Asia Cup 2023: ಭಾರತ- ಪಾಕ್ ಪಂದ್ಯ ನಡೆಯುವುದು ಅನುಮಾನ! ಉಳಿದ ಪಂದ್ಯಗಳಿಗೂ ಮಳೆ ಕಾಟ

IND vs PAK, Pallekele Stadium Weather Forecast: ವೆದರ್ ಡಾಟ್ ಕಾಮ್, ಪ್ರಕಾರ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಮಳೆಯ ಭೀತಿಯಿದೆ. ಈ ಪಂದ್ಯದ ವೇಳೆ ಶೇ.93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವೆಬ್‌ಸೈಟ್ ಹಾಗೂ ಹಲವು ಹವಾಮಾನ ವರದಿಗಳು ಹೇಳಿವೆ.

Asia Cup 2023: ಭಾರತ- ಪಾಕ್ ಪಂದ್ಯ ನಡೆಯುವುದು ಅನುಮಾನ! ಉಳಿದ ಪಂದ್ಯಗಳಿಗೂ ಮಳೆ ಕಾಟ
ಭಾರತ- ಪಾಕಿಸ್ತಾನ
Follow us
ಪೃಥ್ವಿಶಂಕರ
|

Updated on:Aug 31, 2023 | 10:02 AM

2023ರ ಏಷ್ಯಾಕಪ್‌ಗಾಗಿ (Asia Cup 2023) ಟೀಂ ಇಂಡಿಯಾ ಶ್ರೀಲಂಕಾ ತಲುಪಿದೆ. ನಿನ್ನೆ ಬೆಳಿಗ್ಗೆ ಅಂದರೆ ಆಗಸ್ಟ್ 30 ರಂದು ಬೆಂಗಳೂರಿನಿಂದ ಟೀಂ ಇಂಡಿಯಾ (Team India) ಆಟಗಾರರು ಕೊಲಂಬೊಗೆ ವಿಮಾನ ಹತ್ತಿದ್ದರು. ಆ ಬಳಿಕ ಅಲ್ಲಿಂದ ಕ್ಯಾಂಡಿಗೆ ತೆರಳಿದ್ದಾರೆ. ಇದೇ ಕ್ಯಾಂಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ (India vs Pakistan) ನಡುವಿನ ಪಂದ್ಯ ನಡೆಯಲ್ಲಿದೆ. ಇಬ್ಬರು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್ ಕದನ ಸೆಪ್ಟೆಂಬರ್ 2 ರಂದು ನಿಗದಿಯಾಗಿದೆ. ತನ್ನ ಆರಂಭಿಕ ಪಂದ್ಯವನ್ನು ತವರು ನೆಲದಲ್ಲಿ ಆಡಿ ಮುಗಿಸಿರುವ ಪಾಕಿಸ್ತಾನ ಭರ್ಜರಿ ಜಯದೊಂದಿಗೆ ಲಂಕಾ ನಾಡಿಗೆ ಕಾಲಿಡುತ್ತಿದೆ. ಆದರೆ, ಈ ಉಭಯ ತಂಡಗಳ ನಡುವಿನ ಕ್ರಿಕೆಟ್ ಕದನ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿನ (Pallekele Stadium Weather Forecast) ಹವಾಮಾನ.

ಶೇ.93ರಷ್ಟು ಮಳೆಯಾಗುವ ಸಾಧ್ಯತೆ

ವೆದರ್ ಡಾಟ್ ಕಾಮ್ ವರದಿ ಪ್ರಕಾರ, ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಮಳೆಯ ಭೀತಿಯಿದೆ. ಈ ಪಂದ್ಯದ ವೇಳೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವೆಬ್‌ಸೈಟ್ ಹಾಗೂ ಹಲವು ಹವಾಮಾನ ವರದಿಗಳು ಹೇಳಿವೆ. ಇದರ ಹೊರತಾಗಿ, ಆರ್ದ್ರತೆಯು ಸುಮಾರು 85 ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದ್ದು, ತಾಪಮಾನವು ಸುಮಾರು 27 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ವರದಿಯಾಗಿದೆ.

image-lluptwd5

ಉಳಿದ ಪಂದ್ಯಗಳಿಗೂ ಮಳೆ ಕಾಟ

ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ವಿಷಯವೆನೆಂದರೆ.. ಸೆಪ್ಟೆಂಬರ್ 2 ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲದೆ, ಇಂದು ಅಂದರೆ ಆಗಸ್ಟ್ 31 ರಂದು ಕ್ಯಾಂಡಿಯಲ್ಲಿ ನಡೆಯಲ್ಲಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೂ (ಶೇ 86 ರಷ್ಟು ಮಳೆಯಾಗುವ ಸಾಧ್ಯತೆ) ಮತ್ತು ನಂತರ ಸೆಪ್ಟೆಂಬರ್‌ 4 ರಂದು ನಡೆಯುವ ಭಾರತ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ (ಶೇ. 76 ಮಳೆಯಾಗುವ ಸಾಧ್ಯತೆ) ಮಳೆ ಅಡ್ಡಿಪಡಿಸಬಹುದೆಂಬ ಭೀತಿ ಎದುರಾಗಿದೆ.

ಭಾರತಕ್ಕೆ ಮೊದಲ ಪಂದ್ಯ

ಗಮನಾರ್ಹವಾಗಿ, ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ನಡೆಯಲ್ಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯವಾಗಿದೆ. ಆದರೆ ಪಾಕಿಸ್ತಾನಕ್ಕೆ ಇದು ಎರಡನೇ ಪಂದ್ಯವಾಗಿರಲಿದೆ. ತನ್ನ ಮೊದಲ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಿದ್ದ ಬಾಬರ್ ಪಡೆ 238 ರನ್​ಗಳ ದಾಖಲೆ ಗೆಲುವು ಸಾಧಿಸಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ನೇಪಾಳ ವಿರುದ್ಧ ಸೆಪ್ಟೆಂಬರ್ 4 ರಂದು ಗುಂಪು ಹಂತದಲ್ಲಿ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 am, Thu, 31 August 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ