AUS vs SL: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಲಂಕಾ; 1 ವರ್ಷ ನಿಷೇಧಕ್ಕೊಳಗಾಗಿದ್ದವ ಪಂದ್ಯ ಗೆಲ್ಲಿಸಿದ

AUS vs SL: ಆರಂಭಿಕರಾಗಿ ಬಂದ ಮೆಂಡಿಸ್ ಕಠಿಣ ಪರಿಸ್ಥಿತಿಯಲ್ಲಿ ತಾಳ್ಮೆಯ ಇನಿಂಗ್ಸ್ ಆಡಿ ಉತ್ತಮ ಅರ್ಧಶತಕ ಗಳಿಸಿದರು. ಐದನೇ ವಿಕೆಟ್‌ಗೆ ನಾಯಕ ದಸುನ್ ಶನಕ ಅವರೊಂದಿಗೆ 83 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

AUS vs SL: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಲಂಕಾ; 1 ವರ್ಷ ನಿಷೇಧಕ್ಕೊಳಗಾಗಿದ್ದವ ಪಂದ್ಯ ಗೆಲ್ಲಿಸಿದ
ಕುಸಾಲ್ ಮೆಂಡಿಸ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 20, 2022 | 5:28 PM

ಸತತ ನಾಲ್ಕು ಸೋಲುಗಳ ನಂತರ ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket Team)ಅಂತಿಮವಾಗಿ ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಗೆಲುವು ಸಾಧಿಸಿದೆ. ಐದು ಪಂದ್ಯಗಳ T20 ಸರಣಿಯನ್ನು ಕಳೆದುಕೊಂಡ ನಂತರ, ಶ್ರೀಲಂಕಾ ಈ ರೋಚಕ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು (Australia vs Sri Lanka) ಸೋಲಿಸಿತು. ನಾಲ್ಕನೇ ಪಂದ್ಯದಂತೆ ಮತ್ತೊಮ್ಮೆ ಹಲವು ಬದಲಾವಣೆಗಳೊಂದಿಗೆ ಆಸ್ಟ್ರೇಲಿಯ ತಂಡ ಶ್ರೀಲಂಕಾಗೆ ಗೆಲ್ಲಲು 155 ರನ್‌ಗಳ ಗುರಿ ನೀಡಿತ್ತು, ಅದನ್ನು ಶ್ರೀಲಂಕಾ 20ನೇ ಓವರ್‌ನ ಐದನೇ ಎಸೆತದಲ್ಲಿ ಸಾಧಿಸಿತು. ಶ್ರೀಲಂಕಾದ ಈ ಗೆಲುವಿನ ತಾರೆಯಾಗಿದ್ದ ಆಟಗಾರ, ಸುಮಾರು ಒಂದು ತಿಂಗಳ ಹಿಂದಿನವರೆಗೂ ತಂಡದ ಭಾಗವಾಗಿರಲಿಲ್ಲ, ಏಕೆಂದರೆ ಅವರ ಮೇಲೆ ಕ್ರಿಕೆಟ್ ಶ್ರೀಲಂಕಾ ಒಂದು ವರ್ಷ ನಿಷೇಧ ಹೇರಿತ್ತು. ಆ ಆಟಗಾರ ಕುಸಾಲ್ ಮೆಂಡಿಸ್ (Kusal Mendis).

ಮೆಲ್ಬೋರ್ನ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು. ಈ ಬಾರಿ ನಾಯಕ ಆರೋನ್ ಫಿಂಚ್ ಆರಂಭಿಕ ಸ್ಥಾನಕ್ಕೆ ಮರಳಿದರು. ಆದರೆ ಇದು ಕೂಡ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಲಿಲ್ಲ. ಅವರು ಕೇವಲ 8 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯದ ಆರಂಭಿಕರಿಬ್ಬರೂ ಕೇವಲ 12 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ನಂತರ ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್ ಅನ್ನು ವಹಿಸಿಕೊಂಡರು, ಆದರೆ ಇಬ್ಬರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಮಾರ್ಕಸ್ ಸ್ಟೊಯಿನಿಸ್ ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.

ವೇಡ್ ಅಬ್ಬರಿಸಿದರು

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾವನ್ನು ಸರಿಯಾದ ಸ್ಕೋರ್‌ಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡರು. ಎಡಗೈ ಬ್ಯಾಟ್ಸ್‌ಮನ್ ಕೇವಲ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಂತೆ 43 ರನ್ ಗಳಿಸಿದರು. ಅವರ ಇನಿಂಗ್ಸ್‌ನ ಆಧಾರದ ಮೇಲೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 154 ರನ್ ಗಳಿಸಿತು. ಶ್ರೀಲಂಕಾ ಪರ ಲಹಿರು ಕುಮಾರ ಮತ್ತು ದುಷ್ಮಂತ ಚಮೀರಾ 2-2 ವಿಕೆಟ್ ಪಡೆದು ಆಸ್ಟ್ರೇಲಿಯ ತಂಡವನ್ನು ದೊಡ್ಡ ಸ್ಕೋರ್ ತಲುಪದಂತೆ ತಡೆದರು.

ಕುಸಾಲ್ ಮೆಂಡಿಸ್ ಸ್ಟಾರ್

ಈ ಸ್ಕೋರ್ ಕೂಡ ಶ್ರೀಲಂಕಾಗೆ ಸವಾಲಾಗಿ ಪರಿಣಮಿಸಿದ್ದು, ತಂಡ 71 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಕುಸಾಲ್ ಮೆಂಡಿಸ್ ಮತ್ತು ನಾಯಕ ದಸುನ್ ಶನಕ ತಂಡವನ್ನು ತಮ್ಮದಾಗಿಸಿಕೊಂಡರು. ಅದೇ ಕುಸಾಲ್ ಮೆಂಡಿಸ್, ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಅಶಿಸ್ತಿನ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಕಳೆದ ತಿಂಗಳು, ಶ್ರೀಲಂಕಾ ಮಂಡಳಿಯು ಈ ನಿಷೇಧವನ್ನು 6 ತಿಂಗಳೊಳಗೆ ಕೊನೆಗೊಳಿಸಿತು ಮತ್ತು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತಂಡದಲ್ಲಿ ಸ್ಥಾನ ನೀಡಿತು.

ಆರಂಭಿಕರಾಗಿ ಬಂದ ಮೆಂಡಿಸ್ ಕಠಿಣ ಪರಿಸ್ಥಿತಿಯಲ್ಲಿ ತಾಳ್ಮೆಯ ಇನಿಂಗ್ಸ್ ಆಡಿ ಉತ್ತಮ ಅರ್ಧಶತಕ ಗಳಿಸಿದರು. ಐದನೇ ವಿಕೆಟ್‌ಗೆ ನಾಯಕ ದಸುನ್ ಶನಕ ಅವರೊಂದಿಗೆ 83 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಕೊನೆಯ ಓವರ್‌ನಲ್ಲಿ ಶ್ರೀಲಂಕಾಕ್ಕೆ 9 ರನ್‌ಗಳ ಅಗತ್ಯವಿತ್ತು, ಇದರಲ್ಲಿ ನಾಯಕ ಶನಕ ಒಂದು ಸಿಕ್ಸರ್ ಸೇರಿದಂತೆ 8 ರನ್ ಗಳಿಸಿದರು. ಆದರೆ ಅವರು ನಾಲ್ಕನೇ ಎಸೆತದಲ್ಲಿ ಔಟಾದರು, ಆದರೆ ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ. ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು. ಮೆಂಡಿಸ್ 58 ಎಸೆತಗಳಲ್ಲಿ 68 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಮರಳಿದರು.

ಇದನ್ನೂ ಓದಿ:IND vs WI: 3ನೇ ಟಿ20ಯಲ್ಲಿ ಬುಮ್ರಾ ದಾಖಲೆ ಮುರಿಯುವ ತವಕದಲ್ಲಿ ಯಜುವೇಂದ್ರ ಚಹಲ್..!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ