Asia Cup 2022 Final: ರಾಜಪಕ್ಸೆ ಅಬ್ಬರದ ಅರ್ಧಶತಕ; ಪಾಕಿಸ್ತಾನಕ್ಕೆ 171 ರನ್ ಗುರಿ ನೀಡಿದ ಲಂಕಾ..!
Asia Cup 2022 Final: ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ತಂಡಕ್ಕೆ ಹೆಚ್ಚಿನ ರನ್‌ಗಳು ಭಾನುಕಾ ರಾಜಪಕ್ಸೆ ಅವರ ಬ್ಯಾಟ್‌ನಿಂದ ಬಂದವು.
ಏಷ್ಯಾಕಪ್ ಫೈನಲ್ (Asia Cup 2022 Final) ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿದೆ. ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ತಂಡಕ್ಕೆ ಹೆಚ್ಚಿನ ರನ್‌ಗಳು ಭಾನುಕಾ ರಾಜಪಕ್ಸೆ ಅವರ ಬ್ಯಾಟ್‌ನಿಂದ ಬಂದವು. ಅವರು 45 ಎಸೆತಗಳಲ್ಲಿ 71 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳಿವೆ. ರಾಜಪಕ್ಸೆ 157 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿ ಅಜೇಯರಾಗಿ ಉಳಿದರು.
ಇದೇ ವೇಳೆ ಹಸರಂಗ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಗರಿಷ್ಠ 3 ವಿಕೆಟ್ ಪಡೆದರು. ಅದೇ ವೇಳೆ ಶಾದಾಬ್ ಖಾನ್, ನಸೀಮ್ ಶಾ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ನಸೀಮ್ ಶಾ ಶ್ರೀಲಂಕಾಕ್ಕೆ ಮೊದಲ ಹೊಡೆತದ ರುಚಿ ನೋಡಿದರು. ಮೊದಲ ಓವರ್ನಲ್ಲೇ ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮೆಂಡಿಸ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಬಳಿಕ ಹಾರಿಸ್ ರೌಫ್ ಎರಡನೇ ವಿಕೆಟ್ ಪಡೆದರು. ಪಾಥುಮ್ ನಿಸ್ಸಾಂಕ 8 ರನ್ ಗಳಿಸಿ ಬಾಬರ್ ಅಜಮ್ಗೆ ಕ್ಯಾಚ್ ನೀಡಿದರು. ಮೂರನೇ ವಿಕೆಟ್ ಪಡೆದ ರೌಫ್, 1 ರನ್ ಗಳಿಸಿದ್ದ, ದನುಷ್ಕಾ ಗುಣತಿಲಿಕಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಶ್ರೀಲಂಕಾ ಪರ ವನಿಂದು ಹಸರಂಗಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರ ಬ್ಯಾಟಿಂಗ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿದ್ದರೆ, ಅವರ ಸ್ಟ್ರೈಕ್ ರೇಟ್ 171.42 ಆಗಿತ್ತು. ಹಸರಂಗ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಇಫ್ತಿಕರ್ ಅಹ್ಮದ್ ನಾಲ್ಕನೇ ವಿಕೆಟ್ ರೂಪದಲ್ಲಿ ಧನಂಜಯ್ ಡಿಸಿಲ್ವಾ ಅವರನ್ನು ಪೆವಿಲಿಯನ್ಗೆ ಸೇರಿಸಿದರು. ಧನಂಜಯ್ 21 ಎಸೆತಗಳಲ್ಲಿ 28 ರನ್ ಗಳಿಸಿದರು. ಶಾದಾಬ್ ಖಾನ್ ಶ್ರೀಲಂಕಾಕ್ಕೆ ಐದನೇ ಹೊಡೆತ ನೀಡಿದರು. ಅವರು 3 ಎಸೆತಗಳಲ್ಲಿ 2 ರನ್ ಗಳಿಸಿದ ಶ್ರೀಲಂಕಾ ನಾಯಕ ದಸುನ್ ಶನಕಾ ಅವರನ್ನು ಬೌಲ್ಡ್ ಮಾಡಿದರು.
ಪವರ್ ಪ್ಲೇನಲ್ಲಿ ಪಾಕಿಸ್ತಾನದ ಬೌಲರ್‌ಗಳ ಪ್ರಾಬಲ್ಯ
ಪಾಕಿಸ್ತಾನದ ಬೌಲರ್‌ಗಳು ಇನಿಂಗ್ಸ್‌ನಲ್ಲಿ ಶ್ರೀಲಂಕಾದ ಪವರ್ ಪ್ಲೇ ಮೇಲೆ ಪ್ರಾಬಲ್ಯ ಸಾಧಿಸಿದರು. 6 ಓವರ್‌ಗಳ ಆಟದಲ್ಲಿ ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ಶ್ರೀಲಂಕಾದ ಮೂರು ವಿಕೆಟ್‌ಗಳನ್ನು ಪಡೆದರು. ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು 36 ಎಸೆತಗಳಲ್ಲಿ 42 ರನ್ ಗಳಿಸಿದರು. ಇದರಲ್ಲಿ ಹಾರಿಸ್ ರವೂಫ್ ಎರಡು ಮತ್ತು ನಸೀಮ್ ಶಾ ಒಂದು ವಿಕೆಟ್ ಪಡೆದರು.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸನೇನ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ
Published On - 9:37 pm, Sun, 11 September 22