AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ‘ನನಗೆ ಅದು ಮುಖ್ಯವಲ್ಲ’; ಐತಿಹಾಸಿಕ ಇನ್ನಿಂಗ್ಸ್ ಆಡಿದ ಬಳಿಕ ಕೊಹ್ಲಿ ಹೇಳಿದ್ದೇನು?

Virat Kohli's Crucial Innings: ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ 84 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ತಂಡದ ಆರಂಭಿಕ ಆಘಾತದ ನಂತರವೂ ಕೊಹ್ಲಿಯ ಅಮೋಘ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೊಹ್ಲಿ ದಾಖಲೆಗಳಿಗಿಂತ ಗೆಲುವು ಮುಖ್ಯ ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

IND vs AUS: ‘ನನಗೆ ಅದು ಮುಖ್ಯವಲ್ಲ’; ಐತಿಹಾಸಿಕ ಇನ್ನಿಂಗ್ಸ್ ಆಡಿದ ಬಳಿಕ ಕೊಹ್ಲಿ ಹೇಳಿದ್ದೇನು?
Virat Kohli
ಪೃಥ್ವಿಶಂಕರ
|

Updated on: Mar 04, 2025 | 10:53 PM

Share

ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ತಮ್ಮ ಮ್ಯಾಜಿಕ್ ಪ್ರದರ್ಶಿಸಿ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ 84 ರನ್‌ಗಳ ಗೆಲುವಿನ ಕಾಣಿಕೆ ನೀಡಿದರು. ತಂಡ ಆರಂಭಿಕ ಆಘಾತದಲ್ಲಿದ್ದಾಗ ಐತಿಹಾಸಿಕ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಗೆಲುವಿನಂಚಿನಲಿ ಎಡವಿದರು. ಆದಾಗ್ಯೂ ಕೊಹ್ಲಿಯ ಆ 84 ರನ್​ಗಳ ಅದಾಗಲೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದುಬಿಟ್ಟಿದ್ದವು. ತಂಡವನ್ನು ಫೈನಲ್​ಗೇರಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ದಾಖಲೆಗಳಿಗಾಗಿಯೇ ಆಡುತ್ತಾನೆ ಎಂದು ಟೀಕಿಸುವವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

ನನಗೆ ಅದು ಮುಖ್ಯವಲ್ಲ; ಕೊಹ್ಲಿ

ಭಾರತ ಫೈನಲ್​ಗೇರಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ‘ಈ ಪಿಚ್‌ನಲ್ಲಿ ಜೊತೆಯಾಟ ನಿರ್ಮಿಸುವುದು ಮುಖ್ಯವಾಗಿತ್ತು. ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕಾಗುತ್ತದೆ. ಆ ನಂತರ ನಾನು ನನ್ನ ಇನ್ನಿಂಗ್ಸ್ ಆಡಲು ಆರಂಭಿಸಿದೆ. ನನ್ನ ಸಮಯ, ಕ್ರೀಸ್‌ನಲ್ಲಿರುವ ನನ್ನ ತಾಳ್ಮೆ, ನಾನು ಆತುರಪಡಲಿಲ್ಲ. ನಾನು ತೆಗೆದುಕೊಂಡ ಸಿಂಗಲ್ಸ್‌ಗಳು ನನಗೆ ಅತ್ಯಂತ ತೃಪ್ತಿಕರವಾದ ಭಾಗವಾಗಿದ್ದವು ಎಂದರು.

ಇನ್ನು ಹೈವೋಲ್ಟೇಜ್ ಪಂದ್ಯದಲ್ಲಿ ಒತ್ತಡವನ್ನು ನಿಭಾಯಿಸುವ ಬಗ್ಗೆ ಮಾತನಾಡಿದ ಕೊಹ್ಲಿ, ನೀವು ನೆಲಕಚ್ಚಿ ನಿಂತರೆ ಸಾಮಾನ್ಯವಾಗಿ ಎದುರಾಳಿ ತಂಡಗಳು ಪಂದ್ಯವನ್ನು ಕೈಚೆಲ್ಲಿ ಬಿಡುತ್ತವೆ. ಇಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಮುಖ್ಯ. ರನ್ ರೇಟ್ ಪ್ರತಿ ಓವರ್‌ಗೆ ಆರು ರನ್‌ಗಳಾಗಿದ್ದರೂ, ನಾನು ಚಿಂತಿಸುವುದಿಲ್ಲ ಎಂದರು.

ಇದನ್ನೂ ಓದಿ: 6 ಐಸಿಸಿ ನಾಕೌಟ್ ಪಂದ್ಯ, 5 ಅರ್ಧಶತಕ, 390 ರನ್..! ಕಿಂಗ್ ಕೊಹ್ಲಿಗೆ ಸರಿಸಾಟಿ ಯಾರು?

ವಿರಾಟ್‌ಗೆ ಯಾವುದು ಮುಖ್ಯವಲ್ಲ

ಇದಾದ ಬಳಿಕ ವಿರಾಟ್ ಬಳಿ, ಆಸೀಸ್ ವಿರುದ್ಧದ ಈ ಇನ್ನಿಂಗ್ಸ್ ಇದುವರೆಗಿನ ನಿಮ್ಮ ಅತ್ಯುತ್ತಮ ಪ್ರದರ್ಶನವೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ವಿರಾಟ್, ‘ನನಗೆ ಗೊತ್ತಿಲ್ಲ, ಇದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಬಿಟ್ಟದ್ದು. ನಾನು ಈ ವಿಷಯಗಳ ಬಗ್ಗೆ ಎಂದಿಗೂ ಗಮನ ಹರಿಸಲಿಲ್ಲ. ನೀವು ಆ ಮೈಲಿಗಲ್ಲುಗಳ ಬಗ್ಗೆ ಯೋಚಿಸದಿದ್ದರೆ, ಅವು ತಾನಾಗಿಯೇ ಸಂಭವಿಸುತ್ತವೆ. ನಾನು ಶತಕ ಬಾರಿಸಿದರೆ, ಅದು ಅದ್ಭುತ, ಆದರೆ ಗೆಲ್ಲುವುದು ಮುಖ್ಯ. ನನಗೆ, ಆ ವಿಷಯಗಳು ಇನ್ನು ಮುಂದೆ ಮುಖ್ಯವಲ್ಲ ಎಂದಿದ್ದಾರೆ.

ಶತಕ ವಂಚಿತ ವಿರಾಟ್

ಪಾಕಿಸ್ತಾನ ವಿರುದ್ಧ ಅದ್ಭುತ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧವೂ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕೊಹ್ಲಿ ಕ್ಯಾಚಿತ್ತು ಔಟಾದರು. ಆದಾಗ್ಯೂ, ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್‌ನೊಂದಿಗೆ ಅನೇಕ ದಾಖಲೆಗಳನ್ನು ಮುರಿದರು. ಐಸಿಸಿ ನಾಕೌಟ್ ಪಂದ್ಯಗಳಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಹಾಗೆಯೇ ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ 24 ಬಾರಿ ಐವತ್ತು ಅಧಿಕ ರನ್​ಗಳನ್ನು ಗಳಿಸುವ ಮೂಲಕ ಸಚಿನ್ ಅವರ ವಿಶ್ವ ದಾಖಲೆಯನ್ನು ಮುರಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ