14 ವರ್ಷಗಳ ಹಿಂದೆ ಈ ದಿನ; ಟಿ20 ಕ್ರಿಕೆಟ್​ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

ಟಿ 20 ಕ್ರಿಕೆಟ್​ನಲ್ಲಿ ಇದುವರೆಗೆ 14 ಹ್ಯಾಟ್ರಿಕ್ ದಾಖಲಿಸಲಾಗಿದೆ. ಟಿ 20 ಕ್ರಿಕೆಟ್​ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಿಸಿದ್ದು ಬ್ರೆಟ್​ ಲೀ. ಆದಾಗ್ಯೂ, ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸಾಧಿಸಿದರು.

14 ವರ್ಷಗಳ ಹಿಂದೆ ಈ ದಿನ; ಟಿ20 ಕ್ರಿಕೆಟ್​ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?
ಬ್ರೆಟ್ ಲೀ
Follow us
TV9 Web
| Updated By: ಪೃಥ್ವಿಶಂಕರ

Updated on: Sep 16, 2021 | 8:57 PM

ಆಸ್ಟ್ರೇಲಿಯಾದ ಈ ಬೌಲರ್​ ತನ್ನ ಪ್ರವರ್ಧಮಾನ ದಿನಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಇನ್ನಿಲ್ಲದಂತೆ ತೊಂದರೆ ಕೊಟ್ಟಿದ್ದ. ವೇಗದ ಬೌಲರ್ ಆಗಿ ಮಿಂಚಿದ ಈ ಬೌಲರ್ ಅನೇಕರಿಗೆ ದುಃಸ್ವಪ್ನವಾಗಿ ಉಳಿದಿದ್ದರು. ಈ ಬೌಲರ್ ನಿಖರವಾಗಿ 14 ವರ್ಷಗಳ ಹಿಂದೆ ಈ ದಾಖಲೆ ನಿರ್ಮಿಸಿದ್ದು, ಟಿ 20 ಯಲ್ಲಿ ಮೊದಲ ಬೌಲರ್ ಎನಿಸಿಕೊಂಡರು. ಆತ ಯಾರು ಗೊತ್ತಾ ..? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ. ಟಿ 20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾದ ವೇಗಿ ಬಾಂಗ್ಲಾದೇಶದ ವಿರುದ್ಧ ಮೊದಲ ಟಿ 20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದರು. ಇಂಗ್ಲೆಂಡ್‌ನಲ್ಲಿ ಚೊಚ್ಚಲ ಟಿ 20 ವಿಶ್ವಕಪ್‌ನ ಭಾಗವಾಗಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ನಡುವೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಪಂದ್ಯ ನಡೆಯಿತು.

ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 123 ರನ್ ಗಳಿಸಿತು. ಇನ್ನಿಂಗ್ಸ್​ನ 17 ನೇ ಓವರ್​ನಲ್ಲಿ ಶಕೀಬ್ ಅಲ್ ಹಸನ್, ಮುಷರಫ್ ಮೊರ್ತಾಜಾ ಮತ್ತು ಅಲೋಕ್ ಕಪಾಲಿ ಅವರನ್ನು ಪೆವಿಲಿಯನ್​ಗೆ ಬ್ರೆಟ್ ಲೀ ಕಳುಹಿಸುವುದರ ಮೂಲಕ ಈ ಸಾಧನೆ ಮಾಡಿದರು.

ಆಸ್ಟ್ರೇಲಿಯಾದ ವೇಗಿ ತನ್ನ ನಾಲ್ಕು ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ಆಸ್ಟ್ರೇಲಿಯಾ 37 ಎಸೆತಗಳು ಬಾಕಿ ಇರುವಾಗ ಕೇವಲ ಒಂದು ವಿಕೆಟ್​ನಿಂದ ಪಂದ್ಯವನ್ನು ಗೆದ್ದುಕೊಂಡಿತು. ಮ್ಯಾಥ್ಯೂ ಹೇಡನ್ ಮತ್ತು ರಿಕಿ ಪಾಂಟಿಂಗ್ ಕ್ರಮವಾಗಿ ಅಜೇಯ 73 ಮತ್ತು 6 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ ಗೆಲುವು ನೀಡಿದರು.

ಟಿ 20 ಕ್ರಿಕೆಟ್​ನಲ್ಲಿ ಇದುವರೆಗೆ 14 ಹ್ಯಾಟ್ರಿಕ್ ದಾಖಲಿಸಲಾಗಿದೆ. ಟಿ 20 ಕ್ರಿಕೆಟ್​ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಿಸಿದ್ದು ಬ್ರೆಟ್​ ಲೀ. ಆದಾಗ್ಯೂ, ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸಾಧಿಸಿದರು. ಹಾಗೆಯೇ ಟಿ 20 ಕ್ರಿಕೆಟ್​ನಲ್ಲಿ, ಶ್ರೀಲಂಕಾದ ಮಿಸ್ಟರಿ ಬೌಲರ್ ಲಸಿತ್ ಮಾಲಿಂಗ ಎರಡು ಹ್ಯಾಟ್ರಿಕ್ ಗಳಿಸಿದ ಏಕೈಕ ಬೌಲರ್. ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. 2019 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಈ ಸಾಧನೆಯ ಪಟ್ಟಿಯಲ್ಲಿ ಭಾರತೀಯ ಬೌಲರ್ ದೀಪಕ್ ಚಹರ್ ಕೂಡ ಇದ್ದಾರೆ. ಅವರು ಕಿರು ರೂಪದಲ್ಲಿ ಹ್ಯಾಟ್ರಿಕ್ ಗಳಿಸಿದ ಏಕೈಕ ಭಾರತೀಯ ಬೌಲರ್.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ