AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Asia Cup 2025 Schedule: ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಸುತ್ತಿನಲ್ಲಿ 12 ಪಂದ್ಯಗಳು ನಡೆದರೆ ದ್ವಿತೀಯ ಸುತ್ತಿನಲ್ಲಿ 6 ಮ್ಯಾಚ್​ಗಳು ಜರುಗಲಿದೆ. ಇದಾದ ಬಳಿಕ ಸೆಪ್ಟೆಂಬರ್ 28 ರಂದು ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Asia Cup 2025: ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Asia Cup 2025
ಝಾಹಿರ್ ಯೂಸುಫ್
|

Updated on:Sep 07, 2025 | 2:06 PM

Share

ಏಷ್ಯಾಕಪ್ ಟಿ20 ಟೂರ್ನಿಯು ಮಂಗಳವಾರದಿಂದ (ಸೆಪ್ಟೆಂಬರ್ 9) ಶುರುವಾಗಲಿದೆ. 8 ತಂಡಗಳ ನಡುವಣ ಈ  ಟೂರ್ನಿಯು  ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್ನಲ್ಲಿರುವ ತಂಡಗಳು ತಲಾ ಒಂದೊಂದು ಬಾರಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ಸೂಪರ್-4 ಹಂತದ ಮ್ಯಾಚ್​ಗಳು ಶುರುವಾಗಲಿದೆ.

ಇತ್ತ ಮೊದಲ ಸುತ್ತಿಗಾಗಿ 8 ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಈ ಗ್ರೂಪ್​ಗಳಲ್ಲಿರುವ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

  • ಗ್ರೂಪ್ A
  • ಭಾರತ,
  • ಪಾಕಿಸ್ತಾನ್
  • ಒಮಾನ್
  • ಯುಎಇ

ಇದನ್ನೂ ಓದಿ: Asia Cup 2025: ಏಷ್ಯಾಕಪ್​ನಲ್ಲಿ ಕಣಕ್ಕಿಳಿಯುವ 8 ತಂಡಗಳ ಆಟಗಾರ ಪಟ್ಟಿ ಇಲ್ಲಿದೆ

  • ಗ್ರೂಪ್ B
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಅಫ್ಘಾನಿಸ್ತಾನ್
  • ಹಾಂಗ್​ ಕಾಂಗ್

ಇಲ್ಲಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ತಂಡಗಳು ಇವೆ. ಹೀಗಾಗಿ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಯುಎಇ ಹಾಗೂ ಒಮಾನ್ ತಂಡಗಳನ್ನು ಮಾತ್ರ ಎದುರಿಸಲಿದೆ. ಇಲ್ಲಿ ಎರಡೂ ಗ್ರೂಪ್​ಗಳಿಗೂ ವಿಭಿನ್ನ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೂಪರ್-4 ಹಂತಕ್ಕೆ ಅರ್ಹತೆ ಪಡೆಯಲಿದೆ.

ಸೂಪರ್-4 ರೌಂಡ್:

ಮೊದಲ ಸುತ್ತಿನ ಎರಡು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ 4 ಟೀಮ್​ಗಳು ಮಾತ್ರ ದ್ಚಿತೀಯ ಸುತ್ತಿಗೆ ಪ್ರವೇಶಿಸುತ್ತದೆ. ಈ ಹಂತದಲ್ಲಿ ಯಾವುದೇ ಗ್ರೂಪ್ಗಳಿರುವುದಿಲ್ಲ. ಅಂದರೆ 4 ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ.

ದ್ವಿತೀಯ ಸುತ್ತಿನ ಬಳಿಕ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಅಂದರೆ ಸೂಪರ್-4 ಹಂತದಲ್ಲಿ ಒಂದು ತಂಡವು ಮೂರು ಮ್ಯಾಚ್​ಗಳನ್ನು ಆಡಲಿದೆ. ಇಲ್ಲಿ ಕೂಡ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್​ ಆಡಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಏಷ್ಯಾಕಪ್ ವೇಳಾಪಟ್ಟಿ:

ಗ್ರೂಪ್- A ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 10 ಭಾರತ vs ಯುಎಇ ದುಬೈ ರಾತ್ರಿ 8:00
ಸೆಪ್ಟೆಂಬರ್ 12 ಪಾಕಿಸ್ತಾನ್ vs ಒಮಾನ್ ಅಬುಧಾಬಿ ರಾತ್ರಿ 8:00
ಸೆಪ್ಟೆಂಬರ್ 14 ಭಾರತ vs ಪಾಕಿಸ್ತಾನ್ ದುಬೈ ರಾತ್ರಿ 8:00
15ನೇ ಸೆಪ್ಟೆಂಬರ್ ಯುಎಇ vs ಒಮಾನ್ ಅಬುಧಾಬಿ ರಾತ್ರಿ 8:00
17ನೇ ಸೆಪ್ಟೆಂಬರ್ ಪಾಕಿಸ್ತಾನ್ vs ಯುಎಇ ದುಬೈ ರಾತ್ರಿ 8:00
19ನೇ ಸೆಪ್ಟೆಂಬರ್ ಭಾರತ vs ಒಮಾನ್ ಅಬುಧಾಬಿ ರಾತ್ರಿ 8:00

ಗ್ರೂಪ್-B ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 9 ಅಫ್ಘಾನಿಸ್ತಾನ್ vs ಹಾಂಗ್ ಕಾಂಗ್ ಅಬುಧಾಬಿ ರಾತ್ರಿ 8:00
ಸೆಪ್ಟೆಂಬರ್ 11 ಬಾಂಗ್ಲಾದೇಶ್ vs ಹಾಂಗ್ ಕಾಂಗ್ ದುಬೈ ರಾತ್ರಿ 8:00
ಸೆಪ್ಟೆಂಬರ್ 13 ಶ್ರೀಲಂಕಾ vs ಬಾಂಗ್ಲಾದೇಶ್ ಅಬುಧಾಬಿ ರಾತ್ರಿ 8:00
15ನೇ ಸೆಪ್ಟೆಂಬರ್ ಶ್ರೀಲಂಕಾ vs ಹಾಂಗ್ ಕಾಂಗ್ ದುಬೈ ರಾತ್ರಿ 8:00
ಸೆಪ್ಟೆಂಬರ್ 16 ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ ಅಬುಧಾಬಿ ರಾತ್ರಿ 8:00
18ನೇ ಸೆಪ್ಟೆಂಬರ್ ಶ್ರೀಲಂಕಾ vs ಅಫ್ಘಾನಿಸ್ತಾನ್ ದುಬೈ ರಾತ್ರಿ 8:00

ಸೂಪರ್-4 ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 20 ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ರಾತ್ರಿ 8:00
ಸೆಪ್ಟೆಂಬರ್ 21 ಗ್ರೂಪ್ A ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ರಾತ್ರಿ 8:00
23ನೇ ಸೆಪ್ಟೆಂಬರ್ ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 2 ದುಬೈ ರಾತ್ರಿ 8:00
24ನೇ ಸೆಪ್ಟೆಂಬರ್ ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ರಾತ್ರಿ 8:00
25ನೇ ಸೆಪ್ಟೆಂಬರ್ ಗ್ರೂಪ್ A ಕ್ವಾಲಿಫೈಯರ್ 2 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ರಾತ್ರಿ 8:00
ಸೆಪ್ಟೆಂಬರ್ 26 ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 1 ದುಬೈ ರಾತ್ರಿ 8:00
ಸೆಪ್ಟೆಂಬರ್ 28 ಫೈನಲ್ ದುಬೈ ರಾತ್ರಿ 8:00

Published On - 2:04 pm, Sun, 7 September 25

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ