AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2025: ಸತತ ಆರು ದಿನ ಮದ್ಯ ಸೇವನೆ; ಇಂಗ್ಲೆಂಡ್‌ ಆಟಗಾರರ ವಿರುದ್ಧ ತನಿಖೆಗೆ ಆದೇಶ

Ashes 2025: The ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಹೀನಾಯ ಸೋಲು ಕಂಡಿದೆ. ಈ ನಡುವೆ ಆಂಗ್ಲ ಆಟಗಾರರು ಸತತ 6 ದಿನ ಮದ್ಯ ಸೇವನೆ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ತಂಡದ ನಿರ್ದೇಶಕ ರಾಬ್ ಕೀ ತನಿಖೆಗೆ ಆದೇಶಿಸಿದ್ದು, ಆಟಗಾರರ ಮದ್ಯಪಾನದ ಸಂಸ್ಕೃತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಇಂಗ್ಲೆಂಡ್ ಕ್ರಿಕೆಟ್‌ಗೆ ಮತ್ತೊಂದು ತಲೆನೋವಾಗಿದೆ.

Ashes 2025: ಸತತ ಆರು ದಿನ ಮದ್ಯ ಸೇವನೆ; ಇಂಗ್ಲೆಂಡ್‌ ಆಟಗಾರರ ವಿರುದ್ಧ ತನಿಖೆಗೆ ಆದೇಶ
England Team
ಪೃಥ್ವಿಶಂಕರ
|

Updated on:Dec 23, 2025 | 8:57 PM

Share

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (England vs Australia) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಆಶಸ್ (Ashes) ಸರಣಿ ಇದುವರೆಗೆ ಏಕಪಕ್ಷೀಯವಾಗಿ ನಡೆದಿದೆ. ನಡೆದಿರುವ 3 ಪಂದ್ಯಗಳಲ್ಲೂ ಆತಿಥೇಯ ಆಸ್ಟ್ರೇಲಿಯಾವೇ ಜಯದ ನಗೆ ಬೀರಿದೆ. ಇತ್ತ ಈ ಪ್ರವಾಸದಲ್ಲಾದರೂ ಆಸ್ಟ್ರೇಲಿಯಾವನ್ನು ಮಣಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್‌ ಸೋತು ಸುಣ್ಣವಾಗಿದೆ. ಈ ರೀತಿಯ ಅವಮಾನಕರ ಸೋಲಿನ ನಡುವೆಯೂ ಇಂಗ್ಲೆಂಡ್‌ ಆಟಗಾರರ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಕಾಂಗರೂಗಳ ನಾಡಲ್ಲಿ ಆಂಗ್ಲ ಆಟಗಾರರು ಸತತ 6 ದಿನ ಮದ್ಯ ಸೇವನೆ ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ತನಿಖೆಗೆ ಆದೇಶಿಸಿದೆ.

6 ದಿನಗಳ ಕಾಲ ಮದ್ಯ ಸೇವನೆ

ಗಬ್ಬಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸೋತ ನಂತರ ಇಂಗ್ಲೆಂಡ್ ತಂಡವು ಸತತ ಆರು ದಿನಗಳ ಕಾಲ ಮದ್ಯ ಸೇವಿಸಿದೆ ಎಂದು ವರದಿಯಾಗಿದೆ. ಈ 6 ದಿನಗಳಲ್ಲಿ ಮೊದಲ 4 ದಿನಗಳನ್ನು ನೂಸಾ ಎಂಬ ಸಣ್ಣ ಪಟ್ಟಣದಲ್ಲಿ ಕಳೆದಿದ್ದ ಇಂಗ್ಲೆಂಡ್‌ ತಂಡ, ಅಲ್ಲಿ ಪಾರ್ಟಿ ಮಾಡಿರುವುದಾಗಿ ವರದಿಯಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದಾಗಿ ಇಂಗ್ಲಿಷ್ ತಂಡದ ನಿರ್ದೇಶಕ ರಾಬ್ ಕೀ ಹೇಳಿದ್ದಾರೆ.

ಆಟಗಾರರ ಪರ ಬ್ಯಾಟ್ ಬೀಸಿದ ರಾಬ್ ಕೀ

ಆಟಗಾರರು ಮದ್ಯ ಸೇವಿಸಿರುವ ಆರೋಪದ ಬಗ್ಗೆ ಮಾತನಾಡಿರುವ ತಂಡದ ನಿರ್ದೇಶತಕ ರಾಬ್ ಕೀ, ‘ಆಟಗಾರರು ತಮ್ಮ ಮಿತಿಯೊಳಗೆ ಇರಬೇಕೆಂದು ತಾನು ಆಶಿಸುತ್ತೇನೆ. ಆದಾಗ್ಯೂ ತಂಡದ ಆಟಗಾರರು ನೂಸಾ ಪಟ್ಟಣಕ್ಕೆ ಹೋಗಿರಲಿಲ್ಲ. ಆದರೆ ನಮ್ಮ ಆಟಗಾರರು ಹೊರಗೆ ಹೋಗಿ ಅತಿಯಾಗಿ ಕುಡಿದಿದ್ದಾರೆಂದು ವರದಿಯಾಗಿರುವುದರಿಂದ ಈ ಬಗ್ಗೆ ಖಂಡಿತವಾಗಿಯೂ ತನಿಖೆ ನಡೆಸಲಾಗುವುದು. ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರು ಅತಿಯಾಗಿ ಕುಡಿಯುವುದು ಸೂಕ್ತವಲ್ಲ. ಆದ್ದರಿಂದ, ಈ ಆರೋಪದ ಬಗ್ಗೆ ತನಿಖೆ ಮಾಡದಿದ್ದರೆ ಅದು ತಪ್ಪಾಗಲಿದೆ.

ಕಳೆದ ಎರಡು ಮೂರು ದಿನಗಳಿಂದ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ನಿಜವಾಗಿದ್ದರೆ, ಅದು ಸ್ವೀಕಾರಾರ್ಹವಲ್ಲ. ನಾನು ಮದ್ಯಪಾನ ಮಾಡುವುದಿಲ್ಲ, ಆದರೆ ಕುಡಿಯುವ ಸಂಸ್ಕೃತಿ ಯಾರಿಗೂ ಸಹಾಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ಆಟಗಾರರು ಭೋಜನದ ಜೊತೆಗೆ ಒಂದು ಲೋಟ ವೈನ್ ಸೇವಿಸುವುದು ಸರಿ, ಆದರೆ ಅದಕ್ಕಿಂತ ಹೆಚ್ಚು ಕುಡಿಯುವುದು ಸರಿಯಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:36 pm, Tue, 23 December 25

ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​