ನು ಹೊಗಳಿದ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್
ನಾನು ಈ ವಿಷಯಗಳ ಬಗ್ಗೆ ಎಂದಿಗೂ ಗಮನ ಹರಿಸಲಿಲ್ಲ; ಕೊಹ್ಲಿ
6 ನಾಕೌಟ್ ಪಂದ್ಯಗಳಲ್ಲಿ 390 ರನ್; ಕೊಹ್ಲಿಗೆ ಕೊಹ್ಲಿಯೇ ಸಾಟಿ
ಮತ್ತೊಂದು ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಕೊಹ್ಲಿ

ಇದನ್ನೂ ಓದಿ: IND vs AUS: ‘ನನಗೆ ಅದು ಮುಖ್ಯವಲ್ಲ’; ಐತಿಹಾಸಿಕ ಇನ್ನಿಂಗ್ಸ್ ಆಡಿದ ಬಳಿಕ ಕೊಹ್ಲಿ ಹೇಳಿದ್ದೇನು?

ಪಂದ್ಯ ಹೀಗಿತ್ತು

ದುಬೈನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಭಾರತಕ್ಕೆ 265 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಟೀಂ ಇಂಡಿಯಾ 5 ನೇ ಓವರ್‌ನಲ್ಲಿಯೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಅದಕ್ಕಾಗಿಯೇ ಕೊಹ್ಲಿ ಈ ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಬರಬೇಕಾಯಿತು. ಅವರು ಬಂದ ಕೇವಲ ಎರಡು ಓವರ್‌ಗಳ ನಂತರ, ಭಾರತದ ನಾಯಕ ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಇದಾದ ನಂತರ, ಕೊಹ್ಲಿ, ಶ್ರೇಯಸ್ ಅಯ್ಯರ್ ಜೊತೆಗೂಡಿ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡು 91 ರನ್‌ಗಳ ಪಾಲುದಾರಿಕೆಯನ್ನು ಮಾಡಿದರು. ಆದರೆ ಅಯ್ಯರ್ ಕೂಡ ತಂಡದ ಮೊತ್ತ 134 ರನ್​ಗಳಿರುವಾಗ ಔಟಾದರು. ಆ ನಂತರ ಕೊಹ್ಲಿ, ಅಕ್ಷರ್ ಪಟೇಲ್ ಜೊತೆ 44 ರನ್ ಮತ್ತು ಕೆಎಲ್ ರಾಹುಲ್ ಜೊತೆ 47 ರನ್​ಗಳ ಎರಡು ನಿರ್ಣಾಯಕ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Wed, 5 March 25