- Kannada News Photo gallery Cricket photos Hardik Pandya's Watch: Costs More Than Pakistan's Entire Asia Cup Team's Salary!
ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಬೆಲೆ ಇಡೀ ಪಾಕ್ ತಂಡದ ವಾರ್ಷಿಕ ವೇತನಕ್ಕಿಂತ ಹೆಚ್ಚು..!
Hardik Pandya watch: ಏಷ್ಯಾಕಪ್ ಅಭ್ಯಾಸದ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ವಾಸ್ತವವಾಗಿ ಹಾರ್ದಿಕ್ ರಿಚರ್ಡ್ ಮಿಲ್ಲೆ RM 27-04 ವಾಚ್ ಧರಿಸಿದ್ದು ಅದರ ಬೆಲೆ 20 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ಆಶ್ಚರ್ಯಕರವಾಗಿ, ಏಷ್ಯಾಕಪ್‌ಗೆ ಆಯ್ಕೆಯಾದ 17 ಪಾಕಿಸ್ತಾನಿ ಆಟಗಾರರ ಸಂಯುಕ್ತ ವಾರ್ಷಿಕ ವೇತನ (19.34 ಕೋಟಿ ರೂಪಾಯಿ) ಗಿಂತ ಹೆಚ್ಚು.
Updated on: Sep 07, 2025 | 5:09 PM

ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಆರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಈಗಾಗಲೇ ದುಬೈನಲ್ಲಿ ಅಭ್ಯಾಸ ಆರಂಭಿಸಿದೆ. ಈ ಅಭ್ಯಾಸದ ಸಮಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈಗಡಿಯಾರ ಚರ್ಚೆಯ ವಿಷಯವಾಗಿದೆ. ಪಾಂಡ್ಯ ಅವರ ವಾಚ್ ಸುದ್ದಿಯಲ್ಲಿರಲು ದೊಡ್ಡ ಕಾರಣವೆಂದರೆ ಅದರ ಬೆಲೆ.

ಹಾರ್ದಿಕ್ ಧರಿಸಿದ ವಾಚ್ ಬೆಲೆ ಎಷ್ಟು ದುಬಾರಿಯೆಂದರೆ, ಏಷ್ಯಾಕಪ್‌ಗೆ ಆಯ್ಕೆಯಾದ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೂ ಅದು ಇನ್ನೂ ಕಡಿಮೆಯಾಗುತ್ತದೆ. ವಾಸ್ತವವಾಗಿ ಅಭ್ಯಾಸದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲ್ಲೆ RM 27-04 ಕೈಗಡಿಯಾರವನ್ನು ಧರಿಸಿದ್ದರು. ವರದಿಯ ಪ್ರಕಾರ ಅದರ ಮಾರುಕಟ್ಟೆ ಬೆಲೆ 20 ಕೋಟಿ ರೂ. ಹಾಗಿದ್ದರೆ ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಪಾಕಿಸ್ತಾನದ 17 ಆಟಗಾರರ ವೇತನ ಎಷ್ಟು ಎಂಬುದನ್ನು ನೋಡುವುದಾದರೆ..

ಏಷ್ಯಾಕಪ್‌ಗಾಗಿ ಪಾಕಿಸ್ತಾನ ಆಯ್ಕೆ ಮಾಡಿದ 17 ಆಟಗಾರರಲ್ಲಿ 7 ಮಂದಿ ಬಿ ಗ್ರೇಡ್‌ನಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಬ್ರಾರ್ ಅಹ್ಮದ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಸ್ಯಾಮ್ ಅಯೂಬ್, ಸಲ್ಮಾನ್ ಅಘಾ ಮತ್ತು ಶಾಹೀನ್ ಅಫ್ರಿದಿ ಅವರ ಹೆಸರುಗಳಿವೆ. ಅವರಲ್ಲಿ ಪ್ರತಿಯೊಬ್ಬರ ವಾರ್ಷಿಕ ವೇತನ ಭಾರತೀಯ ಕರೆನ್ಸಿಯಲ್ಲಿ 1 ಕೋಟಿ 69 ಲಕ್ಷ 2 ಸಾವಿರ 540 ರೂ. ಈಗ ಈ ಅರ್ಥದಲ್ಲಿ, ಏಳು ಆಟಗಾರರ ಒಟ್ಟು ವಾರ್ಷಿಕ ವೇತನ 11 ಕೋಟಿ 83 ಲಕ್ಷ 17 ಸಾವಿರ ಏಳುನೂರ ಎಂಬತ್ತು ರೂ.

ಹಾಗೆಯೇ ಪಾಕಿಸ್ತಾನ ತಂಡದಲ್ಲಿರುವ 5 ಆಟಗಾರರು ಸಿ ದರ್ಜೆಗೆ ಸೇರಿದ್ದಾರೆ, ಅವರಲ್ಲಿ ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್ ಮತ್ತು ಶಾಹಿಬ್ಜಾದಾ ಫರ್ಹಾನ್ ಸೇರಿದ್ದಾರೆ. ಅವರಲ್ಲಿ ಪ್ರತಿಯೊಬ್ಬರ ವಾರ್ಷಿಕ ವೇತನ ಭಾರತೀಯ ಕರೆನ್ಸಿಯಲ್ಲಿ 93 ಲಕ್ಷ, 90 ಸಾವಿರ, 300 ರೂ. ಅಂದರೆ ಈ ಐದು ಆಟಗಾರರ ಒಟ್ಟು ಮೊತ್ತ 4 ಕೋಟಿ, 69 ಲಕ್ಷ, 51 ಸಾವಿರ, 500 ರೂ.

ಅದೇ ರೀತಿ, ಉಳಿದ 5 ಆಟಗಾರರು ಡಿ ಗ್ರೇಡ್‌ಗೆ ಸೇರಿದ್ದು, ಅವರು ಭಾರತೀಯ ಕರೆನ್ಸಿಯಲ್ಲಿ ವಾರ್ಷಿಕವಾಗಿ 56 ಲಕ್ಷ, 34 ಸಾವಿರ, 180 ರೂ. ಪಡೆಯುತ್ತಾರೆ. ಈ ಐದು ಆಟಗಾರರ ಒಟ್ಟು ವಾರ್ಷಿಕ ವೇತನ 2 ಕೋಟಿ, 81 ಲಕ್ಷ, 70 ಸಾವಿರ, 900 ರೂ.

ಈಗ ಏಷ್ಯಾಕಪ್‌ಗೆ ಆಯ್ಕೆಯಾದ ಎಲ್ಲಾ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೆ, ಆ ಮೊತ್ತವು ಭಾರತೀಯ ಕರೆನ್ಸಿಯಲ್ಲಿ 19.34 ಕೋಟಿ ರೂ. ಆಗುತ್ತದೆ. ಈ ಮೊತ್ತವು ಹಾರ್ದಿಕ್ ಪಾಂಡ್ಯ ಅವರ ಕೈಗಡಿಯಾರದ ಬೆಲೆಗಿಂತ ಕಡಿಮೆ ಇದೆ. ಮೇಲೆ ಹೇಳಿದಂತೆ ಹಾರ್ದಿಕ್ ಅವರ ವಾಚ್ನ ಮಾರುಕಟ್ಟೆ ಬೆಲೆ 20 ಕೋಟಿ ರೂ. ಆಗಿದೆ.
