4 ಸಾವಿರವೂ ಇಲ್ಲ; ನೇಪಾಳ ಕ್ರಿಕೆಟಿಗರು ಪಡೆಯುವ ಸಂಬಳ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ..!
Asia Cup 2023: ಭಾರತ ಅಥವಾ ಇತರ ದೇಶಗಳಂತೆ, ನೇಪಾಳ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರೊಂದಿಗೆ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಕ್ರಿಕೆಟಿಗರನ್ನು 3 ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಆಟಗಾರನಿಗೂ ಸಂಭಾವನೆ ನೀಡಲಾಗುತ್ತದೆ. ಆದರೆ ಸಂಭಾವನೆಯ ಗಾತ್ರ ಕೇಳಿದರೆ ಎಲ್ಲರಿಗೂ ಶಾಖ್ ಆಗುವುದಂತೂ ಖಚಿತ.
ನೇಪಾಳ ಕ್ರಿಕೆಟ್ ತಂಡ (Nepal Cricket team) ಇದೇ ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಆಡುತ್ತಿದೆ . ಆದರೆ, ನೇಪಾಳ ತಂಡಕ್ಕೆ ಏಷ್ಯಾಕಪ್‌ನಲ್ಲಿ ಶುಭಾರಂಭ ದೊರಕಿಲ್ಲ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಪಾಕ್ ತಂಡವನ್ನು ಎದುರಿಸಿದ ಕ್ರಿಕೆಟ್ ಶಿಶು ನೇಪಾಳ (Pakistan vs Nepal) 238 ರನ್ಗಳ ಹೀನಾಯ ಸೋಲು ಅನುಭವಿಸಿದೆ. ನೇಪಾಳದ ಈ ಸೋಲನ್ನು ಈ ಹಿಂದೆಯೇ ನಿರೀಕ್ಷಿಸಿಲಾಗಿತ್ತು. ಏಕೆಂದರೆ ಕ್ರಿಕೆಟ್ ಲೋಕದಲ್ಲಿ ನೇಪಾಳ ಈಗಿನ್ನು ಅಂಬೆಗಾಲಿಡುತ್ತಿದೆ. ಹೀಗಾಗಿ ತನ್ನ ಪ್ರಯತ್ನದಿಂದ ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ನೇಪಾಳ ಕ್ರಿಕೆಟ್ಗೆ ಈ ರೀತಿಯ ಸೋಲು ನಿರೀಕ್ಷಿತವೇ. ಆದರೆ ನಾವೀಗ ಹೇಳಹೊರಟಿರುವುದು ನೇಪಾಳ ತಂಡವನ್ನು ಪ್ರತಿನಿಧಿಸುತ್ತಿರುವ ತಂಡದ ಆಟಗಾರರ ಬದುಕಿನ ಬಗ್ಗೆ. ಒಂದು ಪಂದ್ಯವನ್ನಾಡುವುದಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆಯುವ ಟೀಂ ಇಂಡಿಯಾ ಕ್ರಿಕೆಟಿಗರ ಮುಂದೆ ನೇಪಾಳ ಕ್ರಿಕೆಟಿಗರು ಪಡೆಯುವ ಸಂಭಾವನೆ ನಗಣ್ಯಕ್ಕೆ ಸಮವಾಗಿದೆ.
ಭಾರತ ಅಥವಾ ಇತರ ದೇಶಗಳಂತೆ, ನೇಪಾಳ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರೊಂದಿಗೆ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಕ್ರಿಕೆಟಿಗರನ್ನು 3 ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಆಟಗಾರನಿಗೂ ಸಂಭಾವನೆ ನೀಡಲಾಗುತ್ತದೆ. ಆದರೆ ಸಂಭಾವನೆಯ ಗಾತ್ರ ಕೇಳಿದರೆ ಎಲ್ಲರಿಗೂ ಶಾಖ್ ಆಗುವುದಂತೂ ಖಚಿತ.
ನೇಪಾಳದ ಕ್ರಿಕೆಟಿಗರ ಸಂಭಾವನೆ ಎಷ್ಟು ಗೊತ್ತಾ?
ಕೇಂದ್ರ ಒಪ್ಪಂದದ ಅಡಿಯಲ್ಲಿ ನೇಪಾಳದ ಪುರುಷ ಕ್ರಿಕೆಟಿಗರನ್ನು 3 ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಎ ಗ್ರೇಡ್ ಕ್ರಿಕೆಟಿಗರು ತಿಂಗಳಿಗೆ 60 ಸಾವಿರ ನೇಪಾಳಿಸ್ ರೂಪಿ ಸಂಬಳ ಪಡೆಯುತ್ತಾರೆ. ಬಿ ದರ್ಜೆಯ ಕ್ರಿಕೆಟಿಗರಿಗೆ 50,000 ಮತ್ತು ಸಿ ದರ್ಜೆ ಕ್ರಿಕೆಟಿಗರಿಗೆ 40,000 ನೇಪಾಳಿಸ್ ರೂಪಿ ಸಂಬಳ ಪಡೆಯುತ್ತಾರೆ. ಆದರೆ ಇಲ್ಲಿರುವ ಅಚ್ಚರಿಯ ಸಂಗತಿಯೆಂದರೆ, ಈ ನೇಪಾಳಿ ಕ್ರಿಕೆಟಿಗರು ಪಡೆಯುವ ಸಂಭಾವನೆಯನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ನೋಡಿದಾಗ ತಿಳಿಯುವುದೇನೆಂದರೆ, ಭಾರತದಲ್ಲಿ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ಯೂನ್ ಇವರಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ ಎಂಬುದು.
ನೇಪಾಳಿ ಕ್ರಿಕೆಟಿಗರ ಸಂಬಳ ಪ್ಯೂನ್‌ಗಿಂತ ಕಡಿಮೆ!
ನೇಪಾಳದಲ್ಲಿ 60000 ರೂಪಾಯಿ ಸಂಬಳ ಪಡೆಯುವ ಕ್ರಿಕೆಟಿಗರ ಬೆಲೆ ಭಾರತದಲ್ಲಿ ಕೇವಲ 37719 ರೂಪಾಯಿಗಳು. ಅದೇ ರೀತಿ ನೇಪಾಳದ 50000 ರೂಪಾಯಿ ಮೌಲ್ಯ ಕೇವಲ 31412 ರೂಪಾಯಿ. ಹಾಗೆಯೇ 40000 ನೇಪಾಳಿಸ್ ರೂಪಿ ಸಂಬಳ ಪಡೆಯುವ ಸಿ ದರ್ಜೆ ಕ್ರಿಕೆಟಿಗರ ಸಂಬಳ ಭಾರತೀಯ ರೂಪಾಯಿಗಳಲ್ಲಿ ಕೇವಲ 25 ಸಾವಿರ ಮಾತ್ರ. ಆದರೆ ಭಾರತದ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ಯೂನ್ ಒಬ್ಬರ ವೇತನ ನೇಪಾಳದ ಕ್ರಿಕೆಟಿಗ ತಿಂಗಳಿಗೆ ಪಡೆಯುವ ಸಂಬಳಕ್ಕಿಂತ ಹೆಚ್ಚು. ಏಕೆಂದರೆ ಇಲ್ಲಿ ಕನಿಷ್ಠ ಒಬ್ಬ ಪ್ಯೂನ್ ವಾರ್ಷಿಕ ಪ್ಯಾಕೇಜ್ 5.5 ಲಕ್ಷ ರೂ. ಎಂದು ಹೇಳಲಾಗುತ್ತದೆ.
ಒಂದು ಏಕದಿನ ಪಂದ್ಯಕ್ಕೆ ಪಡೆಯುವ ಸಂಬಳವೆಷ್ಟು?
ಕೇಂದ್ರ ಒಪ್ಪಂದದ ಅಡಿಯಲ್ಲಿ ಮಾಸಿಕ ವೇತನದ ಹೊರತಾಗಿ, ನೇಪಾಳಿ ಕ್ರಿಕೆಟಿಗರಿಗೆ ಆದಾಯದ ಮತ್ತೊಂದು ಮೂಲವೆಂದರೆ ಅವರು ಪ್ರತಿ ಪಂದ್ಯಕ್ಕೆ ಪಡೆಯುವ ಶುಲ್ಕ. ಒಂದು ಏಕದಿನ ಪಂದ್ಯವನ್ನಾಡಲು ನೇಪಾಳಿ ಕ್ರಿಕೆಟಿಗರು 10,000 ನೇಪಾಳಿಸ್ ರೂಪಿ ಮತ್ತು ಟಿ20 ಪಂದ್ಯವನ್ನು ಆಡಲು 5000 ನೇಪಾಳಿಸ್ ರೂಪಿಗಳನ್ನು ಪಡೆಯುತ್ತಾರೆ. ಭಾರತೀಯ ಕರೆನ್ಸಿ ಪ್ರಕಾರ, ಅವರು ಒಂದು ಏಕದಿನ ಪಂದ್ಯಕ್ಕೆ 6286 ರೂ ಮತ್ತು ಒಂದು ಟಿ20 ಪಂದ್ಯಕ್ಕೆ 3143 ರೂಗಳನ್ನು ಪಂದ್ಯ ಶುಲ್ಕವಾಗಿ ಪಡೆಯುತ್ತಾರೆ.
ಇದೆಲ್ಲದರ ಹೊರತಾಗಿಯೂ ನೇಪಾಳಿ ಕ್ರಿಕೆಟಿಗರಲ್ಲಿ ಬಲವಾದ ಇಚ್ಛಾಶಕ್ತಿ ಇದೆ. ಕ್ರಿಕೆಟ್ ಲೋಕದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದೆ. ಹೀಗಾಗಿಯೇ ನೇಪಾಳಿ ಕ್ರಿಕೆಟಿಗರು ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಆಡುತ್ತಿದ್ದಾರೆ. ಮುಂದೊಂದು ದಿನ ಇದೇ ನೇಪಾಳ ತಂಡ ಟೀಂ ಇಂಡಿಯಾವನ್ನು ಮಣಿಸುವಷ್ಟು ಬಲಿಷ್ಠವಾಗಿ ಬೆಳೆದರು ಬೆಳೆಯಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 am, Thu, 31 August 23