AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಇಂದಿನಿಂದ ಸೂಪರ್ 12 ಹಂತ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮುಖಾಮುಖಿ

ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದಿನಿಂದ ಆರಂಭವಾಗಲಿರುವ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆತಿಥೇಯ ಆಸ್ಟ್ರೇಲಿಯಾ (NZ vs AUS) ತಂಡಗಳು ಮುಖಾಮುಖಿ ಆಗಲಿದೆ.

T20 World Cup: ಇಂದಿನಿಂದ ಸೂಪರ್ 12 ಹಂತ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮುಖಾಮುಖಿ
NZ vs AUS T20 World Cup
TV9 Web
| Edited By: |

Updated on: Oct 22, 2022 | 7:51 AM

Share

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೆ (T20 World Cup) ಇಂದು ಅಧಿಕೃತ ಚಾಲನೆ ಸಿಗಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದಿನಿಂದ ಆರಂಭವಾಗಲಿರುವ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆತಿಥೇಯ ಆಸ್ಟ್ರೇಲಿಯಾ (NZ vs AUS) ತಂಡಗಳು ಮುಖಾಮುಖಿ ಆಗಲಿದೆ. ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಅಂತೆಯೆ ಪರ್ತ್​ ಸ್ಟೇಡಿಯಂನಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನವನ್ನು (ENG vs AFG) ಎದುರಿಸಲಿದೆ. ಎರಡೂ ಕದನ ಸಾಕಷ್ಟು ರೋಚಕೆ ಸೃಷ್ಟಿಸಿದ್ದು ಹೈವೋಲ್ಟೇಜ್ ಪಂದ್ಯ ಆಗುವುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯಾಕ್ಕೆ ತವರು ಮೈದಾನ ಎಂಬುದೆ ದೊಡ್ಡ ಬಲ. ನಾಯಕ ಆ್ಯರೋನ್ ಫಿಂಚ್ ಫಾರ್ಮ್ ಕಂಡುಕೊಂಡಿದ್ದು ಆಸೀಸ್ ಪಾಳಯದಲ್ಲಿ ಸಂತಸ ಮೂಡಿಸಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ ಹಾಗೂ ಜೋಶ್ ಹ್ಯಾಜ್ಲೆವುಡ್ ಆಸೀಸ್ ತಂಡದ ಬೌಲಿಂಗ್ ಅಸ್ತ್ರ.

ಇತ್ತ ನ್ಯೂಜಿಲೆಂಡ್ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಿಲ್ಲವಾದರೂ ಕಡೆಗಣಿಸುವಂತಿಲ್ಲ. ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೆ, ಫಿನ್ ಅಲೆನ್, ಗ್ಲೆನ್ ಪಿಲಿಪ್ಸ್ ಮುಖ್ಯ ಬ್ಯಾಟರ್​ಗಳಾಗಿದ್ದಾರೆ. ಇಶ್ ಸೋಧಿ, ಟಿಮ್ ಸೌದೀ, ಟ್ರೆಂಟ್ ಬೌಲ್ಟ್ ಹಾಗೂ ಲೂಕಿ ಫರ್ಗುಸನ್ ಬೌಲರ್​​ಗಳಾಗಿದ್ದಾರೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಸೂಪರ್ 12 ಹಂತದ ಮೊದಲ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30ಕ್ಕೆ ಶುರುವಾಗಲಿದೆ.

ಇದನ್ನೂ ಓದಿ
Image
T20 World Cup: ಟಿ20 ವಿಶ್ವಕಪ್ 7 ಆವೃತ್ತಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು ಗೊತ್ತಾ?
Image
T20 World Cup 2022: ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್- 12 ಸುತ್ತಿಗೆ ಎಂಟ್ರಿಕೊಟ್ಟ 4 ತಂಡಗಳಿವು
Image
SCO Vs ZIM: ಸೂಪರ್-12 ಸುತ್ತಿಗೆ ಎಂಟ್ರಿಕೊಟ್ಟ ಜಿಂಬಾಬ್ವೆ; ಟೀಂ ಇಂಡಿಯಾ ಇರುವ ಗುಂಪಿಗೆ ಎಂಟ್ರಿ
Image
T20 World Cup 2022: ಈ ಬಾರಿಯ ಟಿ20 ವಿಶ್ವಕಪ್​ ಆಡುತ್ತಿರುವ ಅತ್ಯಂತ ಹಿರಿಯ ಕ್ರಿಕೆಟಿಗರಿವರು..

ಇಂಗ್ಲೆಂಡ್ vs ಅಫ್ಘಾನಿಸ್ತಾನ:

ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ. ಜೋಸ್ ಬಟ್ಲರ್ ಆಂಗ್ಲರ ತಂಡವನ್ನು ಮುನ್ನಡೆಸುತ್ತಿದ್ದು ಇವರಿಗೆ ಇದೊಂದು ಅಗ್ನಿ ಪರೀಕ್ಷೆ. ಬೆನ್ ಸ್ಟೋಕ್ಸ್, ಅಲೆಕ್ಸ್ ಹೇಲ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್​ಸ್ಟೋನ್, ಮೊಯೀಲ್ ಅಲಿ ಯಂತಹ ಸ್ಫೋಟಕ ಬ್ಯಾಟರ್​ಗಳು ತಂಡದಲ್ಲಿದ್ದಾರೆ. ಜೊತೆಗೆ ಮಾರ್ಕ್​ ವುಡ್, ಆದಿಲ್ ರಶೀದ್, ಕ್ರಿಸ್ ವೋಲ್ಸ್ ಹಾಗೂ ಕ್ರಿಸ್ ಜಾರ್ಡನ್​ ರಂತಹ ಮಾರಕ ಬೌಲರ್​ಗಳಿದ್ದಾರೆ.

ಇತ್ತ ಅಫ್ಘಾನಿಸ್ತಾನ ತಂಡವನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಯಾಕೆಂದರೆ ಯಾವುದೇ ತಂಡದ ವಿರುದ್ಧ ಇವರು ತಿರುಗಿ ಬೀಳುವ ಸಾಮರ್ಥ್ಯ ಹೊಂದಿದ್ದಾರೆ. ಮೊಹಮ್ಮದ್ ನಬಿ ತಂಡವನ್ನು ಮುನ್ನಡೆಸುತ್ತಿದ್ದು, ಹಜ್ರತುಲ್ಲ ಜಜಾಯ್, ರಹ್ಮಾನುಲ್ಲ ಗುರ್ಬಜ್, ಇಬ್ರಾಯೀಂ ಜರ್ದನ್, ನಜೀಬುಲ್ಲ ಜರ್ದನ್ ಸ್ಫೋಟಕ ಬ್ಯಾಟರ್​ಗಳಾಗಿದ್ದಾರೆ. ಬೌಲಿಂಗ್​ನಲ್ಲೂ ಅಫ್ಘಾನ್ ಬಲಿಷ್ಠವಾಗಿದ್ದು ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹ್ಮಾನ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ 4:30ಕ್ಕೆ ಶುರು ಆಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ ಹಾಗೂ ಡಿಸ್ನಿ+ ಹಾಟ್​​ಸ್ಟಾರ್​​ನಲ್ಲಿ ನೇರಪ್ರಸಾರ ಕಾಣಲಿದೆ.